Firing on Rowdy Sheeter: ಪೊಲೀಸರಿಗೇ ಸವಾಲು ಹಾಕಿದ್ದ ರೌಡಿಶೀಟರ್ ಕಾಲಿಗೆ ಗುಂಡು

Firing on Rowdy Sheeter: "ಪೊಲೀಸರು ನನ್ನನ್ನು ಬಂಧಿಸಲು ಆಗಲ್ಲ" ಎಂದು ವಿಡಿಯೋ ಹರಿಬಿಟ್ಟಿದ್ದ ಕುಖ್ಯಾತ ರೌಡಿಶೀಟರ್ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Edited by - Zee Kannada News Desk | Last Updated : Jan 17, 2022, 10:53 AM IST
  • ಪೊಲೀಸರಿಗೇ ಸವಾಲು ಹಾಕಿದ್ದ ರೌಡಿಶೀಟರ್
  • ಕುಖ್ಯಾತ ರೌಡಿಶೀಟರ್ ಸ್ಟಾರ್ ರಾಹುಲ್ ಕಾಲಿಗೆ ಗುಂಡು
  • ವಿವಿಧ ಪೊಲೀಸ್ ಠಾಣೆಗಳಲ್ಲಿ 19ಕ್ಕೂ ಹೆಚ್ಚು ಪ್ರಕರಣಗಳು
Firing on Rowdy Sheeter: ಪೊಲೀಸರಿಗೇ ಸವಾಲು ಹಾಕಿದ್ದ ರೌಡಿಶೀಟರ್ ಕಾಲಿಗೆ ಗುಂಡು title=
ಕುಖ್ಯಾತ ರೌಡಿಶೀಟರ್ ಸ್ಟಾರ್ ರಾಹುಲ್

ಬೆಂಗಳೂರು: "ಪೊಲೀಸರು ನನ್ನನ್ನು ಬಂಧಿಸಲು ಆಗಲ್ಲ" ಎಂದು ವಿಡಿಯೋ ಹರಿಬಿಟ್ಟಿದ್ದ ಕುಖ್ಯಾತ ರೌಡಿಶೀಟರ್ (Rowdy Sheeter) ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಹನುಮಂತನಗರ ಪೊಲೀಸರು ಕುಖ್ಯಾತ ರೌಡಿಶೀಟರ್ ಸ್ಟಾರ್ ರಾಹುಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.‌

ಕುಖ್ಯಾತ ರೌಡಿಶೀಟರ್ ಕುಳ್ಳು ರಿಜ್ವಾನ್ (KULLA RIZWAN) ಸಹಚರನಾಗಿರುವ ಈ ಸ್ಟಾರ್ ರಾಹುಲ್ (Star Rahul) 19 ಪ್ರಕರಣಗಳಲ್ಲಿ ಖಾಕಿಗೆ ಬೇಕಾಗಿದ್ದನು. ಇತ್ತೀಚಿಗೆ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದ ಈತ, "ಸಿಸಿಬಿ ಹಾಗೂ ಬೆಂಗಳೂರು ಸೌತ್ ಪೊಲೀಸರು ನನ್ನನ್ನು ಹುಡುಕುತ್ತಿದ್ದಾರೆ. ಆದರೆ ನಾನು ಸಿಗಲ್ಲ" ಎಂದು ಸವಾಲು ಹಾಕಿದ್ದ. 

Firing on Rowdy Sheeter

ಅಲ್ಲದೆ ರೌಡಿಶೀಟರ್ ಸೈಕಲ್ ರವಿ (Cycle Ravi) ಆಪ್ತ ಬೇಕರಿ ರಘು ಹತ್ಯೆಗೆ ಯತ್ನಿಸಿರುವುದಾಗಿಯೂ ಹೇಳಿಕೊಂಡಿದ್ದ ಮತ್ತು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.  

ಈತನ ಪುಂಡಾಟಿಕೆ ಗಮನಿಸಿದ ಪೊಲೀಸರು ಸ್ಟಾರ್ ರಾಹುಲ್ ಬಂಧನಕ್ಕೆ ಬಲೆ ಬೀಸಿದ್ದರು. ಇಂದು ಆರೋಪಿ ಕೋಣನಕುಂಟೆ ಪೊಲೀಸ್ ಠಾಣಾ (Konanakunte) ವ್ಯಾಪ್ತಿಯ ದೊಡ್ಡ ಕಲ್ಲಸಂದ್ರ ಬಳಿ ಇರುವ ಮಾಹಿತಿ ಹನುಮಂತನಗರ ಪೊಲೀಸರಿಗೆ ಸಿಕ್ಕಿತ್ತು. 

ಹನುಮಂತನಗರ ಠಾಣೆ  ಸಬ್ ಇನ್ಸಪೆಕ್ಟರ್ ಬಸವರಾಜ್ ಪಾಟೀಲ್ ಹಾಗೂ ತಂಡ ಆರೋಪಿಯನ್ನು ಬಂಧಿಸಲು ತೆರಳಿತ್ತು. ಈ ವೇಳೆ ಆರೋಪಿ ಹೆಡ್ ಕಾನ್ ಸ್ಟೆಬಲ್ ನಿಂಗಪ್ಪ ಮೇಲೆ ಡ್ರಾಗರ್ ನಿಂದ ಹಲ್ಲೆ ಮಾಡಿದ್ದಾನೆ.  ಆತ್ಮರಕ್ಷಣೆಗೆ ಪಿಎಸ್ ಐ ಬಸವರಾಜ್ ಪಾಟೀಲ್ ಆರೋಪಿ ಕಾಲಿಗೆ ಗುಂಡು (Firing on Rowdy Sheeter)  ಹಾರಿಸಿ ಬಂಧಿಸಿದ್ದಾರೆ. 

ಕುಳ್ಳು ರಿಜ್ವಾನ್ ಅತ್ಯಾಪ್ತ ಸಹಚರರಲ್ಲಿ ಒಬ್ಬನಾಗಿದ್ದ ಸ್ಟಾರ್ ರಾಹುಲ್ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 19ಕ್ಕೂ ಹೆಚ್ಚು ಪ್ರಕರಣಗಳು ಇವೆ. 

ಇದನ್ನೂ ಓದಿ: Bangalore:1200 ರೂ. ಗಾಗಿ ಬಿತ್ತು ಹೆಣ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನನ್ನು ಕೊಂದೇ ಬಿಟ್ಟರು..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News