"ಕೈ" ಟಾರ್ಗೆಟ್ 20: ಲೋಕ ಸಮರದ ಮುನ್ನ ಕರ್ನಾಟಕ ಮತದಾರರ ಗಮನ ಸೆಳೆಯಲು ತೆರಿಗೆ ಪರಿಹಾರ ಅಸ್ತ್ರ!

Congress: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ದೇಶ ಇರುವ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆ ಜೊತೆಗೆ ಇತರೆ ವಿಷಯಗಳನ್ನ ಜನರ ಮುಂದೆ ಇಟ್ಟು ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಠ 20 ಸಂಸದರನ್ನು ಕೇಂದ್ರಕ್ಕೆ ಕಳಿಸುವ ಪಣ ತೊಟ್ಟಿದೆ. ಇದರ ವಿವಿಧ ಕಾರ್ಯಯೋಜನೆ ಹಂತವಾದ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಕೂಡ ಒಂದು.  

Written by - Prashobh Devanahalli | Last Updated : Feb 7, 2024, 08:42 PM IST
  • ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೇಕೆದಾಟು ಪ್ರತಿಭಟನೆ ಹಾದಿಯಾಗಿ ಹೊಸ ಸ್ಟೈಲ್ ಪ್ರತಿಭಟನೆ ನಡೆಸುತ್ತಿದ್ದಾರೆ
  • ಸಂಸದರು ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಪತ್ರ ಬರೆದು ಪ್ರತಿಭಟನೆಗೆ ಕೈ ಜೋಡಿಸಿ ಎಂದು ಕರೆದರು.
"ಕೈ" ಟಾರ್ಗೆಟ್ 20: ಲೋಕ ಸಮರದ ಮುನ್ನ ಕರ್ನಾಟಕ ಮತದಾರರ ಗಮನ ಸೆಳೆಯಲು ತೆರಿಗೆ ಪರಿಹಾರ ಅಸ್ತ್ರ! title=

ಬೆಂಗಳೂರು: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವಂತ ರಾಜ್ಯ ಆಗಿರುವ ಹಿನ್ನಲೆ KPCC "ಟಾರ್ಗೆಟ್ 20"ನ್ನ ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ ಅಸ್ತ್ರವಾಗಿರುವ ಅಯೋಧ್ಯ ರಾಮ ಮಂದಿರ,ಕಾಶಿ ಜ್ಞಾನವಾಪಿ ಮಸೀದಿ ಹಾಗೂ ಮಥುರಾ ಕೃಷ್ಣಜನ್ಮ ಭೂಮಿ ವಿಚಾರಕ್ಕೆ ಪ್ರತ್ಯಸ್ತ್ರ ಭಾಗವಾದ "Bread and butter" ವಿಷಯಗಳನ್ನ ಜನರ ಮುಂದೆ ಪ್ರಸ್ತುತ ಪಡಿಸುತ್ತಿದ್ದಾರೆ.ಸದ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಮಾಡಿದ್ದು, ಇದರ ಪೂರ್ಣ ಪ್ರಚಾರ ಮೂಲಕ ಕೇಂದ್ರದಲ್ಲೂ ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ಬಂದರೆ ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರ ಜೀವನ ನಿರ್ವಹಣೆಗೆ ಪಕ್ಷ ವಿವಿಧ ಯೋಜನೆ ಜಾರಿ ಮಾಡಲಾಗುವುದು ಎಂಬ ವಿಶ್ವಾಸ ಮೂಡಿಸುವ ಕಾರ್ಯ ಪ್ರಾರಂಭ ಮಾಡಿದ್ದಾರೆ.

ದೇಶದಲ್ಲಿ ಮೊದಲ ಭಾರಿಗೆ ರಾಜ್ಯಸರ್ಕಾರ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಡೆಲ್ಲಿಯ ಜನತರ್ ಮಂತರ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.

ಇದನ್ನೂ ಓದಿ-ಬಿಜೆಪಿ-ಜೆಡಿಎಸ್‌ ಲೋಕಸಭೆ ಟಿಕೆಟ್‌ ಹಂಚಿಕೆ ಕ್ಲೈಮಾಕ್ಸ್‌

ಡಿಕೆ ಹಾಗೂ ಕೆಪಿಸಿಸಿ ಹೊಸ ಸ್ಟೈಲ್:
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೇಕೆದಾಟು ಪ್ರತಿಭಟನೆ ಹಾದಿಯಾಗಿ ಹೊಸ ಸ್ಟೈಲ್ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ಪ್ರತಿಭಟನೆ ಮಾಡಿದರು ಆ ಹೋರಾಟ ರಾಜ್ಯದ ಹಿತಕ್ಕೆ ಎನ್ನುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರಿಗೂ ಆಹ್ವಾನ ನೀಡುವ ಮೂಲಕ ಉಭಯ ಪಕ್ಷದವರಿಗೂ ಸಂದಿಗ್ಧ ಪರಿಸ್ಥಿಗೆ ತಳ್ಳುವ ಮೂಲಕ ಪ್ರತಿಭಟನೆ ಯಶಸ್ಸು ಕಾಣುವ ಯೋಜನೆ ಹಾಕುತ್ತಾರೆ. ಇದೇ ರೀತಿ ಈ ಭಾರಿ, ರಾಜ್ಯ ಪ್ರತಿ ₹100 ತೆರಿಗೆಗೆ ಕೇವಲ ₹12 ರೂಪಾಯಿ ಬರುತ್ತಿದೆ ಇದಕ್ಕೆ ಹೋರಾಟ ಮಾಡಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವರು, ಸಂಸದರು ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಪತ್ರ ಬರೆದು ಪ್ರತಿಭಟನೆಗೆ ಕೈ ಜೋಡಿಸಿ ಎಂದು ಕರೆದರು.

ಇನ್ನು ಟಾರ್ಗೆಟ್ 20 ಸಫಲ ಆಗುವುದಕ್ಕೆ ವಿವಿಧ ರೀತಿಯಲ್ಲಿ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್, 2019 ಚುನಾವಣೆಯಲ್ಲಿ ಕಳೆದುಕೊಂಡ ಕ್ಷೇತ್ರಗಳನ್ನ ಮತ್ತೆ ಗೆಲ್ಲಬೇಕು ಎಂದು ಪಣ ತೊಟ್ಟಿದೆ. ಚುನಾವಣೆ ಸನಿಹ ಆಗುತ್ತಿರುವಾಗ ಗ್ಯಾರಂಟಿ ಯೋಜನೆ, ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ, ಹೆಚ್ಚಾಗಿ ಧ್ವನಿ ಎತ್ತಲಿದೆ.

ಇದನ್ನೂ ಓದಿ-ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲವಾದರೆ ಆ ಸರ್ಕಾರ ಯಾಕಿರಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News