ಮೈಸೂರು : ಮಾಜಿ ಸ್ಪೀಕರ್ ಕೃಷ್ಣ ತಮ್ಮ ನಿವಾಸದಲ್ಲಿ ಇಂದು ನಿಧನರಾಗಿದ್ದಾರೆ.
ನಗರದ ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿರುವಂತ ನಿವಾಸದಲ್ಲಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಮಾಜಿ ಸ್ಪೀಕರ್ ಕೃಷ್ಣ(KR Pate Krishn) ಅವರು ಇಂದು ನಿಧನರಾಗಿದ್ದಾರೆ.
ಇದನ್ನೂ ಓದಿ : K Sudhakar : 'ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗವಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ'
ಮಾಜಿ ಸ್ಪೀಕರ್ ಕೃಷ್ಣ ಅವರು ಲಿವರ್ ಕ್ಯಾನ್ಸರ್(Liver Cancer) ನಿಂದ ಬಳಲುತ್ತಿದ್ದರು. ಇದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದ ಕಾರಣ ಆಸ್ಪತ್ರೆಯಿಂದ ಮನೆಗೆ ಕರೆತಂದು ಚಿಕಿತ್ಸೆ ಮುಂದುವರೆಸಲಾಗಿತ್ತು.
ಇದನ್ನೂ ಓದಿ : Lockdown Extending : ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಬಹುತೇಕ ಫಿಕ್ಸ್ : ಸಚಿವ ಸುಧಾಕರ್ ಸ್ಪಷ್ಟನೆ!
ಕೃಷ್ಣ ಅವರು 2006 ರಿಂದ 2008ರವೆರಗೆ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಮೂರು ಬಾರಿ ಕೆಆರ್ ಪೇಟೆಯಿಂದ ಜೆಡಿಎಸ್(JDS) ಶಾಸಕರಾಗಿ ಆಯ್ಕೆ ಆಗಿದ್ದರು. ಕೊನೆಯಲ್ಲಿ ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರಿದ್ದರು. 1996ರಲ್ಲಿ ಮಂಡ್ಯ ಸಂಸದರಾಗಿದ್ದರು.
ಇದನ್ನೂ ಓದಿ : Covid-19 Vaccination : ರಾಜ್ಯದಲ್ಲಿ ನಾಳೆಯಿಂದ 18 ರಿಂದ 44 ವಯಸ್ಸಿನವರಿಗೆ ಕೊರೋನಾ ಲಸಿಕೆ!
ಎಸ್ ಆರ್ ಬೊಮ್ಮಾಯಿ(SR Bommai) ಸಚಿವ ಸಂಪುಟದಲ್ಲಿ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಕೊತ್ತಮಾರನಹಳ್ಳಿಯಲ್ಲಿ ಇಂದು ಸಂಜೆ ನೆರವೇರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.