ಹಿಂದೂ-ಮುಸ್ಲಿಂ ಸಾಮರಸ್ಯದ ಬೆಂಗಳೂರು ಕರಗ ಉತ್ಸವಕ್ಕೆ ವಿದ್ಯುಕ್ತ ಚಾಲನೆ

ರಾಜ್ಯದಲ್ಲಿ ಹಿಜಾಬ್, ಹಲಾಲ್ ಸಂಘರ್ಷ ಹಿನ್ನೆಲೆ ಮಸ್ತಾನ್ ಸಾಬ್ ದರ್ಗಾ ಧರ್ಮ‌ಗುರುಗಳು ಕರಗ ಉತ್ಸವ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಕರಗ ಉತ್ಸವ ತಾಯಿಯ ಮೆರವಣಿಗೆ ಪ್ರತಿ ವರ್ಷದಂತೆ ನಡೆಯಲಿ. ಮಸ್ತಾನ್‌ ಸಾಬ್ ದರ್ಗಾಕ್ಕೆ ತಾಯಿ ಆಗಮಿಸಲಿ. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸಹಕಾರ, ಪ್ರೀತಿ ಇರುತ್ತದೆ. ನಮ್ಮ ಪೂರ್ವಿಕರ ಕಾಲದಿಂದ ನಡೆದುಬಂದ ಪದ್ಧತಿಯಂತೆ ಆಚರಣೆ ನಡೆಯಲಿ ಎಂದು ಮನವಿ ಮಾಡಿದ್ದಾರೆ.  

Written by - Zee Kannada News Desk | Last Updated : Apr 8, 2022, 08:47 AM IST
  • ಬೆಂಗಳೂರು ಕರಗ ಉತ್ಸವಕ್ಕೆ ವಿದ್ಯುಕ್ತ ಚಾಲನೆ
  • ಕರಗ ಉತ್ಸವಕ್ಕೆ ಬಿಬಿಎಂಪಿಯಿಂ ಅವಕಾಶ
  • ಉತ್ಸವ ಸಮಿತಿಯಿಂದ ಹಿಂದೂ ಮುಸ್ಲಿಂ ಭಾವೈಕ್ಯತೆ
ಹಿಂದೂ-ಮುಸ್ಲಿಂ ಸಾಮರಸ್ಯದ ಬೆಂಗಳೂರು ಕರಗ ಉತ್ಸವಕ್ಕೆ ವಿದ್ಯುಕ್ತ ಚಾಲನೆ title=
Karaga Utsava

ಬೆಂಗಳೂರು: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ (Karaga) ಉತ್ಸವ ನಡೆಯಲಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಈ ಸಂಭ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಪ್ರಭಾವದಿಂದ ಕರಗ ಉತ್ಸವಕ್ಕೆ ಬಿಬಿಎಂಪಿ ಅವಕಾಶ ನೀಡಿರಲಿಲ್ಲ. ಆದರೆ ಇದೀಗ ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪಾಲಿಕೆ ಅನುಮತಿ ನೀಡಿದೆ. 

ಇದನ್ನು ಓದಿGoogle Maps: ಇದೀಗ ರೈಲಿನ ಲೈವ್ ಸ್ಟೇಟಸ್ ಪರಿಶೀಲಿಸುವುದು ತುಂಬಾ ಸುಲಭ

ಉತ್ಸವ ಸಮಿತಿಯಿಂದ ಹಿಂದೂ ಮುಸ್ಲಿಂ ಭಾವೈಕ್ಯತೆ : 
ರಾಜ್ಯದಲ್ಲಿ ಹಿಜಾಬ್, ಹಲಾಲ್ ಸಂಘರ್ಷ ಹಿನ್ನೆಲೆ ಮಸ್ತಾನ್ ಸಾಬ್ ದರ್ಗಾ ಧರ್ಮ‌ಗುರುಗಳು ಕರಗ ಉತ್ಸವ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಕರಗ ಉತ್ಸವ ತಾಯಿಯ ಮೆರವಣಿಗೆ ಪ್ರತಿ ವರ್ಷದಂತೆ ನಡೆಯಲಿ. ಮಸ್ತಾನ್‌ ಸಾಬ್ ದರ್ಗಾಕ್ಕೆ ತಾಯಿ ಆಗಮಿಸಲಿ. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸಹಕಾರ, ಪ್ರೀತಿ ಇರುತ್ತದೆ. ನಮ್ಮ ಪೂರ್ವಿಕರ ಕಾಲದಿಂದ ನಡೆದುಬಂದ ಪದ್ಧತಿಯಂತೆ ಆಚರಣೆ ನಡೆಯಲಿ ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷದಂತೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಕರಗ ಉತ್ಸವ ನಡೆಯಲಿದೆ. 

ಇದನ್ನು ಓದಿ: ಶಕ್ತಿಧಾಮಕ್ಕೆ 5 ಕೋಟಿ ರೂ.ಗಳ ಅನುದಾನ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಇನ್ನು ಏಪ್ರಿಲ್‌ 14ರಂದು ಹಸಿ ಕರಗ, ಏ.16 ರಂದು ದ್ರೌಪದಮ್ಮನ ಹೂವಿನ ಕರಗ ಉತ್ಸವವು ವಿಜೃಂಭಣೆಯಿಂದ ನಡೆಯಲಿದೆ ಎಂದು ಕರಗ ಮಹೋತ್ಸವ ಸಮಿತಿ ಮಾಹಿತಿ ನೀಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News