ಜನ ಮರುಳೋ.. ಜಾತ್ರೆ ಮರುಳೋ.. ಫ್ರೀ ಸೈಟ್‌ಗಾಗಿ ಗುಡ್ಡಕ್ಕೆ ಬೇಲಿ.. ಮುಂದೆನಾಯ್ತು ಗೊತ್ತಾ..?

Raichuru Free Site: ಅದು ಸರ್ಕಾರಿ ಜಾಗ. ಆದರೆ ಜನರು ಮಾತ್ರ ಯಾರೋ ಫ್ರೀ ಜಾಗ ಕೊಡುತ್ತಾರೆ ಎಂದು ವದಂತಿಗೆ ಕೂಲಿ ಕೆಲಸ ಬಿಟ್ಟು ಗುಡ್ಡದ ತುಂಬೆಲ್ಲ ಮಾರ್ಕ್ ಮಾಡಿಕೊಂಡು ಕಟ್ಟಿಗೆ ಹಾಗೂ ಸೀರೆಗಳನ್ನು ಕಟ್ಟುತ್ತಿದ್ದರು. ಆದರೆ ಅಧಿಕಾರಿಗಳಿಗೆ ತಿಳಿಯುತಿದ್ದಂತೆ ಸಾರ್ವಜನಿಕರಿಗೆ ಮಾತ್ರ ಶಾಕ್ ಕೊಟ್ಟಿದ್ದಾರೆ.   

Written by - Savita M B | Last Updated : Oct 20, 2023, 10:27 PM IST
  • ಅದು ಸರ್ಕಾರಿ ಜಾಗ
  • ಅಧಿಕಾರಿಗಳಿಗೆ ತಿಳಿಯುತಿದ್ದಂತೆ ಸಾರ್ವಜನಿಕರಿಗೆ ಮಾತ್ರ ಶಾಕ್ ಕೊಟ್ಟಿದ್ದಾರೆ.
  • ಜನರು ಮಾರ್ಕ್ ಮಾಡಿದ ಜಾಗಗಳನ್ನು ನಗರ ಸಭೆ ಜೆಸಿಬಿ ಗಳಿಂದ ತೆರವು ಗೊಳಿಸಲಾಗಿದೆ .
ಜನ ಮರುಳೋ.. ಜಾತ್ರೆ ಮರುಳೋ.. ಫ್ರೀ ಸೈಟ್‌ಗಾಗಿ ಗುಡ್ಡಕ್ಕೆ ಬೇಲಿ.. ಮುಂದೆನಾಯ್ತು ಗೊತ್ತಾ..? title=

ಮನೆಯಿಂದ ಮಕ್ಕಳನ್ನು ಕಟ್ಟಿಕೊಂಡು ಕುಟುಂಬ ಸಮೇತ  ಬರುತ್ತಿರುವ ಜನರು. ಇನ್ನೊಂದು ಕಡೆ ಗಂಡು ಮಕ್ಕಳು ಇಷ್ಟು ನಂದು ಜಾಗ ಎಂದು ಗುಡ್ಡಕ್ಕೆ ಕಟ್ಟಿಗೆ ಉಳುತ್ತಿರುವುದು ಗುಡ್ಡದ ಸುತ್ತೆಲ್ಲ ಜನ್ರನ್ನ ನೋಡಿದರೆ ಮಾತ್ರ ಯಾವುದೇ ಜಾತ್ರೆ ಇರಬೇಕು ಅನಿಸುತ್ತೆ ಆದರೆ ಯಾರೋ ಹೇಳಿದ ಫ್ರೀ ಜಾಗ ವದಂತಿಗೆ ಕಿವಿ ಕೊಟ್ಟು ಬಂದ ಜನ ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಮಾತ್ರ ರಾಯಚೂರು ಜಿಲ್ಲೆಯಲ್ಲಿ. 

ಇದನ್ನೂ ಓದಿ-ದೋಷಯುಕ್ತ ಇಲೆಕ್ಟ್ರಿಕ್ ವಾಹನ ಕೊಟ್ಟ ಟಿ ವಿ ಎಸ್ ಕಂಪನಿಗೆ 1.60 ಲಕ್ಷ ಪರಿಹಾರ ನೀಡಲು ಕೋರ್ಟ್ ಆದೇಶ

ರಾಯಚೂರು ನಗರದ ಆಶ್ರಯ ಕಾಲೋನಿಯ ಹಿಂಬದಿಯ ಸರ್ಕಾರಿ ಜಾಗ ಆಗಿರುವ ಸರ್ವೇ ನಂ 559  ಗುಡ್ಡದ ಪ್ರದೇಶ ವಾಗಿದ್ದು , ಯಾರೋ ಸರ್ಕಾರ ಫ್ರೀ ಜಾಗ ಎಂದು ವದಂತಿ ಹೆಬ್ಬಿಸಿದ್ದು ಇದರಿಂದ ಕೂಲಿ ಕೆಲಸ ಬಿಟ್ಟು ಫ್ರೀ ಜಾಗ ಸಿಗುತ್ತೆ ಎಂದು ಗುಡ್ಡದ ಸರ್ಕಾರಿ  ಜಾಗ ದಲ್ಲಿ ಕಟ್ಟಿಗೆ ಸೀರೆ ತುಂಡು , ಗಳಿಂದ ಇದಿಷ್ಟು ನಂದು ಜಾಗ ಎಂದು ಮಾರ್ಕ್ ಮಾಡಿ ಕೊಂಡಿದ್ದಾರೆ.

ಇನ್ನೂ ಈ ಫ್ರೀ ಸೈಟ್ ವಿಚಾರ ನಗರ ಸಭೆ ಪೌರ ಆಯುಕ್ತ ಕಿವಿಗೆ ಮುಟ್ಟಿದ ತಕ್ಷಣ ಅಧಿಕಾರಿಗಳು ಎಚ್ಚತ್ತು ಕೊಂಡಿದ್ದರು. ನಗರ ಸಭೆ ಪೌರ ಆಯುಕ್ತರು ಸರ್ವೇ ನಂ 559. 10 ಎಕರೆ 38 ಗುಂಟೆ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದ ಸಾರ್ವಜನಿಕರು ಜೆಸಿಬಿ ಗಳ ಮೂಲಕ ಮುಂಜಾನೆ ಕಾರ್ಯಚರಣೆ ನಡೆಸಿ ಜಾಗದಲ್ಲಿ ಹಾಕಿರುವ ಕಟ್ಟಿಗೆ, ಸೀರೆಗಳ ಮಾರ್ಕ್ ಅನ್ನು ತೆರವು ಗೊಳಿಸಿದ್ದರು.

ಇದನ್ನೂ ಓದಿ-ಬಿಜೆಪಿಗೆ ಬೈ.. ಕಾಂಗ್ರೆಸ್‌ಗೆ ಜೈ.. ʻಕೈʼಹಿಡಿದ ಪೂರ್ಣಿಮಾ ಶ್ರೀನಿವಾಸ್  

ಜನರು ಮಾರ್ಕ್ ಮಾಡಿದ ಜಾಗಗಳನ್ನು ನಗರ ಸಭೆ ಜೆಸಿಬಿ ಗಳಿಂದ ತೆರವು ಗೊಳಿಸಲಾಗಿದೆ. ಆದರೆ ಯಾರೋ ಹೇಳಿದ ವದಂತಿಗೆ  ಕೆಲಸ ಬಿಟ್ಟು ಜಾಗ ಹಿಡಿದಿದ್ದು ಮಾತ್ರ ಜನರಿಗೆ   ನಿರಾಸೆ ಉಂಟು ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News