ಸಿಎಂ ಸಿದ್ದರಾಮಯ್ಯರ ಪತ್ನಿಗೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿರುವುದು ಅಕ್ರಮ ಎಂಬುದು ಪ್ರತಿಪಕ್ಷದವರ ಆರೋಪ. ಆದರೆ 50:50 ಅನುಪಾತದಲ್ಲಿ ಹಂಚಿಕೆ ಮಾಡುವ ನಿರ್ಧಾರ ಕೈಗೊಂಡಿದ್ದು ಯಾರು? ಬಿಜೆಪಿ ಸರ್ಕಾರವಲ್ಲವೇ"? ಎಂದು ಕೆಜೆ ಜಾರ್ಜ್ ಪ್ರಶ್ನಿಸಿದರು.
ಡಿ.ರೂಪಾ, ಸಿಂಧೂರಿಗೆ ಸರ್ಕಾರಿಂದ ಖಡಕ್ ಸೂಚನೆ ನೀಡಿದೆ.. ನಿಮಗೆ ಆರೋಪಗಳನ್ನ ಮಾಡಲು ಬೇರೆ ಸೂಕ್ತ ವೇದಿಕೆ ಇದೆ. ಆದ್ರೆ ಅದನ್ನು ಬಿಟ್ಟು ನೀವು ಮಾಧ್ಯಮ ಮುಂದೆ ಹೋಗಿದ್ದೀರಾ. ಇದು ಭಾರತೀಯ ಸರ್ವೀಸ್ ನಿಯಮಗಳ ಉಲ್ಲಂಘನೆ ಆಗುತ್ತೆ. ಇನ್ನು ಮಾಧ್ಯಮದ ಮುಂದೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
ಡಿ.ಕೆ.ರವಿ ಸಾವಿನ ಹಿಂದೆ ಸಿಂಧೂರಿ ಪ್ರಚೋದನೆ ಆರೋಪ ಇದೆ ಅನ್ನೋ ಮೂಲಕ ಡಿ.ರೂಪಾ ಪರ ವಕೀಲ ಸೂರ್ಯ ಮುಕುಂದರಾಜ್ ಬ್ಯಾಟಿಂಗ್ ಮಾಡಿದ್ದಾರೆ. ಡಿ.ಕೆ.ರವಿ ಆತ್ಮಹತ್ಯೆ ಕುರಿತು ಸಿಬಿಐ ರಿಪೋರ್ಟ್ನಲ್ಲಿ ಇರೋ ಸ್ಫೋಟಕ ಮಾಹಿತಿ ನೀಡಿದ್ದಾರೆ..
Kannada Govt Issued Notice Against Officers: ಇಬ್ಬರೂ ಅಧಿಕಾರಿಗಳ ಈ ವರ್ತನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ಈ ನೋಟಿಸ್ ಜಾರಿ ಮಾಡಲಾಗಿದೆ.
ಐಪಿಎಸ್ ಡಿ.ರೂಪ ಮತ್ತು ಐಎಎಸ್ ರೋಹಿಣಿ ನಡುವಿನ ಹಾದಿ ಬೀದಿ ರಂಪಾಟದ ನಡುವೆ 8 ವರ್ಷದಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಡಿಕೆ ರವಿ ಸಾವು ಮತ್ತು ಸುದ್ದಿಯಾಗುತ್ತಿದೆ. ಡಿ. ರೂಪ ಪದೇ ಪದೇ ರವಿ ಹೆಸರನ್ನ ಬಳಸಿರೋದಕ್ಕೆ ಒಂದಷ್ಟು ಪರ ವಿರೋಧದ ಚರ್ಚೆಗಳಾಗುತ್ತಿವೆ.
ರೋಹಿಣಿ ಸಿಂಧೂರಿಗೆ ಡಿ. ರೂಪಾ ಮತ್ತೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.. ರವಿ ಮಾನಸಿಕ ಅಸ್ವಸ್ಥತೆಯಿಂದ ಸತ್ತರು ಎಂದು ಹೇಳ್ತಾರೆ. ಈ ಮೂಲಕ ರವಿ ಸಾವನ್ನು ನಿಕೃಷ್ಟವಾಗಿ ಹೀಯಾಳಿಸಿದ್ದಾರೆ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಫೈನಲ್ ರಿಪೋರ್ಟ್ನಲ್ಲಿದೆ. ಡಿ.ಕೆ. ರವಿಗೆ ಸಿಂಧೂರಿ ಏಕೆ ಉತ್ತೇಜನ ನೀಡಬೇಕಿತ್ತು? ಎಂದು ಪ್ರಶ್ನಿಸಿದ್ದಾರೆ..
IAS vs IPS Fight: ಐಎಸ್ ಅಧಿಕಾರಿ ರೋಹಿಣಿ ವಿರುದ್ಧ ಕರ್ತವ್ಯ ಲೋಪದ ಬಗ್ಗೆ ಡಿ.ರೂಪಾ ಆರೋಪ ಮಾಡಿದ್ದಾರೆ. ಕರ್ತವ್ಯ ಲೋಪ, ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ದಾಖಲೆಯಿದೆ ಎಂದಿರುವ ಡಿ.ರೂಪಾ 19 ಆರೋಪಗಳ ಪಟ್ಟಿಯನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.