ಇಂದಿನಿಂದ ಪಡಿತರ ಚೀಟಿ ಇಲ್ಲದವರಿಗೂ ಪಡಿತರ ಸಾ‌ಮಗ್ರಿ ವಿತರಣೆ

ಕೇಂದ್ರ ಸರ್ಕಾರ ಪಡಿತರ ಚೀಟಿ ಇಲ್ಲದವರಿಗೆ ರೇಷನ್ ನೀಡುವಂತ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು. ನಮ್ಮ ರಾಜ್ಯದಲ್ಲಿ ಇವತ್ತಿನಿಂದ ಪಡಿತರ ಚೀಟಿ ಇಲ್ಲದವರಿಗೆ ರೇಷನ್ ವಿತರಣೆ ಮಾಡುವಂತಹ ಕಾರ್ಯ ಪ್ರಾರಂಭವಾಗಿದೆ.  

Last Updated : May 26, 2020, 01:21 PM IST
ಇಂದಿನಿಂದ ಪಡಿತರ ಚೀಟಿ ಇಲ್ಲದವರಿಗೂ ಪಡಿತರ ಸಾ‌ಮಗ್ರಿ ವಿತರಣೆ title=

ಬೆಂಗಳೂರು: ಕಟ್ಟ ಕಡೆಯ ಮನುಷ್ಯನಿಗೂ ಹಾಗೂ ಪ್ರತಿಯೊಬ್ಬರಿಗೂ ಆಹಾರ  ತಲುಪಬೇಕು ಅನ್ನೋದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಚಿಂತನೆಯಾಗಿತ್ತು.  ಇವತ್ತು ಇದು ಯಶಸ್ವಿಯಾಗಿ ಪಾಲನೆ ಆಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ (K Gopalaiah) ತಿಳಿಸಿದರು.

ಕೇಂದ್ರ ಸರ್ಕಾರ ಪಡಿತರ ಚೀಟಿ (Ration Card) ಇಲ್ಲದವರಿಗೆ ರೇಷನ್ ನೀಡುವಂತ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು. ನಮ್ಮ ರಾಜ್ಯದಲ್ಲಿ  ಇವತ್ತಿನಿಂದ ಪಡಿತರ ಚೀಟಿ ಇಲ್ಲದವರಿಗೆ ರೇಷನ್ ವಿತರಣೆ ಮಾಡುವಂತಹ ಕಾರ್ಯ ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ಇಂದು ಆಹಾರ ಸಚಿವರು  ನ್ಯಾಯಬೆಲೆ ಅಂಗಡಿಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. 

ನೀವೂ ಸಹ ಪಡಿತರ ಚೀಟಿ ಹೊಂದಿಲ್ಲವೇ, ಹಾಗಿದ್ದರೆ ಆನ್‌ಲೈನ್‌ನಲ್ಲಿ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ

ಈ ವೇಳೆ ಮಾತನಾಡಿದ ಸಚಿವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದ ಮೇರೆಗೆ, ಪಡಿತರ ಚೀಟಿ ಇಲ್ಲದವರಿಗೆ ಎರಡು ತಿಂಗಳು 10 ಕೆಜಿ ಅಕ್ಕಿ ಕೊಡುವಂತ ಕಾರ್ಯ ಇವತ್ತು ಪ್ರಾರಂಭವಾಗಿದೆ. ಹಾಗಾಗಿ ನಾನು ಇವತ್ತು ನ್ಯಾಯಬೆಲೆ ಅಂಗಡಿಗಳಿಗೆ ಬೇಟಿ ನೀಡಿ ನ್ಯಾಯಬೆಲೆ ಅಂಗಡಿಗಳು ತೆರೆದಿದ್ಯಾ, ರೇಷನ್ ವಿತರಣೆ ಸರಿಯಾಗಿ ನಡೆಯುತ್ತಿದ್ಯಾ ಎಂದು ಪರಿಶೀಲನೆ ನಡೆಸಿದ್ದೇನೆ. ಕಟ್ಟಕಡೆಯ ಮನುಷ್ಯನಿಗೂ ಆಹಾರ ಸಿಗಬೇಕು ಅನ್ನೋದು ನಮ್ಮ ಸರ್ಕಾರದ ಮಹತ್ವದ ಗುರಿಯಾಗಿತ್ತು. ಅದು ಇವತ್ತು ನೆರವೇರಿದೆ ಎಂದರು.

ಮನೆಯಿಂದಲೇ ಕೆಲವೇ ನಿಮಿಷಗಳಲ್ಲಿ ನಿಮ್ಮ ರೇಷನ್ ಕಾರ್ಡನ್ನು ಆಧಾರ್‌ಗೆ ಹೀಗೆ ಲಿಂಕ್ ಮಾಡಿ

ಇನ್ನು ಈ ತಿಂಗಳು ಪ್ರತಿಯೊಬ್ಬ ವ್ಯಕ್ತಿಗೆ 5ಕೆಜಿ ಅಕ್ಕಿ, ಹಾಗೇ ಮುಂದಿನ ತಿಂಗಳು 1ನೇ ತಾರೀಖಿನಿಂದ ಪ್ರತಿಯೊಬ್ಬ ವ್ಯಕ್ತಿಗೆ 5ಕೆಜಿ ಅಕ್ಕಿ , ಒಂದು ಕುಟುಂಬಕ್ಕೆ 2 ಕೆ.ಜಿ ಕಡಲೆಕಾಳು ಕೊಡಲಾಗುತ್ತೆ.  ಈ ಯೋಜನೆ ಯಾರ ಬಳಿ ರೇಷನ್ ಕಾರ್ಡ್ ಇಲ್ಲ ಅವರಿಗೆಲ್ಲಾ ಅನ್ವಯವಾಗಲಿದೆ. ಆಧರ್ ಕಾರ್ಡ್ ತೋರಿಸಿ ವಲಸಿಗರು, ಕೂಲಿ ಕಾರ್ಮಿಕರು, ಇಲ್ಲಿ ಇರುವಂಥವರು, ಕೂಡ ರೇಷನ್ ಪಡೆಯಬಹುದು ಎಂದು ತಿಳಿಸಿದರು.

Aadhaar ಲಿಂಕ್ ಇಲ್ಲದಿದ್ದರೂ ಸೆಪ್ಟೆಂಬರ್ ಅಂತ್ಯದವರೆಗೆ ಸಿಗಲಿದೆ ಈ ಸೌಲಭ್ಯ

4 ಕೋಟಿಗಿಂತ ಹೆಚ್ಚಿನ ಜನಕ್ಕೆ ರೇಷನ್ ಕೊಡುತ್ತಿದ್ದು, ಅದರಲ್ಲಿ ಶೇಕಡಾ 10ರಷ್ಟು ಕೇಂದ್ರ ಸರ್ಕಾರ ಕೊಡಬೇಕು ಅಂತಾಗಿತ್ತು. ಈಗಾಗಲೇ ಕೇಂದ್ರ ಸರ್ಕಾರ ಅಕ್ಕಿಯನ್ನು ಕಳುಹಿಸಿಕೊಟ್ಟಿದೆ. ಕಡಲೆಕಾಳು ನಿನ್ನೆಯಿಂದ ಬರುತ್ತಿದ್ದು ಅದನ್ನ ಮುಂದಿನ ತಿಂಗಳು 5ಕೇಜಿ ಅಕ್ಕಿ ಜೊತೆಗೆ ಕೊಡಲಾಗುತ್ತೆ. ಯಾರೀಗೆ ಊಟಕ್ಕೆ ತೊಂದರೆಯಾಗಿತ್ತು ಅವರಿಗೆ ನಮ್ಮ ಸರ್ಕಾರ ಸ್ಪಂದಿಸಿದೆ. ಹೊಸ ಪಡಿತರ ಅರ್ಜಿಗಳನ್ನ ಕೊರೋನ ಲಾಕ್ ಡೌನ್ ಮುಗಿದ ನಂತ್ರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
 

Trending News