HD Deve Gowda : 'ಈ ಸಂಕಷ್ಟದಲ್ಲಿ ನನ್ನ ಹುಟ್ಟುಹಬ್ಬ ಆಚರಿಸುವುದು ಬೇಡ'

ಕೊರೋನಾ ಸಂಕಷ್ಟದಲ್ಲಿರುವಾಗ ಸಡಗರ, ಸಂಭ್ರಮದಿಂದ ನನ್ನ ಹುಟ್ಟು ಹಬ್ಬ ಆಚರಿಸುವುದು ಬೇಡ 

Last Updated : May 15, 2021, 04:33 PM IST
  • ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಭಿಮಾನಿಗಳಲ್ಲಿ ಪತ್ರ ಮೂಲಕ ವಿನಂತಿಸಿಕೊಂಡಿದ್ದಾರೆ
  • ಕೊರೋನಾ ಸಂಕಷ್ಟದಲ್ಲಿರುವಾಗ ಸಡಗರ, ಸಂಭ್ರಮದಿಂದ ನನ್ನ ಹುಟ್ಟು ಹಬ್ಬ ಆಚರಿಸುವುದು ಬೇಡ
  • ಕೋವಿಡ್ ಸಂದರ್ಭದಲ್ಲಿ ನಾವು ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆ ತೋರಿಸಬೇಕು
HD Deve Gowda : 'ಈ ಸಂಕಷ್ಟದಲ್ಲಿ ನನ್ನ ಹುಟ್ಟುಹಬ್ಬ ಆಚರಿಸುವುದು ಬೇಡ' title=

ಬೆಂಗಳೂರು : ರಾಜ್ಯದ ಜನರು ಮಹಾ ಮಾರಿ ಕೊರೋನಾ ಸಂಕಷ್ಟದಲ್ಲಿರುವಾಗ ಸಡಗರ, ಸಂಭ್ರಮದಿಂದ ನನ್ನ ಹುಟ್ಟು ಹಬ್ಬ ಆಚರಿಸುವುದು ಬೇಡ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಭಿಮಾನಿಗಳಲ್ಲಿ ಪತ್ರ ಮೂಲಕ ವಿನಂತಿಸಿಕೊಂಡಿದ್ದಾರೆ.

ಈ ಕುರಿತು ಬಹಿರಂಗ ಪತ್ರ ಬರೆದು ಮನವಿ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರು(HD Deve Gowda), ಕೋವಿಡ್ ಸಂದರ್ಭದಲ್ಲಿ ನಾವು ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆ ತೋರಿಸಬೇಕು. ಮೇ 18ರಂದು ನನ್ನ ಹುಟ್ಟುಹಬ್ಬದಂದು ಹಾರ, ತುರಾಯಿ, ಕೇಕ್, ಸಿಹಿಗಾಗಿ ಅನಗತ್ಯ ದುಂದುವೆಚ್ಚ ಮಾಡುವ ಬದಲಿಗೆ ನಿಮ್ಮ ನಿಮ್ಮ ಭಾಗದ ಕೊರೋನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅವರ ಅಗತ್ಯಗಳ ಪೂರೈಕೆಗೆ ಬಳಸಿದರೆ, ಅದು ನಿಜಕ್ಕೂ ಸದುಪಯೋಗವಾಗಲಿದೆ ಎಂದಿದ್ದಾರೆ. ಇಂತಹ ಕಾರ್ಯವನ್ನು ದೇವರು ಮೆಚ್ಚುತ್ತಾನೆ. ಅಭಿಮಾನಿಗಳ ಇಂತಹ ಸೇವಾ ಕಾರ್ಯ ನನಗೂ ಸಂತೋಷ ನೀಡುತ್ತದೆ ಎಂದು ಪಾತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :  ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿ -ಪ್ರಿಯಾಂಕ್ ಖರ್ಗೆ

ಮೇ 18ರಂದು ಅಭಿಮಾನಿಗಳು ಕಾರ್ಯಕರ್ತರು ಸಡಗರ, ಸಂಭ್ರಮದ ಕಾರ್ಯಕ್ರಮ ಹಮ್ಮಿಕೊಳ್ಳದೇ ರಾಜ್ಯದ ಜನರು ಕೊರೋನಾ(Corona) ನೋವಿನಲ್ಲಿ ತತ್ತರಿಸುತ್ತಿರುವ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ನೀವು ಇದ್ದಲ್ಲಿಯೇ ನಿಮ್ಮ ಅಭಿಮಾನ, ಹಾರೈಕೆ ರೂಪದಲ್ಲಿ ವ್ಯಕ್ತವಾಗಲಿ ಎಂದು ಗೌಡರು ಪಾತ್ರದಲ್ಲಿ ಮನವಿ ಮಾಡಿದ್ದಾರೆ‌.

ಇದನ್ನೂ ಓದಿ :  Tauktae Cyclone Effect : ತೌಕ್ತೆ ಸೈಕ್ಲೋನ್ ಪರಿಣಾಮ ರಾಜ್ಯದ ಹಲವೆಡೆ ಭಾರೀ ಮಳೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News