ಜಗತ್ತಿನಲ್ಲಿ ಹೊಟ್ಟೆ ಕಿಚ್ಚಿಗೆ ಯಾವುದೇ ಮದ್ದಿಲ್ಲ- ಸಚಿವೆ ಜಯಮಾಲಾ

     

Last Updated : Jun 14, 2018, 10:34 PM IST
 ಜಗತ್ತಿನಲ್ಲಿ ಹೊಟ್ಟೆ ಕಿಚ್ಚಿಗೆ ಯಾವುದೇ ಮದ್ದಿಲ್ಲ- ಸಚಿವೆ ಜಯಮಾಲಾ title=

ಬೆಂಗಳೂರು: ಇದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ತಿರುಗೇಟು ನೀಡಿರುವ ಪರಿ.

ಇಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವೆ ಜಯಮಾಲಾ "ನಾನು ಎಲ್ಲಾ ರೀತಿಯ ಸಾಧನೆಗಳನ್ನು ಮಾಡಿಯೇ ಈ ಹಂತಕ್ಕೆ ಬಂದಿದ್ದೇನೆ.ಅವರ ಆ ರೀತಿಯ ಹೇಳಿಕೆ  ನನಗೆ ಸರಿ ಎನಿಸಲಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇನ್ನು ಮುಂದುವರೆದು ಪ್ರಪಂಚದಲ್ಲಿ ಎಲ್ಲಾ ರೀತಿಯ  ರೋಗಗಳಿಗೆ ಮದ್ದು ಇದೇ ಆದರೆ ಹೊತ್ತೆಕಿಚ್ಚಿಗೆ ಮಾತ್ರವಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ. 

ಜಯಮಾಲಾ ಸಚಿವ ಸ್ಥಾನ ದೊರಕಿದ ನಂತರ ಅಸಮಾಧಾನ ವ್ಯಕ್ತಪಡಿಸುತ್ತಾ "ಯಾವ ಮಾನದಂಡದಲ್ಲಿ ಜಯಮಾಲಾ ಅವರಿಗೆ ಅವಕಾಶ ನೀಡಲಾಗಿದೆ" ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದರು.

Trending News