ಚಿತ್ರದುರ್ಗ: ಹಗ್ಗದಿಂದ ಕಟ್ಟಿಹಾಕಿ, ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ, ಐವರ ಬಂಧನ

Robbers arrested in Chitradurga: ನವೆಂಬರ್ 28ರಂದು ಬಂಗಾರಕ್ಕನಹಳ್ಳಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಪೊಲೀಸರು ಐವರನ್ನು ಬಂಧಿಸಿದ್ದಾರೆ. 

Edited by - Zee Kannada News Desk | Last Updated : Dec 23, 2021, 11:22 AM IST
  • ಚಿತ್ರದುರ್ಗದಲ್ಲಿ ತೋಟದ ಮನೆಗೆ ನುಗ್ಗಿ ದರೋಡೆ
  • ಐವರು ಖತರ್ನಾಕ್ ದರೋಡೆಕೋರರ ಬಂಧನ
  • ನವೆಂಬರ್ 28ರಂದು ಬಂಗಾರಕ್ಕನಹಳ್ಳಿಯಲ್ಲಿ ನಡೆದಿದ್ದ ಘಟನೆ
ಚಿತ್ರದುರ್ಗ: ಹಗ್ಗದಿಂದ ಕಟ್ಟಿಹಾಕಿ, ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ, ಐವರ ಬಂಧನ  title=
ದರೋಡೆ

ಚಿತ್ರದುರ್ಗ: ತೋಟದ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಐವರು ಖತರ್ನಾಕ್ ದರೋಡೆಕೋರರ (Robbers arrested in Chitradurga) ಹೆಡೆಮುರಿ ಕಟ್ಟುವಲ್ಲಿ ಚಿತ್ರದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. 

ನವೆಂಬರ್ 28ರಂದು ಬಂಗಾರಕ್ಕನಹಳ್ಳಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ (Robbery in Chitradurga) ಸಂಬಂಧಿಸಿದಂತೆ ಚಿತ್ರದುರ್ಗ ಪೊಲೀಸರು ಐವರನ್ನು ಬಂಧಿಸಿದ್ದಾರೆ. 

ಚಿತ್ರದುರ್ಗ ತಾಲೂಕಿನ ಬಂಗಾರಕ್ಕನಹಳ್ಳಿಯಲ್ಲಿ ನ.28 ರಂದು ದರೋಡೆ ನಡೆದಿತ್ತು. ತಿಪ್ಪೇಸ್ವಾಮಿ ಎಂಬುವರು ತೋಟದ ಮನೆಗೆ ನುಗ್ಗಿದ ಖದೀಮರು, ಮನೆಯಲ್ಲಿದ್ದ ನಾಲ್ವರನ್ನು ಹಗ್ಗದಿಂದ ಕಟ್ಟಿಹಾಕಿದ್ದಾರೆ. 

Robbers arrested in Chitradurga

ಬಳಿಕ ಮಾರಕಾಸ್ತ್ರಗಳಿಂದ ಬೆದರಿಸಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಗುರುತು ಸಿಗದಂತೆ ಮಾಸ್ಕ್, ಗ್ಲೌಸ್ ಧರಿಸಿ ಡಕಾಯಿತಿ ನಡೆಸಿದ್ದರು.

ಈ ಸಂಬಂಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲಿಸಿಕೊಂಡು ತನಿಕೆ ಆರಂಭಿಸಿದ ಪೊಲೀಸರು ಐವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬೆಂಗಳೂರು ಮೂಲದ ಅಭಿಷೇಕ್, ವಿಕಾಸ್, ವಜ್ರಮಣಿ ಹಾಗೂ ಚಿಕ್ಕಗೊಂಡನಹಳ್ಳಿಯ ಶಿವಧ್ವಜ, ತಿಪ್ಪೇಸ್ವಾಮಿ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 1 ಲಕ್ಷ ರೂ. ನಗದು, 3 ಲಕ್ಷ 37 ಸಾವಿರ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಅಲ್ಲದೆ ಕೃತ್ಯಕ್ಕೆ ಬಳಸಿದ ಕಾರು, ಮೂರು ಮೊಬೈಲ್ ಗಳನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ನಾಯಿಗೆ 'ಸೋನು' ಎಂದು ಹೆಸರಿಟ್ಟ ಮಹಿಳೆ.. ಕೋಪಗೊಂಡು ಬೆಂಕಿ ಹಚ್ಚಿದ ಪಕ್ಕದ ಮನೆಯವರು.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News