ಟಿ ಮೋಹನದಾಸ್ ಎಂ ಪೈ ಇನ್ನಿಲ್ಲ

 ಎಂಜಿಎಂ ಕಾಲೇಜು ಟ್ರಸ್ಟ್‌ನ ಅಧ್ಯಕ್ಷ, ಉದಯವಾಣಿ ಸಂಸ್ಥಾಪಕ ಮತ್ತು ಡಾ ಟಿಎಂಎ ಪೈ ಅವರ ಹಿರಿಯ ಪುತ್ರ ಹೊನ್ಸೆ ಮೋಹನ್‌ದಾಸ್ ಎಂ ಪೈ ಅವರು ಜುಲೈ 31 ರ ಭಾನುವಾರದಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

Written by - Zee Kannada News Desk | Last Updated : Aug 1, 2022, 12:25 AM IST
  • 1970ರಲ್ಲಿ ಅವರ ನೇತೃತ್ವದಲ್ಲಿ ಉದಯವಾಣಿ ಸ್ಥಾಪನೆಯಾಯಿತು. ಉದಯವಾಣಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕೂಡ ಅವರು ಸೇವೆ ಸಲ್ಲಿಸಿದ್ದಾರೆ.
  • ಅವರು ಎರಡು ಅವಧಿಗೆ ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು.
 ಟಿ ಮೋಹನದಾಸ್ ಎಂ ಪೈ ಇನ್ನಿಲ್ಲ  title=
Photo Courtsey: Twitter

ಮಣಿಪಾಲ್: ಎಂಜಿಎಂ ಕಾಲೇಜು ಟ್ರಸ್ಟ್‌ನ ಅಧ್ಯಕ್ಷ, ಉದಯವಾಣಿ ಸಂಸ್ಥಾಪಕ ಮತ್ತು ಡಾ ಟಿಎಂಎ ಪೈ ಅವರ ಹಿರಿಯ ಪುತ್ರ ಹೊನ್ಸೆ ಮೋಹನ್‌ದಾಸ್ ಎಂ ಪೈ ಅವರು ಜುಲೈ 31 ರ ಭಾನುವಾರದಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಜೂನ್ 2, 1933 ರಂದು ಜನಿಸಿದ ಟಿ ಮೋಹನದಾಸ್ ಎಂ ಪೈ ಅವರು ಉಡುಪಿಯ ಎಂಜಿಎಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದರು.ಅವರು ಡಾ ಟಿಎಂಎ ಪೈ ಫೌಂಡೇಶನ್‌ನ ಅಧ್ಯಕ್ಷರಾಗಿ ಐಸಿಡಿಎಸ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಈಗ ಅವರು ತಮ್ಮ ಕಿರಿಯ ಸಹೋದರರಾದ ಡಾ ಟಿ ರಾಮದಾಸ್ ಪೈ, ಡಾ ಟಿ ನಾರಾಯಣ ಪೈ, ಡಾ ಟಿ ಅಶೋಕ್ ಪೈ, ಟಿ ಸತೀಶ್ ಯು ಪೈ, ಸಹೋದರಿಯರಾದ ವಸಂತಿ ಆರ್ ಪೈ, ಜಯಂತಿ ಪೈ, ಇಂದುಮತಿ ಪೈ ಮತ್ತು ಆಶಾ ಪೈ ಅವರನ್ನು ಅಗಲಿದ್ದಾರೆ.

ಇದನ್ನೂ ಓದಿ: Monkeypox Case : ರಾಜ್ಯದ ಜನರೇ ಎಚ್ಚರ : ಬೆಂಗಳೂರಲ್ಲಿ ಮಂಕಿಪಾಕ್ಸ್ ಗುಣಲಕ್ಷಣಗಳಿರುವ ವ್ಯಕ್ತಿ ಪತ್ತೆ

ಮಣಿಪಾಲ ಅಕಾಡೆಮಿ ಶಾಲೆ ಮತ್ತು ಉಡುಪಿ ಮಾದರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲೆ ಮತ್ತು ಎಂಜಿಎಂ ಕಾಲೇಜಿನಲ್ಲಿ ಮಧ್ಯಂತರ ಶಿಕ್ಷಣ ಪೂರೈಸಿದರು.ನಂತರ ಅವರು ಕೊಲ್ಲಾಪುರದಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದರು.

1970ರಲ್ಲಿ  ಉದಯವಾಣಿ ದಿನಪತ್ರಿಕೆಯನ್ನು ಹುಟ್ಟುಹಾಕುವಲ್ಲಿ ಶ್ರಮಿಸಿದ ಪೈ ಅವರು ಮುಂದೆ ಅದರ ವ್ಯವಸ್ಥಾಪಕ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸಿದರು.

ಅವರು ಎರಡು ಅವಧಿಗೆ ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿಸುವುದರ ಜೊತೆಗೆ ಪ್ರಾದೇಶಿಕ ಸಂಪನ್ಮೂಲ ಕೇಂದ್ರ, ಯಕ್ಷಗಾನ ಕೇಂದ್ರ, ಕನಕ ಅಧ್ಯಯನ ಪೀಠ, ಗಾಂಧಿ ಅಧ್ಯಯನ ಕೇಂದ್ರ, ಆರ್ ಜಿ ಪೈ ಕೇಂದ್ರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: PSI Recruitment scam : ಪಿಎಸ್ಐ ನೇಮಕಾತಿ ಅಕ್ರಮ : ಸ್ಟ್ರಾಂಗ್ ರೂಮ್ ಗೆ ನುಗ್ಗಿ 22 OMR ಶೀಟ್ ತಿದ್ದಿದ್ದ ಪೊಲೀಸರು

ಮಣಿಪಾಲದ ಸ್ಮೃತಿ ಭವನದಲ್ಲಿ ಡಾ ಟಿಎಂಎ ಪೈ ಅವರ ಸ್ಮರಣಾರ್ಥವಾಗಿ ಮೀಸಲಾಗಿರುವ ಮ್ಯೂಸಿಯಂನಲ್ಲಿ ತಮ್ಮ ತಂದೆಯ ವಸ್ತುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅವರು ಹೊತ್ತಿದ್ದರು.ವಿಜಯನಾಥ ಶೆಣೈ ಅವರೊಂದಿಗೆ ಮಣಿಪಾಲದಲ್ಲಿ ಹೆರಿಟೇಜ್ ವಿಲೇಜ್ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈಗ ಅವರ ಪಾರ್ಥೀವ ಶರೀರವನ್ನು ಆಗಸ್ಟ್ 1ರ ಸೋಮವಾರ ಬೆಳಗ್ಗೆ 9 ಗಂಟೆಗೆ ಎಂಜಿಎಂ ಕಾಲೇಜಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಅವರ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಕಂಬನಿ ಮೀಡಿದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News