ಮೈಸೂರು: ಕಾಂಗ್ರೆಸ್ ಮೈತ್ರಿ ಮುರಿದು ಬಿಳಲು ಸಿದ್ದರಾಮಯ್ಯ ನೇರ ಕಾರಣ. ಅವರ ಮಾತುಗಳಿಂದಲೇ ಈ ಮೈತ್ರಿ ಮುರಿದು ಬಿದ್ದಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರು ಮೇಯರ್-ಉಪಮೇಯರ್ ಚುನಾವಣೆ ಹಿನ್ನೆಲೆ ಮಾಧ್ಯಮದ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ(HD Kumaraswamy), ಕಳೆದ ಬಾರಿ ಅವರ ಒತ್ತಡದಿಂದಲೇ ಮೇಯರ್ ಸ್ಥಾನ ಬಿಟ್ಟು ಮೈತ್ರಿ ಆಗಿದ್ವಿ. ಈಗ ಅವರ ಹೇಳಿಕೆಗಳಿಂದ ಬೇಸತ್ತು ಮೈತ್ರಿ ಮುರಿದುಕೊಂಡಿದ್ದೇವೆ ಎಂದರು.
JOBS: ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸದ್ಯ ನಾವು ಯಾರೊಂದಿಗೂ ಹೋಗೋಲ್ಲ. ನಾವು ನಾಮಪತ್ರ ಸಲ್ಲಿಸುತ್ತೇವೆ. ನೋಡೋಣ ಯಾರಿಗೆ ಅವಕಾಶ ಇದೆ ಅವರು ಮೇಯರ್ ಆಗ್ತಾರೆ ಎಂದು ಹೇಳಿದರು.
ದೇವೇಗೌಡ(HD Devegouda)ರು ಯಾರೊಂದಿಗೂ ಹೊಂದಾಣಿಕೆ ಬೇಡ ಅಂದಿದ್ದಾರೆ. ಎರಡು ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಲು ಹೇಳಿದ್ದಾರೆ. ಅದಕ್ಕಾಗಿ ನಾವು ಯಾರ ಜೊತೆ ಗು ಮೈತ್ರಿ ಆಗಿಲ್ಲ. ಎರಡು ಪಕ್ಷಗಳಿಂದ ನಮಗೆ ಅನ್ಯಾಯ ಆಗಿದೆ. ಹಾಗಾಗಿ ನಮ್ಮ ಶಕ್ತಿ ತೋರಿಸುವ ಸಂದರ್ಭ ಬಂದಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕಿದೆ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೆಚ್ಡಿಕೆ ಸ್ಪಷ್ಟನೆ ನೀಡಿದ್ದಾರೆ.
Election Commission: ರಾಜ್ಯದಲ್ಲಿ 110 ಜಿಲ್ಲಾ ಪಂ. ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!
ಕರ್ನಾಟಕವನ್ನು ಅತ್ಯಂತ ಲಘುವಾಗಿ ಕಾಣುತ್ತಿರುವ ಪಕ್ಷ ಬಿಜೆಪಿ(BJP). ಈ ಹಿನ್ನೆಲೆ ಎರಡು ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದೇವೆ. ಅಕ್ಕಪಕ್ಕದ ರಾಜ್ಯಗಳಂತೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಬೇಕು. ಕೆಲವರು ನಮ್ಮನ್ನ ಬಿ ಟೀಮ್ ಎಂದು ಕರೆದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಗಳಿಸಲು ಕಾರಣವಾದ್ರೂ ಎಂದಿದ್ದಾರೆ.
Siddaramaiah: ನೂರು ಕ್ಷೇತ್ರಗಳಲ್ಲಿ 'ಕಾಂಗ್ರೆಸ್ ಸಮಾವೇಶ' ನಡೆಸಲು ಮಹತ್ವದ ಸಭೆ..!
ಜಿ.ಟಿ ದೇವೇಗೌಡ(GT Devegouda)ರು ಪರಿವರ್ತನೆ ಬಗ್ಗೆ ಮಾತನಾಡಿದ ಅವರು, ಹಲವಾರು ಸಂದರ್ಭದಲ್ಲಿ ಹಲವಾರು ನಾಯಕರು ಪರಿವರ್ತನೆ ಅಗೋದನ್ನ ನೋಡಿದ್ದೇವೆ. ಪರಿವರ್ತನೆ ಆಗಲು ಅವರಿಗೆ ಬಿಟ್ಟಿದ್ದು. ಈಗಾಗಲೇ ಪಕ್ಷ ಬಿಟ್ಟು ಹೋದಮೇಲೆ ಏನಾಗುತ್ತೆ ಎಂದು ಈಗಾಗಲೇ ಅವರಿಗೆ ಗೊತ್ತಾಗಿದೆ ಎಂದು ಹೇಳಿದರು.
Basavaraj Horatti: ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಸವರಾಜ ಹೊರಟ್ಟಿ!
ಕಾಂಗ್ರೆಸ್ನ ಎಲ್ಲ ನಾಯಕರು ಲಘುವಾಗಿ ಮಾತನಾಡಲ್ಲ. ಆದರೆ, ಕೆಲವರು ಲಘವಾಗಿ ಮಾತನಾಡುತ್ತಾರೆ. ಸಿದ್ದರಾಮಯ್ಯ(Siddaramaiah) ಅವರ ಪದೇ ಪದೇ ನಮ್ಮ ಪಕ್ಷವನ್ನು ಕೆಣಕುವ ಹೇಳಿಕೆಗಳೇ ನೀಡುತ್ತಿದ್ದಾರೆ. ಜಿ.ಟಿ ದೇವೇಗೌಡ, ಸಂದೇಶ್ ನಾಗರಾಜ್ ನಮ್ಮ ಅಭ್ಯರ್ಥಿಗೆ ಮತ ಹಾಕ್ತಾರೆ. ಡಿ.ಕೆ ಶಿವಕುಮಾರ್ ಮೇಲು ಒತ್ತಾಯ ಹಾಕಿ ಕೈಕಟ್ಟಿಹಾಕಿದ್ದಾರೆ(ಸಿದ್ದರಾಮಯ್ಯ). ಕಿಂಗ್ ಮೇಕರ್ ಸ್ಥಾನ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಗುರಿ 2023, ಯಾರು ಲಘುವಾಗಿ ಮಾತನಾಡುತ್ತಿದ್ದರು ಅವರಿಗೆ ಉತ್ತರ ಕೊಡಲು ಹೊರಟಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.
Madhu Bangarappa: 'ಮಧು ಬಂಗಾರಪ್ಪಗೆ ಕಾಂಗ್ರೆಸ್‌ಗೆ ಸ್ವಾಗತ : ಆದ್ರೆ ಮತ್ತೋರ್ವಗೆ ಅವಕಾಶವಿಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.