ರೈತರ ಸಾಲ ಮನ್ನಾವನ್ನು ಚಾಮುಂಡೇಶ್ವರಿಯೇ ನೋಡಿಕೊಳ್ಳುತ್ತಾಳೆ: ಡಿಕೆಶಿ

ಭಕ್ತರ ಎಲ್ಲ ಸಮಸ್ಯೆಗಳನ್ನೂ ಶ್ರೀ ಚಾಮುಂಡೇಶ್ವರಿಯೇ ನೋಡಿಕೊಳ್ಳುತ್ತಾಳೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Updated: Aug 10, 2018 , 03:51 PM IST
ರೈತರ ಸಾಲ ಮನ್ನಾವನ್ನು ಚಾಮುಂಡೇಶ್ವರಿಯೇ ನೋಡಿಕೊಳ್ಳುತ್ತಾಳೆ: ಡಿಕೆಶಿ

ಮೈಸೂರು: ರಾಜ್ಯದಲ್ಲಿ ರೈತರ ಸಾಲ ಮನ್ನಾ ವಿಚಾರವನ್ನು ಶ್ರೀ ಚಾಮುಂಡೇಶ್ವರಿ ದೇವಿಯೇ ನೋಡಿಕೊಳ್ಳುತ್ತಾಳೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಕಡೇ ಆಷಾಢ ಶುಕ್ರವಾರದ ನಿಮಿತ್ತ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 

ದೇವರ ದರ್ಶನ ಪಡೆಯಲು ಬೆಟ್ಟಕ್ಕೆ ಬಂದಿದ್ದೇನೆಯೇ ಹೊರತು, ರಾಜಕೀಯ ಮಾತನಾಡಲು ಅಲ್ಲ. ಭಕ್ತರ ಎಲ್ಲ ಸಮಸ್ಯೆಗಳನ್ನೂ ಶ್ರೀ ಚಾಮುಂಡೇಶ್ವರಿಯೇ ನೋಡಿಕೊಳ್ಳುತ್ತಾಳೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರುವ ಮುನ್ನ ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಸಂಪೂರ್ಣ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದಿರುವ ಸರ್ಕಾರ, 20.38 ಲಕ್ಷ ರೈತರ 9448 ಕೋಟಿ ರೂ. ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು. ಈ ಬಗ್ಗೆ ರೈತರು ಅಸಮಧಾನ ವ್ಯಕ್ತಪಡಿಸಿದ್ದರು.