ಪ್ರಸನ್ನರಿಂದ ದೇಸಿ ಅಂಗಡಿ ಹಾಗೂ ಪವಿತ್ರವಸ್ತ್ರ ಅಭಿಯಾನ ಉದ್ಘಾಟನೆ

 ಅಂಗಡಿಯ ಉದ್ಘಾಟನೆಯ ಸಂತೋಷದ ಜೊತೆಗೆ ನೋವು ಇದೆ, ಅದೇನೆಂದರೆ ಸಂಕಷ್ಟದ ಕಾಲದಲ್ಲೂ ಸರಕಾರ ಬಿಡುಗಡೆಮಾಡಿದ ಹಣ ರಾಜೀವ್ ಗಾಂಧಿ ಹೇಳಿದ ಹಾಗೆ ಆಗ ಪ್ರತಿಶತ 10% ರಷ್ಟು ಸರ್ಕಾರದ ಅನುಧಾನ ತಲುಪುತ್ತಿದ್ದರೆ, ಈಗ ಪ್ರತಿಶತ 2% ಸಹ ಹಳ್ಳಿಯ ಜನರನ್ನು ತಲುಪಿಲ್ಲ. ಉದಾಹರಣೆಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದ ದೇಶದಲ್ಲಿಯೇ ಅತ್ಯಂತ ಹೆಚ್ಚು ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಯನ್ನು ತಯಾರಿಸುತ್ತಿದ್ದ ಚರಕ ಸಂಸ್ಥೆ (Charaka Shramajeevi Ashram) ಬೀದಿಗೆ ಬೀಳಲಿದೆ. ಕಳೆದ 4 ತಿಂಗಳಿನಿಂದ ನೇಕಾರರಿಗೆ ನೇಯಲು ಎಲ್ಲಾ ಹಣವನ್ನು ಕೊಟ್ಟು ಸಂಸ್ಥೆಯ ಖಜಾನೆ ಬರಿದಾಗಿದೆ. ಸುಮಾರು 85 ಸಾವಿರ ಮೀಟರ್ ನಷ್ಟು ಬಟ್ಟೆ ನಮ್ಮ ಗೋದಾಮಿನಲ್ಲಿ 666 ಮಾರಾಟವಾಗದೆ ಉಳಿದಿದೆ.

Last Updated : Aug 16, 2020, 11:04 PM IST
ಪ್ರಸನ್ನರಿಂದ ದೇಸಿ ಅಂಗಡಿ ಹಾಗೂ ಪವಿತ್ರವಸ್ತ್ರ ಅಭಿಯಾನ ಉದ್ಘಾಟನೆ  title=
Photo Courtsey : facebook

ಬೆಂಗಳೂರು:  ಅಂಗಡಿಯ ಉದ್ಘಾಟನೆಯ ಸಂತೋಷದ ಜೊತೆಗೆ ನೋವು ಇದೆ, ಅದೇನೆಂದರೆ ಸಂಕಷ್ಟದ ಕಾಲದಲ್ಲೂ ಸರಕಾರ ಬಿಡುಗಡೆಮಾಡಿದ ಹಣ ರಾಜೀವ್ ಗಾಂಧಿ ಹೇಳಿದ ಹಾಗೆ ಆಗ ಪ್ರತಿಶತ 10% ರಷ್ಟು ಸರ್ಕಾರದ ಅನುಧಾನ ತಲುಪುತ್ತಿದ್ದರೆ, ಈಗ ಪ್ರತಿಶತ 2% ಸಹ ಹಳ್ಳಿಯ ಜನರನ್ನು ತಲುಪಿಲ್ಲ. ಉದಾಹರಣೆಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದ ದೇಶದಲ್ಲಿಯೇ ಅತ್ಯಂತ ಹೆಚ್ಚು ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಯನ್ನು ತಯಾರಿಸುತ್ತಿದ್ದ ಚರಕ ಸಂಸ್ಥೆ (Charaka Shramajeevi Ashram) ಬೀದಿಗೆ ಬೀಳಲಿದೆ. ಕಳೆದ 4 ತಿಂಗಳಿನಿಂದ ನೇಕಾರರಿಗೆ ನೇಯಲು ಎಲ್ಲಾ ಹಣವನ್ನು ಕೊಟ್ಟು ಸಂಸ್ಥೆಯ ಖಜಾನೆ ಬರಿದಾಗಿದೆ. ಸುಮಾರು 85 ಸಾವಿರ ಮೀಟರ್ ನಷ್ಟು ಬಟ್ಟೆ ನಮ್ಮ ಗೋದಾಮಿನಲ್ಲಿ 666 ಮಾರಾಟವಾಗದೆ ಉಳಿದಿದೆ.

ಮಾನ್ಯ ಯಡಿಯೂರಪ್ಪನವರು, ಮುಖ್ಯಮಂತ್ರಿಗಳು Chief Minister of Karnataka (BS Yediyurappa) ಅವರೇ ಸ್ವತಃ ಆಸಕ್ತಿವಹಿಸಿ 60 ಲಕ್ಷರೂಪಾಯಿಯ “ಪವಿತ್ರ ವಸ್ತ್ರ”ಯೋಜನೆಯನ್ನು ಎರಡೇ ದಿನಗಳಲ್ಲಿ ಚರಕಕ್ಕೆ ಬಿಡುಗಡೆ ಮಾಡಿದ್ದಾರೆ. ಹಾಗೂ ತಮ್ಮ ಅಧಿಕಾರಿಗಳಿಗೆ ಅದರ ಜವಾಬ್ದಾರಿಯನ್ನು ವಹಿಸಿದ್ದಾರೆ. ಆದರೆ ಈ 60 ಲಕ್ಷರೂಪಾಯಿ, ಕಳೆದ 5 ವರ್ಷದ ಹಿಂದೆ ನೈಸರ್ಗಿಕ ಬಣ್ಣಗಾರಿಕೆ ತರಭೇತಿ, ಸಂಶೋಧನೆ ಮತ್ತು ಅಭಿವೃದ್ಧಿಯೋಜನೆಗೆ ಬಿಡುಗಡೆಯಾದ 33 ಲಕ್ಷರೂಪಾಯಿ, ನೇಕಾರರ ಸಾಲಮನ್ನಾ ಹಾಗೂ ಕನ್ನಡ & ಸಂಸ್ಕೃತಿ ಇಲಾಖೆಯಿಂದ, ಕಳೆದ ಎರಡು ವರ್ಷದಿಂದ ಬರಬೇಕಾಗಿರುವ ಹಣವೆಲ್ಲವೂ ಕೂಡ ಇನ್ನೂ ಬಂದಿಲ್ಲ. ದೇವರು ವರಕೊಟ್ಟರು ಪೂಜಾರಿ ಕೊಡುತ್ತಿಲ್ಲ ಅಮದಹಾಗೆ ಆಗಿದೆ ಪರಿಸ್ಥಿತಿ, ಆದ್ದರಿಂದ ನಾವು ಜನಗಳೇ ಎಲ್ಲಾ ಕೈಉತ್ಪನ್ನಗಳನ್ನು ನೇರವಾಗಿ ಕೊಳ್ಳ್ಳುವ ಮೂಲಕ ಚಳುವಳಿಯ ಮಾಲಕ ಬಡವರನ್ನು ರಕ್ಷಿಸಬೇಕಿದೆ.

ಯಾರ ವಿರುದ್ಧವು ಹೋರಾಡುವ ಬದಲು ಈ ಕೆಲಸದಲ್ಲಿ ಎಲ್ಲರ ಜೊತೆ ಕೈಜೊಡಿಸಿ ಹೊಸ ಸ್ವಾತಂತ್ರ್ಯ ಸಂಗ್ರಾಮವನ್ನು ನಡೆಸಲು ಸಾಧ್ಯ.ಇದು ಕೇವಲ ಚರಕ ಹಾಗೂ ದೇಸಿ ಸಂಸ್ಥೆಯ ಸಮಸ್ಯೆಯಲ್ಲ ಎಲ್ಲ ಗ್ರಾಮೀಣ ರಚನಾತ್ಮಕ ಸಂಸ್ಥೆಗಳ ಸಮಸ್ಯೆಯಾಗಿದೆ, ಗ್ರಾಮ ಸೇವಾ ಸಂಘ ಈ ಹಿನ್ನೇಲೆಯಲ್ಲಿ ಗ್ರಾಮ ಸೇವಾ ಸಂಘದ Gram Seva Sangh "ಪವಿತ್ರ ಆರ್ಥಿಕತೆಯ" #SacredEconomy ಸತ್ಯಾಗ್ರಹದ ಮುಂದುವರಿಕೆಯಾಗಿ ಕೈಉತ್ಪಾದಕರ ಹೋರಾಟವನ್ನು ಪ್ರಾರಂಭಿಸಲಿದ್ದು ಅದರ ಅಡಿಯಲ್ಲಿ ‘ಪವಿತ್ತ್ರ ವಸ್ತ್ರ’ ಚಳುವಳಿಯನ್ನು ದೇಸಿ ಸಂಸ್ಥೆಯು ಸಹ ಇಂದು ಕೈಮಗ್ಗದ ಬಟ್ಟೆಯನ್ನು ಮಾರುವ ಮುಖಾಂತರ ಪ್ರಾರಂಭಿಸಿದೆ.

ಬನ್ನಿ,ಕೈಯಿಂದ ತಯಾರಿಸಿದ ಉತ್ಪನ್ನಗಳು ಪವಿತ್ರ, ದಯಮಾಡಿ ತಾವು ಕೇವಲ ಗ್ರಾಹಕರಾಗಿರದೆ, ಕೈಮಗ್ಗ ಕಾರ್ಯಕರ್ತರಾಗಿ. ಇದರರ್ಥ ತಾವು ಇಂದಿನ ಕಷ್ಟದ ಸಮಯದಲ್ಲಿ ಮನೆಯಿಂದ ಹೊರಗೆ ಬಂದು ಬೀದಿಗಿಳಿಯುವ ಅಗತ್ಯವಿಲ್ಲ. ತಮಗೆ ಅಗತ್ಯವಿರುವ ಬಟ್ಟೆಯನ್ನು ಕೈಮಗ್ಗ ಉತ್ಪಾದಕರಿಂದಲೇ ಕೊಂಡುಕೊಳ್ಳಿ. ಈ ಮೂಲಕ, ತಾವು ‘ಪವಿತ್ತ್ರ ವಸ್ತ್ರ’ ಚಳುವಳಿಯ ಭಾಗವಾಗುವ ಮೂಲಕ ತಾವು ತಮ್ಮ ಸ್ನೇಹಿತರನ್ನ, ಬಂಧುಗಳನ್ನ ಕೈಮಗ್ಗ ಬಟ್ಟೆ ತೊಡುವಂತೆ ಪ್ರೋತ್ಸಾಹಿಸಿ.

- ಪ್ರಸನ್ನ Prasanna Heggodu

Trending News