close

News WrapGet Handpicked Stories from our editors directly to your mailbox

ಸಚಿವ ರೇವಣ್ಣ, ಡಿ.ಸಿ.ತಮ್ಮಣ್ಣ ಆಪ್ತರಿಗೆ ಐಟಿ ಶಾಕ್!

ಸಚಿವ ಹೆಚ್‌.ಡಿ. ರೇವಣ್ಣ ಅವರ ಆಪ್ತರಾದ ಕಾರ್ಲೆ ಇಂದ್ರೇಶ್‌, ಹೊಳೇನರಸೀಪುರದ ಹರದನಹಳ್ಳಿಯಲ್ಲಿರುವ ಪಾಪಣ್ಣಿ ಹಾಗೂ ಜಿಲ್ಲಾ ಪಂಚಾಯತ್‌ ಸದಸ್ಯ ತಿಪ್ಪೇಗೌಡ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Updated: Apr 16, 2019 , 11:37 AM IST
ಸಚಿವ ರೇವಣ್ಣ, ಡಿ.ಸಿ.ತಮ್ಮಣ್ಣ ಆಪ್ತರಿಗೆ ಐಟಿ ಶಾಕ್!

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಎರಡೇ ದಿನ ಉಳಿದಿರುವ ಬೆನ್ನಲ್ಲೇ ಸಚಿವರಾದ ಹೆಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು ಆಪ್ತರ ಮನೆ ಮೇಲೆ ಮಂಗಳವಾರ 
ಬೆಳಿಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಚಿವ ಹೆಚ್‌.ಡಿ. ರೇವಣ್ಣ ಅವರ ಆಪ್ತರಾದ ಕಾರ್ಲೆ ಇಂದ್ರೇಶ್‌, ಹೊಳೇನರಸೀಪುರದ ಹರದನಹಳ್ಳಿಯಲ್ಲಿರುವ ಪಾಪಣ್ಣಿ ಹಾಗೂ ಜಿಲ್ಲಾ ಪಂಚಾಯತ್‌ ಸದಸ್ಯ ತಿಪ್ಪೇಗೌಡ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಎರಡು ಕಾರುಗಳಲ್ಲಿ ಬಂದ 8 ಜನ ಅಧಿಕಾರಿಗಳಿದ್ದ ತಂಡ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಲೆ ಇಂದ್ರೇಶ್‌ ಅವರ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ ದಾಖಲೆಗಳ ತಪಾಸಣೆ ನಡೆಸುತ್ತಿದ್ದಾರೆ. ನಗರದ ವಿದ್ಯಾನಗರದಲ್ಲಿ ಇಂದ್ರೇಶ್​ ವಾಸವಿದ್ದು, ಗುತ್ತಿಗೆದಾರರಾಗಿ ಹಾಗೂ ಹಾಸನ ಜಿಲ್ಲಾ ಕೋ-ಆಪರೇಟಿವ್​ ಸೆಂಟ್ರಲ್​ ಬ್ಯಾಂಕ್​​​(HDCC) ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಂಡ್ಯದಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಆಪ್ತ ಸಾದೊಳಲು ಸ್ವಾಮಿ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ವಾಮಿ ಜಿ.ಪಂ ಅಧ್ಯಕ್ಷೆ ನಾಗರತ್ನ ಎಂಬವರ ಪತಿಯಾಗಿದ್ದು, ಮೈಸೂರು ವಲಯದ ಜೆಡಿಎಸ್ ವೀಕ್ಷಕರಾಗಿದ್ದರು. ಮದ್ದೂರು ಸಮೀಪದ ಸೋಮನಹಳ್ಳಿ ಕೈಗಾರಿಕಾ ವಲಯದಲ್ಲಿರುವ ಸೋಮೇಶ್ವರ ಫರ್ಟಿಲೈಜರ್ ಕಂಪನಿ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ.