ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಲಿದೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್. ಡಿ. ಕುಮಾರಸ್ವಾಮಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ವಿಲೀನ ಸಾಧ್ಯವಿಲ್ಲ ಎಂದಿದ್ದಾರೆ.
ಜೆಡಿಎಸ್ ಯಾವತ್ತಿದ್ದರೂ ಸ್ವಾಭಿಮಾನಿ ಕನ್ನಡಿಗರ ಪಕ್ಷ. ಹಾಗಾಗಿ ಜೆಡಿಎಸ್ ಎಂದಿಗೂ ಬೇರೆ ಪಕ್ಷದ ಜೊತೆ ವಿಲೀನವಾಗುವ ಬಗ್ಗೆ ಯೋಚಿಸುವುದಿಲ್ಲ. ಜೆಡಿಎಸ್ ಕನ್ನಡಿಗರ ಧ್ವನಿಯಾಗಿದ್ದು ವಿಲೀನದಂತಹ ಮೂರ್ಖತನದ ನಿರ್ಧಾರವನ್ನು ಯಾವತ್ತಿಗೂ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡಬಹುದೇ ಹೊರತು ವಿಲೀನದ ಮಾತು ಖಂಡಿತಾ ಸುಳ್ಳು ಎಂದು ಹೆಚ್. ಡಿ. ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದ್ದಾರೆ.
The Janata Dal (S), which is a party of Kannadigas with self esteem, will never think of political merger. The party, which is a strong voice of the people, will never display such stupidity. At the most we may extend an issue-based support to the BJP if need be..
— H D Kumaraswamy (@hd_kumaraswamy) December 20, 2020
ಇನ್ನು ವಿಧಾನಸಭೆ ಚುನಾವಣೆಗೂ ಮುನ್ನ ಜೆಡಿಎಸ್ ಬಿಜೆಪಿಯ 'B' ಟೀಂ ಎಂದು ಕರೆದಿದ್ದ ಕಾಂಗ್ರೆಸ್ ಹೈಕಮಾಂಡ್ ಚುನಾವಣೆಯ ನಂತರ ಸರ್ಕಾರ ರಚಿಸುವಂತೆ ಕೋರಿ ಜೆಡಿಎಸ್ (JDS) ಗೆ ಆಹ್ವಾನ ನೀಡಿತ್ತು. ಜೆಡಿಎಸ್ ಬಿಜೆಪಿ ಬಿ ಟೀಂ ಆಗಿದ್ದರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ದುಬಾರಿ ಶುಲ್ಕ ಪಾವತಿ ಬಗ್ಗೆ ಫೇಸ್‌ಬುಕ್‌ನಲ್ಲಿ ಅಳಲು ತೋಡಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್
ಸಾಲಮನ್ನಾ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ನೀಡಿದ ಜೆಡಿಎಸ್ ಪಕ್ಷದ ಮೇಲೆ ಜನರಿಗೆ ವಿಶ್ವಾಸವಿದೆ. ಹೀಗಿರುವಾಗ ಬೇರೆ ಪಕ್ಷದೊಂದಿಗೆ ವಿಲೀನವಾಗಿವಂತಹ ಆತ್ಮಹತ್ಯಾ ರೀತಿಯ ನಿರ್ಧಾರವನ್ನು ಜೆಡಿಎಸ್ ಎಂದಿಗೂ ತೆಗೆದುಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
People trust the JD (S) which took up welfare measures like waiver of farm loans and 'Badavara Bandhu' scheme besides conducting itself as per the aspirations of former prime minister @H_D_Devegowda known for disciplined administration.
— H D Kumaraswamy (@hd_kumaraswamy) December 20, 2020
ಜೆಡಿಎಸ್ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸುವ ಸುದ್ದಿ ನಮಗೂ ಬಂದಿದೆ ಎಂದು ಅರವಿಂದ ಲಿಂಬಾವಳಿ ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಸುದ್ದಿ ಹೊರಬರುತ್ತಿದ್ದಂತೆ ಜೆಡಿಎಸ್ ಶಾಸಕರಿಂದ ಇದಕ್ಕೆ ವಿರೋಧವೂ ವ್ಯಕ್ತವಾಗಿತ್ತು.
ಇದನ್ನೂ ಓದಿ: 'ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆಯಾದ್ರೆ ಪಕ್ಷ ತೊರೆಯುತ್ತೇನೆ'