ಬೆಂಗಳೂರು: ನಿಧಾನಕ್ಕೆ COVID- 19 ನಡುವೆಯೇ ಬದುಕಬೇಕೆಂಬುದು ಮನವರಿಕೆ ಆಗುತ್ತಿದೆ. ಇದೇ ಹಿನ್ನಲೆಯಲ್ಲಿ COVID- 19 ಬಗ್ಗೆ ಭಯ ಪಡುವ ಅಗತ್ಯ ಇಲ್ಲ. ಅದರ ಬದಲಾಗಿ COVID- 19 ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಜ್ಞರ ತಂಡ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.
ಅದರಲ್ಲೂ ಮುಖ್ಯವಾಗಿ ಕೋವಿಡ್-19 (COVID-19) ವೈರಸ್ ಪೀಡಿತರ ಮನೆ ಮುಂದೆ ಸ್ಟಿಕರ್ ಅಂಟಿಸುವದರ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ತಜ್ಞರ ತಂಡ 'ಸ್ಟಿಕರ್ ಅಂಟಿಸದಂತೆ' ಶಿಫಾರಸು ಮಾಡಿದೆ. COVID- 19 ಪರೀಕ್ಷೆ ಮಾಡಿದಾಗ ರಿಸಲ್ಟ್ ಪಾಸಿಟಿವ್ ಬಂದವರ ಮನೆ ಮುಂದೆ ಯಾವ ರೀತಿಯಲ್ಲಿ ಚಿಕಿತ್ಸೆ ಪಡೆಯಬೇಕು? ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕೆಂಬ ಸ್ಟಿಕರ್ ಅಂಟಿಸಲಾಗುತ್ತದೆ. ಇದರಿಂದ ಮರ್ಯಾದೆ ಹಾಳಾಗುತ್ತದೆ. ಮುಜುಗರ ಆಗುತ್ತದೆ ಎಂಬ ವ್ಯಾಪಕ ಅಸಮಾಧಾನ ಕೇಳಿಬಂದ ಹಿನ್ನೆಲೆಯಲ್ಲಿ ಸ್ಟಿಕರ್ ಅಂಟಿಸುವುದನ್ನು ಕೈಬಿಡುವಂತೆ ಶಿಫಾರಸು ಮಾಡಲಾಗಿದೆ.
ಎಸ್ಪಿಬಿ ಆರೋಗ್ಯದ ಬಗ್ಗೆ ಪುತ್ರ ಎಸ್ಪಿ ಚರಣ್ ಹೇಳಿದ್ದೇನು? ವಾಚ್ ವಿಡಿಯೋ
COVID- 19 ವೈರಸ್ ಹರಡುವುದನ್ನು ತಡೆಯಲು ಹೆಚ್ಚೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವುದೇ ಸೂಕ್ತ ಮಾರ್ಗ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಸಾರ್ವಜನಿಕರು ಸ್ವತಃ ಬಂದು COVID- 19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಬೇಕು ಎಂದು ಕೂಡ ಶಿಫಾರಸು ಮಾಡಲಾಗಿದೆ.
COVID- 19 ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಉತ್ತಮ ರೀತಿಯ ಸೌಕರ್ಯಗಳನ್ನು ಒದಗಿಸಬೇಕು. COVID- 19 ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದು ಹೈರಾಣಾಗಿದ್ದಾರೆ. ಅವರಿಗೆ ಇನ್ನು ಮುಂದೆ ವಾರಕ್ಕೆ ಒಂದು ದಿನ ರಜೆ ನೀಡಬೇಕು. COVID- 19 ಪರೀಕ್ಷೆ ಮಾಡುವ ಲ್ಯಾಬ್ ಗಳಿಗೆ ಪ್ರತಿ 10 ದಿನಗಳಿಗೆ ಒಂದು ದಿನ ರಜೆ ನೀಡಬೇಕು. ರಜಾ ದಿನದಲ್ಲಿ ಲ್ಯಾಬ್ ಅನ್ನು ಫ್ಯೂಮಿಗೇಟ್ ಮಾಡಬೇಕು ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.
ಚೇತರಿಸಿಕೊಂಡ ನಂತರ ಮತ್ತೆ ಕರೋನಾ ಸೋಂಕು ತಗುಲಬಹುದೇ? ಇಲ್ಲಿದೆ ಮಹತ್ವದ ಮಾಹಿತಿ
ಡಾ.ಮಂಜುನಾಥ್, ಡಾ. ಸಚ್ಚಿದಾನಂದ ಮುಂತಾದ ಹಿರಿಯ ವೈದ್ಯರಿರುವ ತಜ್ಞರ ಸಮಿತಿ ಸಮಿತಿಯಿಂದ ಸರ್ಕಾರಕ್ಕೆ ಇಂಥ ಶಿಫಾರಸುಗಳನ್ನು ಮಾಡಲಾಗಿದೆ.