ಬೆಂಗಳೂರಿನ ಕೆಲವು ಕಡೆ ಮಾಸ್ಕ್ ಧರಿಸದಿದ್ದರೆ ಬೀಳಲಿದೆ ಲಕ್ಷ ರೂ.ವರೆಗೆ ದಂಡ

200-300 ರೂ. ದುಡಿಯುವ ಬೀದಿ ಬದಿ ವ್ಯಾಪಾರಿಗಳಿಗೆ 5,000 ರೂ. ದಂಡ ವಿಧಿಸಿದ್ದನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಈ ರೀತಿಯ ದಂಧೆಗೆ ಇಳಿಯುವುದು ಸರಿಯಲ್ಲ. ಈ ಕ್ರಮವನ್ನು ಸರ್ಕಾರ ಮತ್ತೊಮ್ಮೆ ಪರಾಮರ್ಶಿಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.

Last Updated : Dec 7, 2020, 11:03 AM IST
  • ಸಾಂಕ್ರಮಿಕ ರೋಗಗಳ ಸುಗ್ರೀವಾಜ್ಞೆಯ ಅನ್ವಯ ಜನ ನಿಯಮ ಉಲ್ಲಂಘನೆ ಮಾಡಿದರೆ 10 ಸಾವಿರ ರೂಪಾಯಿಗಳಿಂದ 1 ಲಕ್ಷದವರೆಗೆ ದಂಡ ವಿಧಿಸಲಾಗುವುದು- ಬಿಬಿಎಂಪಿ
  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಈ ಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ
  • ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದಿಂದ ಆಕ್ರೋಶ
ಬೆಂಗಳೂರಿನ ಕೆಲವು ಕಡೆ ಮಾಸ್ಕ್ ಧರಿಸದಿದ್ದರೆ ಬೀಳಲಿದೆ ಲಕ್ಷ ರೂ.ವರೆಗೆ ದಂಡ title=
File Image

ಬೆಂಗಳೂರು: ಕ್ರೂರಿ ಕೊರೊನಾಗೆ ಲಸಿಕೆ ಯಾವಾಗ ಬರುತ್ತದೋ ಏನೋ? ಅಲ್ಲಿಯವರೆಗೆ ಮಾಸ್ಕ್ ಹಾಕಿಕೊಳ್ಳುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯ. ಇದಲ್ಲದೆ ಈಗ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಕೊರೊನಾ ಅಲೆ ಬರುತ್ತಿದೆ. ಈ ಎಲ್ಲಾ ಕಾರಣಗಳಿಂದ ಸರ್ಕಾರ ಮಾಸ್ಕ್ (MASK) ಹಾಕದವರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ.

ದಂಡ ಎಂದರೆ ನೂರು, ಸಾವಿರ ಅಲ್ಲ, ಲಕ್ಷ‌ ರೂಪಾಯಿವರೆಗೂ ದಂಡ ವಿಧಿಸಲು ಮುಂದಾಗಿದೆ. ನಂಬಲು ಕಷ್ಟ ಆಗುತ್ತಿರಬಹುದು, ಆದರೆ ಇದು ನಿಜ. ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ಲಕ್ಷ‌ ರೂಪಾಯಿವರೆಗೂ ದಂಡ ವಿಧಿಸಲು ಸ್ಥಳೀಯ ಆಡಳಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಜ್ಜಾಗಿದೆ.

ನೀವು ಧರಿಸುತ್ತಿರುವ Mask ಅಸಲಿಯೇ/ನಕಲಿಯೇ ಎಂದು ಹೀಗೆ ತಿಳಿಯಿರಿ

ಸಾಂಕ್ರಮಿಕ ರೋಗಗಳ ಸುಗ್ರೀವಾಜ್ಞೆಯ ಅನ್ವಯ ಜನ ನಿಯಮ ಉಲ್ಲಂಘನೆ ಮಾಡಿದರೆ 10 ಸಾವಿರ ರೂಪಾಯಿಗಳಿಂದ 1 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಬೆಂಗಳೂರು (Bengaluru) ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರತ ಆರೋಗ್ಯ ನಿರೀಕ್ಷಕರು ಹಾಗೂ ವಾರ್ಡ್‌ ಮಾರ್ಷಲ್ ದಂಡ ವಿಧಿಸಲಿದ್ದಾರೆ.

ಎಲ್ಲಿ? ಎಷ್ಟು ದಂಡ?

  • ಸ್ವಸಹಾಯ ಪದ್ಧತಿ ಇರುವ ದರ್ಶಿನಿ ಹೋಟೆಲ್, ‌ಅಂಗಡಿ ಮುಂಗಟ್ಟುಗಳಲ್ಲಿ ಜನರು ಮಾಸ್ಕ್ ಧರಿಸದಿದ್ದರೆ 5,000 ರೂ. ದಂಡ.
  • ಹವಾನಿಯಂತ್ರಿತವಲ್ಲದ ರೆಸ್ಟೋರೆಂಟ್, ಪಾರ್ಟಿ ಹಾಲ್, ಖಾಸಗಿ ಬಸ್ ನಿಲ್ದಾಣ, ಸಾರ್ವಜನಿಕ‌ ಸ್ಥಳಗಳಲ್ಲಿ 25,000 ರೂ. ದಂಡ.
  • ಸಾರ್ವಜನಿಕ‌ ಸಭೆ ಸಮಾರಂಭ, ಸಮಾವೇಶ ಆಯೋಜಕರಿಗೆ 50,000 ರೂ. ದಂಡ.
  • ಹವಾನಿಯಂತ್ರಿತ ರೆಸ್ಟೋರೆಂಟ್, ಪಾರ್ಟಿ ಹಾಲ್, ಬ್ರಾಂಡೆಡ್‌ ಶಾಪ್, ಸಿನಿಮಾ ‌ಹಾಲ್, ಮಲ್ಟಿಪ್ಲೆಕ್ಸ್, ಶಾಪಿಂಗ್‌ ಮಾಲ್​ಗಳಲ್ಲಿ 1 ಲಕ್ಷ ರೂ. ದಂಡ‌‌.

ಸರ್ಕಾರದ ಮಹತ್ವದ ನಿರ್ಧಾರ: ಕೇವಲ 4 ರೂಪಾಯಿಗೆ ಸಿಗಲಿದೆ ಟ್ರಿಪಲ್ ಲೇಯರ್ ಮಾಸ್ಕ್

ಸಾರ್ವಜನಿಕರಿಂದ  ಭಾರೀ ವಿರೋಧ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಈ ಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. 200-300 ರೂ. ದುಡಿಯುವ ಬೀದಿ ಬದಿ ವ್ಯಾಪಾರಿಗಳಿಗೆ 5,000 ರೂ. ದಂಡ ವಿಧಿಸಿದ್ದನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಈ ರೀತಿಯ ದಂಧೆಗೆ ಇಳಿಯುವುದು ಸರಿಯಲ್ಲ. ಈ ಕ್ರಮವನ್ನು ಸರ್ಕಾರ ಮತ್ತೊಮ್ಮೆ ಪರಾಮರ್ಶಿಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.

ಅನ್ಲಾಕ್ ಪ್ರಕ್ರಿಯೆ ಶುರುವಾದ ನಂತರ ಮಾಸ್ಕ್ ಧರಿಸುವುದನ್ನು ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದಾದ ಮೇಲೆ ಈಗಾಗಲೇ ಸರ್ಕಾರ ದುಬಾರಿ ದಂಡ ವಿಧಿಸಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ದಂಡದ ಪ್ರಮಾಣವನ್ನು ಇಳಿಸಲಾಗಿತ್ತು. ಆದರೀಗ ಮತ್ತೆ ಒಂದು ಲಕ್ಷದ ರೂಪಾಯಿವರೆಗೂ ದಂಡ ವಿಧಿಸಲು ಮುಂದಾಗಿದೆ.

Trending News