ನವದೆಹಲಿ: ದೆಹಲಿಯ ಕರ್ನಾಟಕ ಭವನದ ಕಾನೂನು ವಿಭಾಗದಲ್ಲಿ ಕೆಲಸ ಮಾಡುತ್ತಿರುವ ತಮಿಳಿಗ ಪಿ.ಎನ್. ರಾಮನಾಥನ್ ಅವರನ್ನು ಅಕ್ರಮ ಬಡ್ತಿ ಮತ್ತು ನಿಯಮ ಮೀರಿ ಸೇವಾವಧಿ ವಿಸ್ತರಿಸಲು ಶಿಫಾರಸ್ಸು ಮಾಡಿರುವ ಕುರಿತಾಗಿ ಆರೋಪಗಳು ಕೇಳಿ ಬಂದಿವೆ.
ಪಿ.ಎನ್. ರಾಮನಾಥನ್ ಅವರು ಸೇವಾ ಹಿರಿತನದಲ್ಲಿ 9ನೇ ಸ್ಥಾನದಲ್ಲಿದ್ದಾರೆ ಆದಾಗ್ಯೂ ಕೂಡ ನಿಯಮ ಮೀರಿ ಅವರಿಗೆ ಬಡ್ತಿ ನೀಡಲಾಗಿದೆ ಎಂದು ಕರ್ನಾಟಕ ಭವನದ ಸಿಬ್ಬಂಧಿಗಳ ಆರೋಪವಾಗಿದೆ.ಸೇವಾ ಹಿರಿತನದಲ್ಲಿ ಪಿ.ಎನ್ ರಾಮನಾಥ್ ಅವರಿಗಿಂತ 8 ಜನರ ಕಾರ್ಯ ನಿರ್ವಹಿಸುತ್ತಿದ್ದಾರೆ ಆದರೆ ಅವರನ್ನೆಲ್ಲರನ್ನೂ ಕಡೆಗಣಿಸಿ ತಮಿಳಿಗರಾದ ರಾಮನಾಥನ್ ಅವರಿಗೆ ಆಧ್ಯತೆ ನೀಡಲಾಗಿದೆ ಜೊತೆಗೆ ಅವರಿಗೆ ಬಡ್ತಿ ನೀಡಿದ್ದಷ್ಟೇ ಅಲ್ಲದೆ ಅವರ ಸೇವಾವಧಿಯನ್ನು ಸಾಹಿತಿ ಕರ್ನಾಟಕ ಭವನದ ಆಯುಕ್ತರು ಶಿಫಾರಸ್ಸು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿನ ಕರ್ನಾಟಕ ಭವನದ ಸಿಬ್ಬಂದಿಗೆ ಕೊರೊನಾ ಪೊಸಿಟಿವ್..!
ಇದಕ್ಕೂ ಮೊದಲು ಕರ್ನಾಟಕ ಭವನದ ಆಯುಕ್ತರಾಗಿದ್ದ ನಿಲಯ್ ಮಿತಾಶ್ ಮೇಲೆ ತಮಿಳಿಗರಾದ ಪಿ.ಎನ್ ರಾಮನಾಥ್ ಅವರು ಪ್ರಭಾವ ಬೀರಿದ್ದಾರೆ. ಈ ಹಿನ್ನಲೆಯಲ್ಲಿ ಅವರು ತಮ್ಮ ವರ್ಗಾವಣೆಗೂ ಮುನ್ನ ರಾಮನಾಥನ್ ಅವರ ಸೇವಾವಧಿ ವಿಸ್ತರಣೆಗೆ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಈಗ ಇವರ ಬಡ್ತಿ ಮತ್ತು ಸೇವಾವಧಿ ವಿಸ್ತರಣೆ ಶಿಫಾರಸ್ಸು ಮಾಡಿದ ಬೆನ್ನಲ್ಲೇ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ ಮತ್ತು ರಾಜ್ಯ ಸಚಿವ ಸಂಪುಟದ ಅನುಮೋದನೆಗೆ ಯತ್ನಿಸಲಾಗುತ್ತಿದೆ ಎನ್ನಲಾಗುತ್ತಿದೆ. ಕರ್ನಾಟಕದ ರಾಜ್ಯ ರಾಜಕಾರಣಿಗಳ ಪ್ರಭಾವ ಇರುವ ಹಿನ್ನಲೆಯಲ್ಲಿ ಈ ತಮಿಳಿಗ ಪಿ.ಎನ್ ರಾಮನಾಥ್ ಸುಲಭವಾಗಿ ರಾಜ್ಯ ಸಚಿವ ಸಂಪುಟದ ಒಪ್ಪಿಗೆಯನ್ನು ಪಡೆಯುವ ಮೂಲಕ ತಮ್ಮ ಬಡ್ತಿ ಮತ್ತು ಸೇವಾವಧಿಯನ್ನು ವಿಸ್ತರಿಸಿಕೊಳ್ಳುತ್ತಾರೆ ಎಂದು ಕರ್ನಾಟಕ ಭವನದ ಹಲವು ನೌಕರರು ಆರೋಪಿಸಿದ್ದಾರೆ