ಚಿಕ್ಕಬಳ್ಳಾಪುರ: ರಾಜ್ಯಕ್ಕೆ ಒಂದು ಕಡೆ ಕೊರೊನಾ ಭೀತಿ ಎದುರಾಗಿದ್ದರೆ, ಮತ್ತೊಂದು ಕಡೆ ಪ್ರಾಕೃತಿಕ ವಿಕೋಪಗಳು ಕೂಡ ಜನರನ್ನ ಬೆಚ್ಚಿಬೀಳಿಸುತ್ತಿವೆ.ಹೀಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು ಭೂಮಿ ಪದೇ ಪದೆ ಕಂಪಿಸಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾದೇನಹಳ್ಳಿ ಗ್ರಾಮದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ. ರಿಕ್ಟರ್ ಮಾಪನದಲ್ಲಿ 3.6 ತೀವ್ರತೆ ಕಂಡುಬಂದಿದೆ. ಭೂಮಿ ಕಂಪಿಸಿರುವುದನ್ನು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೂಡ ದೃಢಪಡಿಸಿದೆ.
ಇದನ್ನೂ ಓದಿ: Viral Photo: ಸಾರ್ವಜನಿಕವಾಗಿ ಕಪಿಲ್ ದೇವ್‌ಗೆ ಮುತ್ತಿಟ್ಟ ರಣವೀರ್ ಸಿಂಗ್, 'Awkward kiss' ಫೋಟೋ ವೈರಲ್.!
ನಿನ್ನೆ ಬೆಳಗ್ಗೆಯೂ ಕಂಪನ..!
ಗೊಲ್ಲಹಳ್ಳಿ ಹಾಗೂ ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ಸುಮಾರು 15 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಹತ್ತಾರು ಹಳ್ಳಿಗಳಲ್ಲಿ ಭೂಕಂಪನದ ಅನುಭವವಾಗಿದೆ. ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿಗೆ ಕೂಡ 2 ಬಾರಿ ಇದೇ ರೀತಿ ಕಂಪನದ ಅನುಭವವಾಗಿತ್ತು. ನಿನ್ನೆ ರಿಕ್ಟರ್ ಮಾಪಕದಲ್ಲಿ 2.9 ಹಾಗೂ 3.0 ತೀವ್ರತೆ ದಾಖಲಾಗಿತ್ತು.
ಇದನ್ನೂ ಓದಿ:"ರಾಷ್ಟ್ರೀಯವಾದಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಈ ದೇಶ ಮುಂದುವರೆಸಿದೆ": ವಿಚಾರಣೆ ಬಳಿಕ ಕಂಗನಾ ಪೋಸ್ಟ್
ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ಆತಂಕಕ್ಕೊಳಾಗಿದ್ದಾರೆ. ಕಂಪನದ ಅನುಭವಕ್ಕೆ ಜನರು ಬೆಚ್ಚಿದ್ದಾರೆ. ಕೂಡಲೇ ಮನೆಗಳಿಂದ ಹೊರಬಂದು ಕಿರುಚಾಡಿದ್ದಾರೆ. ಹಾಗೇ ವಿದ್ಯಾರ್ಥಿಗಳಂತೂ ತಕ್ಷಣ ಶಾಲೆಯಿಂದ ಹೊರಗೆ ಓಡಿ ಬಂದಿದ್ದು, ಶಾಲೆ ಆವರಣದಲ್ಲೇ ಪಾಠ ಮಾಡಬೇಕಾಯಿತು.1 ವಾರದಿಂದ ಚಿಕ್ಕಬಳ್ಳಾಪುರದ ಸಮೀಪ 5 ಬಾರಿ ಭೂಕಂಪನ ಸಂಭವಿಸಿದ್ದು, ಇಂದು ಅತಿ ಹೆಚ್ಚು ಅಂದರೆ 3.6ರಷ್ಟು ತೀವ್ರತೆ ದಾಖಲಾಗಿದೆ. ಭೂಮಿ ಕಂಪಿಸಿದ ಪರಿಣಾಮ ಮನೆಗಳ ಗೋಡೆ ಬಿರುಕು ಬಿಟ್ಟಿದ್ದು, ಪಾತ್ರೆಗಳು ಎಲ್ಲೆಂದರಲ್ಲಿ ಬಿದ್ದಿದ್ದವು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.