ಮುಗಿಯದ ಧ್ವಜ ದಂಗಲ್: ಬೂದಿಮುಚ್ಚಿದ ಕೆಂಡದಂತಾದ ಮಂಡ್ಯದ ಕೆರಗೋಡು ಗ್ರಾಮ!

ಮಂಡ್ಯದ ಕೆರೆಗೋಡು ಹನುಮಧ್ವಜ ತೆರವು ವಿವಾದ ತಣ್ಣಗಾಗೋ ಲಕ್ಷಣಗಳು ಕಾಣ್ತಿಲ್ಲ‌. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಒಂದೆಡೆ ಜಿಲ್ಲಾಡಳಿತಕ್ಕೆ ಸೆಡ್ಡುವೊಡೆದಿರೋ ಗ್ರಾಮಸ್ಥರು ಮನೆಗಳ ಮೇಲೆ ಹನುಮಧ್ವಜ ಹಾರಿಸಿದ್ರೆ, ಮತ್ತೊಂದು ಕಡೆ ವಿವಾದವನ್ನ ರಾಜಕೀಯವಾಗಿ ಬಳಸಿಕೊಂಡು ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಬಿಜೆಪಿ ಜೆಡಿಎಸ್ ಮುಂದಾಗಿದೆ‌‌. ಕೆರೆಗೋಡು ಗ್ರಾಮದ ಧ್ವಜ ದಂಗಲ್ ಕುರಿತ ಒಂದು ವರದಿ ಇಲ್ಲಿದೆ.   

Written by - Savita M B | Last Updated : Jan 31, 2024, 06:53 PM IST
  • ಮುಗಿಯದ ಮಂಡ್ಯದ ಕೆರಗೋಡು ಧ್ವಜ ದಂಗಲ್
  • ಬೂದಿಮುಚ್ಚಿದ ಕೆಂಡದಂತಿರುವ ಕೆರಗೋಡು ಗ್ರಾಮ
  • ವಿವಾದವನ್ನ ರಾಜಕೀಯ ಬಳಕೆಗೆ JDS-BJP ಪ್ಲಾನ್
ಮುಗಿಯದ ಧ್ವಜ ದಂಗಲ್: ಬೂದಿಮುಚ್ಚಿದ ಕೆಂಡದಂತಾದ ಮಂಡ್ಯದ ಕೆರಗೋಡು ಗ್ರಾಮ! title=

ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹತ್ತಿದ ಹನುಮ ಧ್ವಜ ಸಣ್ಣ ಕಿಚ್ಚು ಇದೀಗ ರಾಜ್ಯಾದ್ಯಂತ ಹಬ್ಬಿದ್ದು, ಸದ್ಯ ಕೆರಗೋಡು ಗ್ರಾಮ ಬೂದಿಮುಚ್ಚಿದ ಕೆಂಡದಂತೆ ಆಗಿದೆ. ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ದಂಗಲ್ ಇನ್ನು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಗ್ರಾಮದಲ್ಲಿ 144 ಸೆಕ್ಷನ್ ಸದ್ಯ ಮುಂದುವರೆದಿದ್ದು, ಗ್ರಾಮದಲ್ಲಿ KSRP, DAR ತುಕಡಿ ಸೇರಿ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಮೇಲ್ನೋಟಕ್ಕೆ ಸಹಜ ಸ್ಥಿತಿಗೆ ಮರಳಿದೆ ಎನಿಸಿದ್ರು ಜನರಲ್ಲಿ ಕುದಿಯುತ್ತಿರುವ ಆಕ್ರೋಶದ ಕಿಚ್ಚು, ಮತ್ತೆ ಹನುಮ ಧ್ವಜ‌ ಹಾರಿಸಲೇಬೇಕೆಂದು ಜನರು ಪಟ್ಟು ಹಿಡಿದಿದ್ದಾರೆ. 

ಇನ್ನು ಗ್ರಾಮಕ್ಕೆ ಬಿಜೆಪಿ, ಜೆಡಿಎಸ್ ನ ರಾಜ್ಯ ಮಟ್ಟದ ನಾಯಕರು ಭೇಟಿ ನೀಡಲು ಪ್ಲ್ಯಾನ್ ಮಾಡಿದ್ರೆ, ಮತ್ತೊಂದೆಡೆ ಕಾಂಗ್ರೆಸ್‌ನಿಂದಲೂ ಪ್ರತಿಭಟನೆ ಮಾಡಲು ಪ್ಲಾನ್ ಮಾಡಿ, ತಮ್ಮ ವಿರುದ್ದದ ಆರೋಪವನ್ನ ಸಮರ್ಥಿಸಿಕೊಳ್ಳುವ ಜೊತೆಗೆ ಗ್ರಾಮದಲ್ಲಿ ಬೆಂಕಿ ಹೊತ್ತಿಕೊಳ್ಳಲು ಬಿಜೆಪಿ-ಜೆಡಿಎಸ್ ನೇರ ಕಾರಣ ಎಂದು ಬಿಂಬಿಸಲು‌ ಬೃಹತ್ ಹೋರಾಟದ ರೂಪುರೇಷ ರೂಪಿಸುತ್ತಿದೆ. ಈ ಮಧ್ಯೆ ರಾಜಕೀಯ ಕೆರೆಚಾಟಕ್ಕೆ ವೇದಿಕೆ ಸಜ್ಜಾಗಿದೆ..

ಇದನ್ನೂ ಓದಿ-"ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ನಮ್ಮ ನಿಲುವು ಅಚಲ"

ಅಂದಹಾಗೆ ಕೆರೆಗೋಡು ಹನುಮ ಧ್ವಜ ತೆರವು ಹಾಗೂ ಪಾದಯಾತ್ರೆ ಸಂದರ್ಭದಲ್ಲಿ ಲಾಠಿ ಚಾರ್ಜ್‌‌ನಲ್ಲಿ ಗಾಯಗೊಂಡವರ ಮನೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಹಾಗೂ ತಂಡ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದ್ರು. ಇದೇ ವೇಳೆ ಕೆಲವರು ನಿಮ್ಮ ಸಹವಾಸವೇ ಬೇಡ ಎಂದು ಬಾಗಿಲು ಹಾಕಿ ಮನೆಗೆ ಬರೋದು ಬೇಡ. ನಮಗೆ ರಾಜಕೀಯ ಬೇಡ. ಯಾವ ಧ್ವಜವಾದರೂ ಹಾರಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಇದನ್ನೂ ಓದಿ-ಶಿವಾಜಿ ನಗರವಾಯ್ತು, ಈಗ ಜೆಜೆಆರ್ ನಗರದಲ್ಲಿ ಹಸಿರು ಧ್ವಜ ಹಾರಾಟದ ಫೋಟೋ ವೈರಲ್

ಅಸಮಾಧಾನಿತ ಕಾರ್ಯಕರ್ತರನ್ನು ಬಿಜೆಪಿ ನಾಯಕರು ಸಮಾಧಾನ ಪಡಿಸಿದ್ರು. ಇನ್ನು ಈ ಮಧ್ಯೆ ಗ್ರಾಮದಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಮನೆ ಮನೆಗಳ ಮೇಲೆ ಹನುಮ ಹಾಗೂ ಕೇಸರಿ ಧ್ವಜವನ್ನ ಹಾರಿಸುವ ಮೂಲಕ ಜಿಲ್ಲಾಡಳಿತಕ್ಕೆ ಸೆಡ್ಡು ವೊಡೆದಿದ್ದಾರೆ. ಗ್ರಾಮದ ದೇವಸ್ಥಾನದಲ್ಲಿ ಸಭೆ ಮಾಡಿ, ಮುಂದಿನ ಹೋರಾಟದ ಬಗ್ಗೆ ರೂಪರೇಷೆ  ತಯಾರು ಮಾಡುತ್ತಿದ್ದಾರೆ. 

ಇನ್ನು ಫೆಬ್ರವರಿ 9ರಂದು ಘಟನೆ ಖಂಡಿಸಿ ಬಜರಂಗದಳ ಮಂಡ್ಯ ನಗರ ಬಂದ್‌ಗೆ ಕರೆ ಕೊಟ್ಟಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ ಜಿಲ್ಲೆಯಲ್ಲಿ ಶಾಂತಿ ಕದಡಲು ಮುಂದಾಗಿದೆ ಎಂದು ಫೆಬ್ರವರಿ 7 ರಂದು ಸಮಾನ ಮನಸ್ಕ ವೇದಿಕೆ ಬಂದ್ ಗೆ ಕರೆಕೊಟ್ಟಿದೆ. ಒಟ್ಟಾರೆ ಕೆರೆಗೋಡು ಧ್ವಜದಂಗಲ್, ಮುಗಿಯುವ ಲಕ್ಷಣ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತದೆ ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News