ಶಿವಾಜಿನಗರದಲ್ಲಿ ಹಸಿರು ಬಾವುಟ ಹಾರಾಟ.. ಬಿಬಿಎಂಪಿ ಅಲರ್ಟ್

Written by - Zee Kannada News Desk | Last Updated : Jan 31, 2024, 03:55 AM IST
  • ಹನುಮಧ್ವಜ ವಿವಾದದ ನಡುವೆ ಹಸಿರು ಧ್ವಜ ಹಾರಾಟ
  • ಬೆಂಗಳೂರಿನ ಶಿವಾಜಿನಗರದಲ್ಲಿ ಹಸಿರು ಬಾವುಟ ಹಾರಾಟ
  • ಹಸಿರು ಬಾವುಟ ತೆಗೆದು ರಾಷ್ಟ್ರಧ್ವಜ ಬಾವುಟ ಹಾರಿಸಿದ ಬಿಬಿಎಂಪಿ
ಶಿವಾಜಿನಗರದಲ್ಲಿ ಹಸಿರು ಬಾವುಟ ಹಾರಾಟ.. ಬಿಬಿಎಂಪಿ ಅಲರ್ಟ್ title=

ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸಿ ರಾಷ್ಟ್ರ ಧ್ವಜ ಹಾರಿಸಿದ್ದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ತೀವ್ರ ವಿರೋಧ ವ್ಯಕ್ತ ಪಡಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡ್ತಿದೆ. ಇದೀಗ ಅದೇ ರೀತಿ ಶಿವಾಜಿನಗರದ ಚಾಂದಿನಿ‌ ಚೌಕ್ ನಲ್ಲಿರೋ ಹೈ ಮಾಸ್ಟ್ ವಿದ್ಯುತ್ ದೀಪದ ಕಂಬದಲ್ಲಿ ಹಾರಿಸಿದ್ದ ಮುಸ್ಲಿಂ ಧ್ವಜ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಹೈಮಾಸ್ಟ್ ಲೈಟಿಂಗ್ ಕಂಬದಲ್ಲಿ ಹಸಿರು ಧ್ವಜ ಹಾರಾಟದ ಬಗ್ಗೆ ವಿಕಾಸ್ ವಿಕ್ಕಿ ಹಿಂದೂ ಎಂಬ ಖಾತೆಯಿಂದ ಟ್ವೀಟ್ ಮಾಡಿ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಾರುತ್ತಿರುವ  ಧ್ವಜ  ಯಾವ ಧರ್ಮದ್ದು ಎಂದು ಪ್ರಶ್ನಿಸಿ ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು.. ಅವರಿಗೆ ಧ್ವಜ ತೆಗೆಸೋ ತಾಖತ್ ಇಲ್ವಾ ..ಹಿಂದೂ ಗ್ರಾಮಸ್ಥರ ಮೇಲೆ ಮಾತ್ರ ನಿಮ್ಮ ಅಟ್ಟಹಾಸವೋ..ಎಂದು ಟ್ವೀಟ್ ಮಾಡಲಾಗಿತ್ತು.  ಇದರಿಂದ ಎಚ್ಚೆತ್ತ ಪೊಲೀಸರು ಹಾಘೂ ಬಿಬಿಎಂಪಿ ಅಧಿಕಾರಿಗಳು,  ಚಾಂದಿನಿ ಚೌಕ್ ನ ದೀಪ ಕಂಭದಲ್ಲಿ ಕಟ್ಟಿದ್ದ ಮುಸ್ಲಿಂ ಧಾರ್ಮಿಕ ಧ್ವಜವನ್ನು ತೆಗೆಸಿ ರಾಷ್ಟ್ರ ಬಾವುಟವನ್ನು ಕಟ್ಟಿದ್ರು. ಈ ಬಗ್ಗೆ ಮಾತನಾಡಿದ ಸ್ಥಳೀಯ ಮುಸ್ಲಿಮರು  ಬಾವುಟ ತೆಗೆಸಿದ್ದಕ್ಕೆ ನಮಗೆ ಯಾವುದೇ ಬೇಸರವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಅನ್ನು ಈ ರೀತಿ ಬಳಸಿದರೆ ಸಿಗುತ್ತೆ ಹೆಚ್ಚಿನ ಪ್ರಯೋಜನ

ಇನ್ನು ಇಲ್ಲಿನ ದರ್ಗಾದ ಮುಂದೆ ಇರೋ ಚಾಂದಿನಿ ಚೌಕ್ ನಲ್ಲಿ ದೀಪದ ಕಂಬವಿದೆ. ಇದರಲ್ಲಿ ಬಹಳ ವರ್ಷದಿಂದಲೂ ಈದ್ ಬಾವುಟವನ್ನು ಕಟ್ಟುತ್ತಿದ್ವಿ. ಈಗ ಉರುಸ್ ಇರೋ ಕಾರಣ ಲೈಟ್ ಕಂಬಕ್ಕೆ ಹಸಿರು ಧ್ವಜವನ್ನು ಕಟ್ಟಿದ್ವಿ .ಪೊಲೀಸರು ಬಂದು ಇದು ಸರ್ಕಾರಿ ಕಂಬ ವಾದ್ದರಿಂದ ಧಾರ್ಮಿಕ ಬಾವುಟ ಕಟ್ಟೋ ಹಾಗಿಲ್ಲ ಎಂದು ಹೇಳಿದಾಗ ನಾವೇ ಬಾವುಟವನ್ನು ತೆಗೆದು ದರ್ಗಾದ ಮೇಲೆ ಕಟ್ಟಿದ್ದೇವೆ,. ನಾವು ಸಂವಿಧಾನವನ್ನು ಹೆಚ್ಚು ಗೌರವಿಸುತ್ತೇವೆ. ಆದ್ದರಿಂದ ಪೊಲೀಸರು ಹೇಳಿದ ಕೂಡಲೇ ಬಾವುಟ ತೆಗೆದಿದ್ದೇವೆ. ಇದರಲ್ಲಿ ಯಾವ ವಿವಾದವೂ ಇಲ್ಲ, ಏನೂ ಇಲ್ಲ,  ನಾವೆಲ್ಲಾ ಭಾರತೀಯರು ಎಲ್ಲರೂ ಒಗ್ಗಟ್ಟಾಗಿ ಒಂದಾಗೇ ಹೋಗಬೇಕಿದೆ ಎಂದು ದರ್ಗಾದ ಮುಖ್ಯಸ್ಥರು ಹೇಳಿದ್ರು

ಸದ್ಯ ಶಿವಾಜಿನಗರದಲ್ಲಿ ಸರ್ಕಾರಿ ಲೈಟ್ ಕಂಬಕ್ಕೆ ಕಟ್ಟಿದ್ದ ಮುಸ್ಲಿಂ ಬಾವುಟವನ್ನು ತೆರವು ಮಾಡಿ ರಾಷ್ಟ್ರಧ್ವಜ ಕಟ್ಟಿದ್ದಕ್ಕೆ ಯಾವುದೇ ಗಲಾಟೆಯಾಗಲಿ, ವಿವಾದವಾಗಲಿ ಆಗದೆ ಇರುವುದು ನಿಜಕ್ಕೂ ಖುಷಿಯ ವಿಚಾರ.‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News