close

News WrapGet Handpicked Stories from our editors directly to your mailbox

ಹಣವಿಲ್ಲವೆಂದು ಶ್ರೀರಾಮುಲು ಹಣದ ಆಮಿಷಕ್ಕೆ ಬಲಿಯಾಗಬೇಡಿ- ಎಚ್ ಡಿ ಕುಮಾರಸ್ವಾಮಿ

    

Updated: Apr 12, 2018 , 02:49 PM IST
ಹಣವಿಲ್ಲವೆಂದು ಶ್ರೀರಾಮುಲು ಹಣದ ಆಮಿಷಕ್ಕೆ ಬಲಿಯಾಗಬೇಡಿ- ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಮೊಳಕಾಲ್ಮೂರದಲ್ಲಿ ಕುಮಾರಪರ್ವ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ  ಹೆಚ್ ಡಿ ಕುಮಾರಸ್ವಾಮಿ "ರಾಮುಲು ಬಳ್ಳಾರಿ ಉದ್ಧಾರ ಮಾಡಿದ್ದು ಆಯ್ತು ಈಗ ಮೊಳಕಾಲ್ನೂರು ಉದ್ಧಾರ ಮಾಡಲು ಬರುತ್ತಿದ್ದಾರೆ ಅವರ ಮಾತಿಗೆ ಮರುಳಾಗಬೇಡಿ, ಇದುವರೆಗೂ  ಅವರ ಆಟ ನೋಡಿದ್ದೀರಿ ಎಂದರು.

ಇನ್ನು ಮುಂದುವರೆದು ಮಾತನಾಡಿದ ಅವರು  ಪಟೇಲ್ ತಿಪ್ಪಸ್ವಾಮಿ ಅವರ ಬಳಿ ಹಣವಿಲ್ಲವೆಂದು ರಾಮುಲು ಹಣದ ಅಮಿಷಕ್ಕೆ ಬಲಿಯಾಗಬೇಡಿ. ಬಡವರಾದರು ಅವರು ನಿಮ್ನ ಜೊತೆಯಲ್ಲಿರುತ್ತಾರೆ.ಅವರ  ಚುನಾವಣೆ ಖರ್ಚಿಗೆ ಭಿಕ್ಷೆ ಬೇಡಿಯಾದರೂ ಹಣ ಕಳುಹಿಸುತ್ತೇನೆ ಎಂದು ತಿಳಿಸಿದರು. 

ಇದುವರೆಗೋ ಮೊಳಕಾಲ್ಮೂರಿನ ಸ್ಥಿತಿ ಸುಧಾರಣೆ ಆಗಿಲ್ಲ. ನಿಮ್ಮ ಜೀವನ ಸಮಸ್ಯೆಗಳಿಂದ ತುಂಬಿದೆ. ನೀವು ಇದರ ನಡುವೆಯೂ ಆತ್ಮವಿಶ್ವಾಸದಿಂದ ಬದುಕುತ್ತಿದ್ದೀರಿ. ಯಾವ ಸರ್ಕಾರಗಳು ಇಲ್ಲಿ ಅಭಿವೃದ್ಧಿ ಮಾಡಿಲ್ಲ.ಮೊಳಕಾಲ್ಮೂರಿನ ಜನ ಸತತವಾಗಿ ಕಾಂಗ್ರೆಸ್ ಆಯ್ಕೆ ಮಾಡಿದ್ದೀರಿ. ಕಳೆದ ಬಾರಿ ಬಿಎಸ್ ಆರ್ ಆಯ್ಕೆ ಮಾಡಿದ್ದೀರಿ. ಅವರು ನಿಮ್ಮ ಬದುಕು ಹಸನು ಮಾಡಿಲ್ಲ. ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಸರ್ಕಾರ ತರಲು ನನ್ನ ನಂಬಿ ಅವಕಾಶ ಕೊಡಿ ಎಂದು ಸಮಾವೇಶದಲ್ಲಿ ನೆರದಿದ್ದ ಜನರಲ್ಲಿ ಮನವಿ ಮಾಡಿಕೊಂಡರು.