Republic Day: ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ‘ಕರ್ನಾಟಕ ಕರಕುಶಲ ಕಲಾ ವೈಭವ’ದ ದರ್ಶನ

ವಿಶ್ವಪ್ರಸಿದ್ಧ ಚನ್ನಪಟ್ಟಣದ ಗೊಂಬೆ, ಕಿನ್ನಾಳ ಗೊಂಬೆ, ಇಳಕಲ್‌ ಸೀರೆ, ಉಡುಪಿ ಸೀರೆ, ಮೈಸೂರು ಗಾಂಜೀಫ ಕಲೆಗಳೂ ಸೇರಿದಂತೆ ಜಿಐ ಟ್ಯಾಗ್‌ ಇರುವ ರಾಜ್ಯದ 16 ಕರಕುಶಲ ವಸ್ತುಗಳು(Handicrafts) ಅನಾವರಣಗೊಳ್ಳಲಿವೆ.

Written by - Zee Kannada News Desk | Last Updated : Jan 16, 2022, 09:42 AM IST
  • ಜ.26 ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ‘ಕರ್ನಾಟಕ ಕರಕುಶಲ ಕಲಾ ವೈಭವ’ದ ದರ್ಶನ
  • ‘ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’ ಧ್ಯೇಯದಡಿ ಸಿದ್ಧಗೊಳ್ಳುತ್ತಿರುವ ಸ್ತಬ್ಧಚಿತ್ರ
  • ಚನ್ನಪಟ್ಟಣ ಗೊಂಬೆ, ಕಿನ್ನಾಳ ಗೊಂಬೆ, ಇಳಕಲ್‌ ಸೀರೆ ಸೇರಿ ಜಿಐ ಟ್ಯಾಗ್‌ ಇರುವ 16 ಕರಕುಶಲ ವಸ್ತುಗಳ ಅನಾವರಣ
Republic Day: ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ‘ಕರ್ನಾಟಕ ಕರಕುಶಲ ಕಲಾ ವೈಭವ’ದ ದರ್ಶನ  title=
ಗಣರಾಜ್ಯೋತ್ಸವದಲ್ಲಿ ಕರಕುಶಲ ಕಲಾ ವೈಭವದ ದರ್ಶನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥದಲ್ಲಿ ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ(Republic Day 2022) ‘ಕರ್ನಾಟಕ ಕರಕುಶಲ ಕಲಾ ವೈಭವ’ದ ವಿಶ್ವರೂಪ ದರ್ಶನವಾಗಲಿದೆ.

‘ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎನ್ನುವ ಧ್ಯೇಯದಡಿ ಸಿದ್ಧಗೊಳ್ಳುತ್ತಿರುವ ಸ್ತಬ್ಧಚಿತ್ರ(Tableau)ವು ಗಣರಾಜ್ಯೋತ್ಸವ ದಿನದ ಮೆರವಣಿಗೆಯಲ್ಲಿ ಸಾಗಲಿವೆ. ವಿಶ್ವಪ್ರಸಿದ್ಧ ಚನ್ನಪಟ್ಟಣದ ಗೊಂಬೆ, ಕಿನ್ನಾಳ ಗೊಂಬೆ, ಇಳಕಲ್‌ ಸೀರೆ, ಉಡುಪಿ ಸೀರೆ, ಮೈಸೂರು ಗಾಂಜೀಫ ಕಲೆಗಳೂ ಸೇರಿದಂತೆ ಜಿಐ ಟ್ಯಾಗ್‌ ಇರುವ ರಾಜ್ಯದ 16 ಕರಕುಶಲ ವಸ್ತುಗಳು(Handicrafts) ಅನಾವರಣಗೊಳ್ಳಲಿವೆ.

ಇದನ್ನೂ ಓದಿ: ಪಿಯುಸಿ ತೇರ್ಗಡೆಯಾಗಿದ್ದಿರಾ? ಹಾಗಿದ್ದಲ್ಲಿ ಈ ಜಿಲ್ಲೆಯ ಯುವಕರಿಗೆ ಇಲ್ಲಿದೆ ಉದ್ಯೋಗದ ಸುವರ್ಣಾವಕಾಶ..!

ಕರ್ನಾಟಕದ ಕರಕುಶಲ ಕಲೆ(Handicrafts Tableau)ಗಳನ್ನು ಬಿಂಬಿಸುವ ಸ್ತಬ್ಧಚಿತ್ರ ಗಣರಾಜೋತ್ಸವ(Republic Day Parade)ದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ರಾಜ್ಯದ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರ ಇದಾಗಿದೆ. ಸತತ 13ನೇ ವರ್ಷವೂ ಕರ್ನಾಟಕ ಟ್ಯಾಬ್ಲೋ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಹರ್ಷ

‘ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’ ವಿಷಯಾಧಾರಿತ ಸ್ತಬ್ಧಚಿತ್ರವು ಈ ಬಾರಿಯ ಗಣರಾಜ್ಯೋತ್ಸವಕ್ಕೆ ಆಯ್ಕೆಯಾಗಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ಧಚಿತ್ರ ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಗೆ ಆಯ್ಕೆಯಾಗಿರುವುದು ಸಂತಸದ ಸಂಗತಿ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: JOB News: ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ನೇಮಕಕ್ಕೆ ಅರ್ಜಿ ಆಹ್ವಾನ

‘ಸತತವಾಗಿ 13ನೇ ಬಾರಿ ರಾಜ್ಯದ ಸ್ತಬ್ಧಚಿತ್ರ(Karnataka Tableau) ಆಯ್ಕೆಯಾಗಿದ್ದು, 12 ರಾಜ್ಯಗಳ ಪೈಕಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರ ಕರ್ನಾಟಕದ್ದಾಗಿದೆ’ ಅಂತಾ ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News