ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಲ್ಲಿ ಗಸ್ತು ವಾಹನಗಳನ್ನು ಬಳಕೆ ಮಾಡುವುದು ಗೊತ್ತೇ ಇದೆ. ಅದೇ ರೀತಿಯಲ್ಲಿ ಸಾರ್ವಜನಿಕರಿಂದ ದಂಡ ವಸೂಲಿ ಮಾಡಲು ನಾಲ್ಕು ವಾಹನಗಳನ್ನು ಬಳಕೆ ಮಾಡಿಕೊಳ್ಳಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಜಗದೀಶ್ ವಿ ಸದಂ, “ದಂಡ ಕಟ್ಟಲು ಸಾಧ್ಯವಾಗದೇ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ವಿಮಾ ಪಾಲಿಸಿ ನವೀಕರಣ, ರಸ್ತೆ ತೆರಿಗೆ ಪಾವತಿ ರಸೀದಿ ಹಾಗೂ ವಾಹನ ಕ್ಷಮತೆ ಪ್ರಮಾಣಪತ್ರ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಾಹನ ಸವಾರರಿಗೆ ಗುಂಡಿಗಳಿಲ್ಲದ ಗುಣಮಟ್ಟದ ರಸ್ತೆ ನಿರ್ಮಿಸಿಕೊಡಲೂ ಸಾಧ್ಯವಾಗದ ರಾಜ್ಯ ಸರ್ಕಾರವು ದಂಡ ವಸೂಲಿಗೆ ಮಾತ್ರ ಕಠಿಣ ನಿಲುವು ತೆಗೆದುಕೊಳ್ಳುವುದು ಸರಿಯಲ್ಲ” ಎಂದು ಹೇಳಿದರು.