ಡಿಕೆಶಿ ಹೆಣ್ಣು ಮಗಳನ್ನು ಕಿಡ್ನಾಪ್ ಮಾಡಿ ಆಸ್ತಿ ಲಪಟಾಯಿಸಿರುವುದು ನಿಜ: ಡಿಕೆಶಿಗೆ ತಿರುಗೇಟು ಕೊಟ್ಟ HDK

ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಹೆಣ್ಣು ಮಗಳ ಆಯಾ ವ್ಯಕ್ತಿ ಕಿಡ್ನಾಪ್ ಮಾಡಿ, ಅವರ ಪೋಷಕರನ್ನು ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ಇದು 1996-1997ರಲ್ಲಿ ನಡೆದ ಘಟನೆ. ನನ್ನ ಬಳಿ ಅದರ ದಾಖಲೆಗಳಿವೆ. ಒಂದು ಮಗುವನ್ನು ಕಿಡ್ನಾಪ್ ಮಾಡಿ ಏನು ಮಾಡಿದರು ಎನ್ನುವುದು ತಿಳಿದಿದೆ ಎಂದರು.

Written by - Prashobh Devanahalli | Last Updated : Apr 16, 2024, 08:04 PM IST
    • ಹೆಣ್ಣುಮಕ್ಕಳನ್ನು ಅಪಹರಿಸಿ ಅವರ ಅಪ್ಪ-ಅಮ್ಮನಿಂದ ಜಮೀನು ಲಪಟಾಯಿಸಿರುವುದು ನಿಜ
    • ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ
    • ಡಿ.ಕೆ ಶಿವಕುಮಾರ್ ವಿರುದ್ಧ ಹೆಚ್ಡಿಕೆ ನೇರ ಆರೋಪ
ಡಿಕೆಶಿ ಹೆಣ್ಣು ಮಗಳನ್ನು ಕಿಡ್ನಾಪ್ ಮಾಡಿ ಆಸ್ತಿ ಲಪಟಾಯಿಸಿರುವುದು ನಿಜ: ಡಿಕೆಶಿಗೆ ತಿರುಗೇಟು ಕೊಟ್ಟ HDK title=
File Photo

ಬೆಂಗಳೂರು: ಡಿ.ಕೆ ಶಿವಕುಮಾರ್ ಅವರು ಹೆಣ್ಣುಮಕ್ಕಳನ್ನು ಅಪಹರಿಸಿ ಅವರ ಅಪ್ಪ-ಅಮ್ಮನಿಂದ ಜಮೀನು ಲಪಟಾಯಿಸಿರುವುದು ನಿಜ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಹೆಣ್ಣು ಮಗಳ ಆಯಾ ವ್ಯಕ್ತಿ ಕಿಡ್ನಾಪ್ ಮಾಡಿ, ಅವರ ಪೋಷಕರನ್ನು ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ಇದು 1996-1997ರಲ್ಲಿ ನಡೆದ ಘಟನೆ. ನನ್ನ ಬಳಿ ಅದರ ದಾಖಲೆಗಳಿವೆ. ಒಂದು ಮಗುವನ್ನು ಕಿಡ್ನಾಪ್ ಮಾಡಿ ಏನು ಮಾಡಿದರು ಎನ್ನುವುದು ತಿಳಿದಿದೆ ಎಂದರು.

ಇದನ್ನೂ ಓದಿ: RCB ಮಾಲೀಕ ಯಾರು ಗೊತ್ತಾ? ಇವರ ನಿವ್ವಳ ಮೌಲ್ಯ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿದ್ದ ಜಮೀನು ಬರೆಸಿಕೊಳ್ಳಲು ನೀವು ಏನೆಲ್ಲಾ ಮಾಡಿದರಿ ಎನ್ನುವ ಮಾಹಿತಿಯೂ ನನ್ನ ಬಳಿ ಇದೆ. ಭೂಮಿ ಖರೀದಿ ಮಾಡುತ್ತೇವೆ ಚೆಕ್‌ ಕೊಟ್ಟಿದ್ದೀರಿ. ಆಮೇಲೆ ನೀವು ಕೊಟ್ಟ ಚೆಕ್‌ ನಗದು ಆಗಿಲ್ಲ. ಚೆಕ್ ಡಿಸ್ ಆನರ್ ಮಾಡಿರುವ ದಾಖಲೆ ಇದೆ. ಎಲ್ಲ ಇಟ್ಟಿದ್ದೇನೆ ಎಂದರು.

ಸೋಮವಾರದ ದಿನ ಮೊದಲ ಬಾರಿಗೆ ಈ ವಿಷಯವನ್ನು ಹೇಳಿದ್ದೇನೆ. ಅವರು ನನ್ನನ್ನು ಚರ್ಚೆಗೆ ಕರೆದಿದ್ದಾರೆ. ದಯಮಾಡಿ ಬನ್ನಿ ಚರ್ಚೆಗೆ, ನಾನೂ ಸಿದ್ದನಿದ್ದೇನೆ. ನಿಮ್ಮ ಬಗ್ಗೆ ಕಂತೆಗಟ್ಟಲೇ ದಾಖಲೆ ಇಟ್ಟಿದ್ದೇನೆ ಎಂದು ಅವರು ಸವಾಲು ಹಾಕಿದರು.

ನಿಮ್ಮ ಬಗ್ಗೆ ಎಷ್ಟು ಬೇಕಾದರೂ ಹೇಳಬಹುದು. ದಾಖಲೆಗಳು ಬೇಕಾದಷ್ಟಿವೆ. ಈಗ ಶಾಂತಿನಗರ ಹೌಸಿಂಗ್ ಸೊಸೈಟಿ ವಿಷಯಕ್ಕೆ ಬನ್ನಿ.. ಒರಿಜಿನಲ್‌ ಸೊಸೈಟಿಯನ್ನೇ ಡೂಪ್ಲಿಕೇಟ್ ಮಾಡಿ, ಡೂಪ್ಲಿಕೇಟ್ ಸೊಸೈಟಿಯನ್ನೇ ಒರಿಜಿನಲ್ ಮಾಡಿಕೊಳ್ಳಲಿಲ್ವಾ..? ಈ ದೇಶದಲ್ಲಿನ ಸಂಸ್ಥೆಗಳನ್ನು ದುಡ್ಡಿನ ಮೂಲಕ ಕೊಂಡುಕೊಂಡು ಯಾವಾಗ ಏನು ಬೇಕಾದರೂ ಏನು ಬೇಕಾದರೂ ಮಾಡುವ ವ್ಯಕ್ತಿ ಡಿ.ಕೆ.ಶಿವಕುಮಾರ್‌ ಎಂದು ಕುಟುಕಿದರು.

ಒಕ್ಕಲಿಗ ನಾಯಕತ್ವದ ತೆಗೆದುಕೊಳ್ಳೋದಕ್ಕೆ ಕುಮಾರಸ್ವಾಮಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಡಿಕೆಶಿ ಟೀಕಿಸಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರ ಕೊಟ್ಟ ಕುಮಾರಸ್ವಾಮಿ ಅವರು;  ನಾನು ಒಕ್ಕಲಿಗ ನಾಯಕತ್ವ ತೆಗೋತಿನಿ ಎಂದು ಹೇಳಿದ್ದೀನಾ..? ನಾನು ರಾಜಕಾರಣದಲ್ಲಿ ನನ್ನ ಕೈಲಾದ ಮಟ್ಟಿಗೆ ಜಾತಿಯನ್ನು ಮೀರಿ ಜನರ ಸೇವೆ ಮಾಡುತ್ತಿದ್ದೇನೆ. ರಾಜ್ಯದ ನಾನಾ ಕಡೆಗಳಿಂದ ಜನರು ನನ್ನನ್ನು ಹುಡುಕಿಕೊಂಡು ಬರುತ್ತಾರೆ. ನನ್ನ ಕೈಲಾಗುವಷ್ಟನ್ನೇ ಮಾಡುತ್ತಿದ್ದೇನೆ ಎಂದರು.

ಕುಮಾರಸ್ವಾಮಿ ಸುಳ್ಳು ಹೇಳುತ್ತಾರೆ ಎಂದು ಡಿಕೆಶಿ ಮಾಡಿರುವ ಟೀಕೆಗೆ ಖಾರವಾಗಿ ಟಾಂಗ್‌ ಕೊಟ್ಟ ಅವರು, ಅವರು ಸತ್ಯ ಹರಿಶ್ಚಂದ್ರನ ಮೊಮ್ಮಗ. ದೊಡ್ಡಾಲಹಳ್ಳಿಯಲ್ಲಿ ಹುಟ್ಟುವಾಗ ಸತ್ಯ ಹರಿಶ್ಚಂದ್ರ ಬಂದು, ʼನೀನು ಸತ್ಯನೇ ನುಡಿಬೇಕುʼ ಎಂದು ಹೇಳಿ  ಹೋಗಿದ್ದಾರೆ. ನಮಗೆ ಸುಳ್ಳು ಹೇಳಿ ಎಂದು ಹೇಳಿದ್ದಾರೆ ಎಂದು ತಿರುಗೇಟು ಕೊಟ್ಟರು.

ಹೆತ್ತ ತಾಯಿ, ಪತ್ನಿ, ಮಗಳನ್ನೇ ನಂಬದ ಡಿಕೆಶಿ!

ನನ್ನ ಹೇಳಿಕೆ ಬಗ್ಗೆ ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿರುವ ಶಿವಕುಮಾರ್‌ ತನ್ನ ಹೆತ್ತ ತಾಯಿಯನ್ನೇ ಅಪಮಾನಿಸಿದ್ದಾರೆ. ಖಾಸಗಿ ವಾಹನಿಯೊಂದರಲ್ಲಿ ಮಾತನಾಡಿರುವ ಅವರು, ಹೆತ್ತ ತಾಯಿಯ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ನೋಡಿ.. ಆ ಮಹಾನುಭಾವ. ಅವರಿಗೆ ಸಲಹೆ ಬೇರೆ ಕೊಡುತ್ತಾರೆ ಎಂದು ಕಟುವಾಗಿ ಟೀಕಿಸಿದರು.

ಪ್ರತೀ ಕುಟುಂಬದಲ್ಲಿ ಹೆತ್ತ ತಾಯಿ, ಹೆಂಡತಿ, ಮಗಳ ಮೇಲೆ ಹೇಗೆ ಕಣ್ಣಿಟ್ಟಿರಬೇಕು ಎಂದು ಆ ವ್ಯಕ್ತಿ ಹೇಳಿದ್ದಾರೆ. ಮನೆಯಿಂದ ಹೊರಗೆ ಹೋಗಿ ಬರುವವರೆಗೂ ಅವರ ಮೇಲೆ ಕಣ್ಣಿಟ್ಟಿರಬೇಕು. ಅವರ ಚಟುವಟಿಕೆಗಳ ಮೇಲೆಯೂ ಕಣ್ಣಿಟ್ಟಿರಬೇಕು ಎಂದು ಹೇಳುತ್ತಾರೆ  ಮಹಾನುಭಾವ. ಇದು ಆ ವ್ಯಕ್ತಿಯ ಮಾನಸಿಕತೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದನ್ನು ಇಂಥ ವ್ಯಕ್ತಿಯಿಂದ ಕಲಿಯಬೇಕಾ? ಎಂದು ಕಿಡಿಕಾರಿದರು.

ಇದನ್ನೂ ಓದಿ: ಕಲ್ಲಂಗಡಿ ಹಣ್ಣು ತಿಂದ ಬಳಿಕ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ…

ರಾಹುಲ್ ಗಾಂಧಿಗೆ ಸ್ವಾಗತ

ಮಂಡ್ಯ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುತ್ತಿರುವ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸುತ್ತೇನೆ. ಅವರು ಪ್ರಚಾರಕ್ಕೆ ಬಂದರೆ ತಪ್ಪೇನು? ಬರುವವರನ್ನು ಬೇಡ ಎಂದು ಹೇಳುವುದಕ್ಕೆ ಆಗುತ್ತದೆಯೇ? ರಾಜಕೀಯವಾಗಿ ಪ್ರಚಾರ ಮಾಡಲು ಯಾರು ಬೇಕಾದರೂ ಬರಬಹುದು. ನಮ್ಮದೇನೂ ತಕರಾರಿಲ್ಲ, ಬಂದು ಪ್ರಚಾರ ಮಾಡಲಿ, ಅದರಿಂದ ನನಗೇನೂ ನಷ್ಟ ಇಲ್ಲ ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News