ಧಾರವಾಡ ಕಟ್ಟಡ ಕುಸಿತ: ಕಟ್ಟಡ ಮಾಲೀಕರು ಪೊಲೀಸರಿಗೆ ಶರಣು

ಆರೋಪಿಗಳಾದ ರವಿ ಸಬರದ್, ಬಸವರಾಜ ನಿಗದಿ, ಗಂಗಣ್ಣ ಶಿಂತ್ರಿ ಮತ್ತು ಮಹಾಬಳೇಶ್ವರ ಪುರದಗುಡಿ ಅವರು ಗುರುವಾರ ತಡರಾತ್ರಿ ಉಪನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. 

Last Updated : Mar 22, 2019, 10:36 AM IST
ಧಾರವಾಡ ಕಟ್ಟಡ ಕುಸಿತ: ಕಟ್ಟಡ ಮಾಲೀಕರು ಪೊಲೀಸರಿಗೆ ಶರಣು title=

ಧಾರವಾಡ: ಮಾರ್ಚ್ 19ರಂದು ಇಲ್ಲಿನ ಕುಮಾರೇಶ್ವರನಗರದಲ್ಲಿ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಸುಮಾರು 15 ಮಂದಿ ಸಾವನ್ನಪ್ಪಿದ್ದು, ಕಟ್ಟಡದ ಮಾಲಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಟ್ಟಡ ಕುಸಿತ ಘಟನೆ ಸಂಬಂಧ ಆರು ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅವರಲ್ಲಿ ಕಟ್ಟಡದ ಎಂಜಿನಿಯರ್ ವಿವೇಕ್ ಪವಾರ್ ಅವರನ್ನು ಗುರುವಾರವೇ ಪೊಲೀಸರು ಬಂಧಿಸಿದ್ದರು. ಉಳಿದ ನಾಲ್ವರು ಆರೋಪಿಗಳಾದ ರವಿ ಸಬರದ್, ಬಸವರಾಜ ನಿಗದಿ, ಗಂಗಣ್ಣ ಶಿಂತ್ರಿ ಮತ್ತು ಮಹಾಬಳೇಶ್ವರ ಪುರದಗುಡಿ ಅವರು ಗುರುವಾರ ತಡರಾತ್ರಿ ಉಪನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. 

ಕಟ್ಟಡದ ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ಇನ್ನೂ ಪ್ರಗತಿಯಲ್ಲಿದ್ದು, ಇಂದು ಬೆಳಿಗ್ಗೆಯೂ ಸಹ ಓರ್ವನನ್ನು ರಕ್ಷಿಸಲಾಗಿದೆ. 

ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಧಾರವಾಡ ಉಪ ಆಯುಕ್ತೆ ದೀಪಾ ಚೋಲನ್, ಗುರುವಾರ  ಇಬ್ಬರನ್ನು ರಕ್ಷಿಸಿದ್ದೆವು. ಕಟ್ಟಡದ ಅವಶೇಷಗಳಡಿ ಇನ್ನೂ ಮೂವರು ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ನಿಶ್ಯಕ್ತಿಯಿಂದ ಚೇತರಿಸಿಕೊಳ್ಳಲು ಅವರಿಗೆ ಆಕ್ಸಿಜನ್ ಹಾಗೂ ಓಆರ್ ಎಸ್ ನೀಡಲಾಗಿದೆ. SDRF ಮತ್ತು NDRF ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ  ಎಸ್​ಡಿಆರ್​ಎಫ್​​ ಮತ್ತು 140 ಎನ್​​​ಡಿಆರ್​​ಎಫ್​​ ಸಿಬ್ಬಂದಿ, 250 ಮಂದಿ ಅಗ್ನಿಶಾಮಕ ಸಿಬ್ಬಂದಿ, 3 ಸಾವಿರಕ್ಕೂ ಹೆಚ್ಚು ಪೊಲೀಸರು, 200 ಸ್ವಯಂ ಸೇವಕರು ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ, ಆಂಬುಲೆನ್ಸ್ ಗಳು ಮತ್ತು ವೈದ್ಯರ ರಂದವೂ ಸ್ಥಳದಲ್ಲಿ ಠಿಕಾಣಿ ಹೂಡಿದ್ದು, ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಮುಂದಾಗಿದ್ದಾರೆ. 

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ ಸಹ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಸ್ಪಕ್ಷಪಾತ ರೀತಿಯಲ್ಲಿ ಪ್ರಕರಣದ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಚಿಕಿತ್ಸೆಗೆ ಅಗತ್ಯವಿರುವವರಿಗೆ 1 ಲಕ್ಷ ರೂ. ಪರಿಹಾರವನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

Trending News