ಅರ್ಹ ನಾಗರಿಕರಿಗೆ ಡಿಬಿಟಿ ಮೂಲಕ ನೇರವಾಗಿ ಹಣ ವರ್ಗಾವಣೆ ಆಗಬೇಕು: ಸಚಿವ ಕೆ.ಎಚ್ ಮುನಿಯಪ್ಪ

ಇಂದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ  ಸಚಿವರಾದ ಕೆಹೆಚ್ ಮುನಿಯಪ್ಪನವರು ಇಲಾಖೆಯ ಲ್ಲಿನ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು.

Written by - Manjunath Hosahalli | Edited by - Manjunath N | Last Updated : Oct 20, 2023, 03:43 PM IST
  • ಸರ್ವರ್‌ಗಳ ಸಮಸ್ಯೆಗಳನ್ನು ಈ ಕೂಡಲೇ ಬಗೆಹರಿಸಬೇಕು
  • ಡಿಬಿಟಿ ಮೂಲಕ ನೇರ ಹಣ ವರ್ಗಾವಣೆ ಹಣ ಎಲ್ಲಾ ಫಲಾನುಭವಿಗಳಿಗೆ ತಲುಪಲು ಕ್ರಮ ವಹಿಸಬೇಕು
  • ಸಮರ್ಪಕವಾಗಿ ಅನ್ನ ಭಾಗದ ಎಲ್ಲಾ ಟಸಾಮಗ್ರಿಗಳನ್ನು ಪಡಿತರದಾರರಿಗೆ ಸರಿಯಾದ ಸಮಯಕ್ಕೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು
ಅರ್ಹ ನಾಗರಿಕರಿಗೆ ಡಿಬಿಟಿ ಮೂಲಕ ನೇರವಾಗಿ ಹಣ ವರ್ಗಾವಣೆ ಆಗಬೇಕು: ಸಚಿವ ಕೆ.ಎಚ್ ಮುನಿಯಪ್ಪ title=

ಬೆಂಗಳೂರು: ಇಂದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ  ಸಚಿವರಾದ ಕೆಹೆಚ್ ಮುನಿಯಪ್ಪನವರು ಇಲಾಖೆಯ ಲ್ಲಿನ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ನಡೆದ ಸಭೆಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ,ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ,ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತದ ಅಧಿಕಾರಿಗಳೊಂದಿಗೆ ಇಂದು ಸಭೆಯನ್ನು ನಡೆಸಿದರು.

ನಂತರ ಮಾತನಾಡಿದ ಸಚಿವರು ಸರ್ವರ್‌ಗಳ ಸಮಸ್ಯೆಗಳನ್ನು ಈ ಕೂಡಲೇ ಬಗೆಹರಿಸಬೇಕು ಮತ್ತು ಡಿಬಿಟಿ ಮೂಲಕ ನೇರ ಹಣ ವರ್ಗಾವಣೆ ಹಣ ಎಲ್ಲಾ ಫಲಾನುಭವಿಗಳಿಗೆ ತಲುಪಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: ಬಿಳಿ ರಂಜಕದ ಬಳಕೆಯಿಂದ ಯುದ್ಧಾಪರಾಧಗಳ ತನಕ: ಇರಾನ್- ಹಮಾಸ್ ಯುದ್ಧದ ಸಂಕೀರ್ಣತೆಗಳ ಅನಾವರಣ

ಸಮರ್ಪಕವಾಗಿ ಅನ್ನ ಭಾಗದ ಎಲ್ಲಾ ಟಸಾಮಗ್ರಿಗಳನ್ನು ಪಡಿತರದಾರರಿಗೆ ಸರಿಯಾದ ಸಮಯಕ್ಕೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು

ಕರ್ನಾಟಕ ರಾಜ್ಯವನ್ನು ಹಸಿವು ಮುಕ್ತವಾಗಿಸಲು ನಮ್ಮ ಮೊದಲ ದ್ಯೇಯ ವಾಗಿರುವುದರಿಂದ ಆಹಾರ ಧಾನ್ಯಗಳನ್ನು ನಿಗದಿತ ಸಮಯದಲ್ಲಿ ತಲುಪಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು

ಸಭೆಯಲ್ಲಿ  ಸರ್ಕಾರದ ಕಾರ್ಯದರ್ಶಿಗಳಾದ ಜಿ.ಸಿ.ಪ್ರಕಾಶ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಆಯುಕ್ತರಾದ ಕನಗವಲ್ಲಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿಯಂತ್ರಕರಾದ ಅನಿತಾ ಲಕ್ಷ್ಮಿ, ಆಹಾರ ಸರಬರಾಜು ನಿಗಮದ ನಿರ್ದೇಶಕರಾದ ಶ್ರೀನಿವಾಸಲು,ವ್ಯವಸ್ಥಾಪಕರಾದ ಪ್ರಸಣ್ಣಕುಮಾರ್,ಆಹಾರ ಆಯೋಗದ ಕಾರ್ಯದರ್ಶಿ ಗಳಾದ ಸುಜಾತ ಹೊಸಮನಿ ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

Trending News