ಕಾಂಗ್ರೆಸ್ ಶೋಕಾಸ್ ನೋಟಿಸನ್ನು ಓದಲಿಕ್ಕೂ ಕೂಡ ಹೋಗುವುದಿಲ್ಲ- ರೋಶನ್ ಬೇಗ್

ಕಾಂಗ್ರೆಸ್ ಶಾಸಕ ಆರ್.ರೋಶನ್ ಬೇಗ್ ಈಗ ಪಕ್ಷದ ವಿರುದ್ಧ ಬಂಡಾಯದ ಕಹಳೆ ಊದಿದ್ದಾರೆ. ಆದರೆ ಈಗ ಅವರ ಪಕ್ಷ ವಿರೋಧಿ ಹೇಳಿಕೆಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.ಆದರೆ ಈಗ ಅವರು ತಮ್ಮ ಟ್ವೀಟ್ ಮೂಲಕ ಈ ನೋಟಿಸ್ ಗೆ ಖ್ಯಾರೆ ಕೂಡ ಎನ್ನುತ್ತಿಲ್ಲ.

Last Updated : May 21, 2019, 07:50 PM IST
ಕಾಂಗ್ರೆಸ್ ಶೋಕಾಸ್ ನೋಟಿಸನ್ನು ಓದಲಿಕ್ಕೂ ಕೂಡ ಹೋಗುವುದಿಲ್ಲ- ರೋಶನ್ ಬೇಗ್  title=

ಬೆಂಗಳೂರು: ಕಾಂಗ್ರೆಸ್ ಶಾಸಕ ಆರ್.ರೋಶನ್ ಬೇಗ್ ಈಗ ಪಕ್ಷದ ವಿರುದ್ಧ ಬಂಡಾಯದ ಕಹಳೆ ಊದಿದ್ದಾರೆ. ಆದರೆ ಈಗ ಅವರ ಪಕ್ಷ ವಿರೋಧಿ ಹೇಳಿಕೆಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.ಆದರೆ ಈಗ ಅವರು ತಮ್ಮ ಟ್ವೀಟ್ ಮೂಲಕ ಈ ನೋಟಿಸ್ ಗೆ ಖ್ಯಾರೆ ಕೂಡ ಎನ್ನುತ್ತಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದ್ದಕ್ಕೆ ಹಾಗೂ ರಾಜ್ಯ ಸಚಿವ ಸಂಪುಟದಲ್ಲಿ ತಮ್ಮನ್ನು ಸೇರಿಸಿಕೊಳ್ಳದಿರುವುದಕ್ಕೆ ಬೇಸರಗೊಂಡಿರುವ ಬೇಗ್ ಈಗ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಾರೆ.ಇದಕ್ಕೆ ಒಂದು ವಾರಗಳ ಒಳಗೆ ಉತ್ತರಿಸುವಂತೆ ಕೆಪಿಸಿಸಿ ಸೂಚನೆ ನೀಡಿತ್ತು, ತಪ್ಪಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷ ಎಚ್ಚರಿಕೆ ನೀಡಿತ್ತು.

ಆದರೆ ಇದ್ಯಾವ ನೋಟಿಸ್ ಗೂ ಕೂಡ ತಲೆಕೆಡಸಿಕೊಳ್ಳದೆ ಮತ್ತೆ ಪಕ್ಷ ವಿರುದ್ಧ ಟೀಕಾ ಪ್ರಹಾರವನ್ನು ಮುಂದುವರೆಸಿದ್ದಾರೆ. ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ರೋಶನ್ ಬೇಗ್ " ಕೆಪಿಸಿಸಿಯಿಂದ ಕಳಿಸಿರುವ ಶೋಕಾಸ್ ನೋಟಿಸ್ ನನಗೆ ತಲುಪಿದೆ.ಆದರೆ ಅದನ್ನು ಓದಲು ಕೂಡ ಹೆಚ್ಚು ಚಿಂತಿಸಬೇಕಾಗಿಲ್ಲ ಏಕೆಂದರೆ ನನಗೆ ಅಸಮರ್ಥತೆ ತೋರಿಸಿದ ಅದೇ ಜನರಿಂದಲೇ ಈ ಆದೇಶಗಳು ಕಳುಹಿಸಲ್ಪಟ್ಟಿವೆ. ಈ ರಾಜ್ಯ ನಾಯಕರ ಅಮಾನುಷತೆ ಅತಿಯಾಗಿದೆ. ಪ್ರತಿಪಕ್ಷಗಳ ಕುದುರೆ ವ್ಯಾಪಾರದ ಬಗ್ಗೆ ಮಾತನಾಡುವ ಇವರು, ಅದೇಗೆ ಪ್ರತಿಯೊಂದು ಸಚಿವ ಸ್ಥಾನವನ್ನುಭಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ" ಎಂದು ಪ್ರಶ್ನಿಸಿದ್ದಾರೆ.

 
 

Trending News