ರಾಜಕೀಯ ಕ್ಷೀಪ್ರ ಕ್ರಾಂತಿ ಹಿನ್ನಲೆ; ಅಮೇರಿಕಾದಿಂದ ವಾಪಾಸಾದ ಸಿಎಂ ಕುಮಾರಸ್ವಾಮಿ

ಸಿಎಂ ಕುಮಾರಸ್ವಾಮಿ ಅಮೇರಿಕಾಕ್ಕೆ ತೆರಳಿದ ಬೆನ್ನಲ್ಲೇ ರಾಜ್ಯದಲ್ಲಿ 11 ಶಾಸಕರು ರಾಜೀನಾಮೆ ನೀಡುವ ಮೂಲಕ ಈಗ ಸಮ್ಮಿಶ್ರ ಸರ್ಕಾರ ಈಗ ತೂಗೊಯ್ಯಾಲೆಯಲ್ಲಿದೆ. 

Last Updated : Jul 7, 2019, 07:11 PM IST
ರಾಜಕೀಯ ಕ್ಷೀಪ್ರ ಕ್ರಾಂತಿ ಹಿನ್ನಲೆ; ಅಮೇರಿಕಾದಿಂದ ವಾಪಾಸಾದ ಸಿಎಂ ಕುಮಾರಸ್ವಾಮಿ  title=
file photo

ಬೆಂಗಳೂರು: ಸಿಎಂ ಕುಮಾರಸ್ವಾಮಿ ಅಮೇರಿಕಾಕ್ಕೆ ತೆರಳಿದ ಬೆನ್ನಲ್ಲೇ ರಾಜ್ಯದಲ್ಲಿ 11 ಶಾಸಕರು ರಾಜೀನಾಮೆ ನೀಡುವ ಮೂಲಕ ಈಗ ಸಮ್ಮಿಶ್ರ ಸರ್ಕಾರ ಈಗ ತೂಗೊಯ್ಯಾಲೆಯಲ್ಲಿದೆ. 

ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ತಮ್ಮ ಅಮೇರಿಕಾ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಈಗ ನವದೆಹಲಿಗೆ ಆಗಮಿಸಿದ್ದಾರೆ, ಅಲ್ಲಿಂದ ಅವರು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತಲುಪಲಿದ್ದಾರೆ. ಅಲ್ಲಿಂದ ಅವರು ನೇರವಾಗಿ ಜೆಡಿಎಸ್ ಪಕ್ಷದ ಸರಣಿ ಸಭೆಗಳಲ್ಲಿ ಭಾಗವಹಿಸಿ ಮುಂದಿನ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. 

ಇನ್ನೊಂದೆಡೆ ಇಂದು ಡಿ.ಕೆ.ಶಿವಕುಮಾರ್ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಅತೃಪ್ತ ಶಾಸಕರಿಗೆ ಸಚಿವ ಸ್ಥಾನವನ್ನು ನೀಡುವ ಪ್ರಸ್ತಾಪವನ್ನು ಡಿಕೆಶಿ ಇಟ್ಟಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸುವ ಸಂದರ್ಭ ಬಂದಲ್ಲಿ ಸಿದ್ಧರಾಮಯ್ಯವರ ಬದಲಾಗಿ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮಣೆ ಹಾಕುವ ಪ್ಲಾನ್ ನ್ನು ದೇವೇಗೌಡರು ಹೊಂದಿದ್ದಾರೆ ಎನ್ನಲಾಗಿದೆ.

ಈಗ ಕಾಂಗ್ರೆಸ್ ಪಕ್ಷವು ಈ ಎಲ್ಲ ವಿದ್ಯಮಾನಗಳ ಕುರಿತಾಗಿ ಚರ್ಚಿಸಲು ಜುಲೈ 9 ರಂದು ಬೆಳಗ್ಗೆ ಸಿದ್ದರಾಮಯ್ಯ ನೇತೃತ್ವದ ಶಾಸಕಾಂಗ ಸಭೆ ಕರೆಯಲಾಗಿದೆ.ಈ ಸಭೆ ಎಲ್ಲ ಕಾಂಗ್ರೆಸ್ ಶಾಸಕರಿಗೆ ಹಾಜರಿರಲು ಸೂಚಿಸಲಾಗಿದೆ. ಈ ಎಲ್ಲ ಬೆಳವಣಿಗೆಯನ್ನು ಗಮನಿಸುತ್ತಿರುವ ಬಿಜೆಪಿ ಕೂಡ ಪರಿಸ್ಥಿತಿಯ ಲಾಭವನ್ನು ಪಡೆಯುವ ಯತ್ನ ಮಾಡುತ್ತಿದೆ ಎನ್ನಲಾಗಿದೆ. ಈಗ ಬಿಜೆಪಿ ನಿರ್ಧಾರ, ಶಾಸಕರ ರಾಜೀನಾಮೆ ವಿಚಾರವಾಗಿ ಸ್ಪೀಕರ್ ಕೈಗೊಳ್ಳುವ ನಿಲುವಿನ ಆಧಾರದ ಮೇಲೆ ನಿರ್ಧಾರಿತವಾಗಲಿದೆ ಎನ್ನಲಾಗಿದೆ.
 

Trending News