ಕರ್ನಾಟಕ 50: 68 ಸಾಧಕರು 10 ಸಂಘಗಳಿಗೆ ರಾಜ್ಯೋತ್ಸವ ಪ್ರಶಸ್ತಿ; ಬರ ಇದ್ದರೂ ಅದ್ದೂರಿ ಆಚರಣೆ

ಕರ್ನಾಟಕ ರಾಜ್ಯೋತ್ಸವದ ಹಿನ್ನಲೆ ರಾಜ್ಯ ಸರ್ಕಾರ 68 ಸಾಧಕರಿಗೆ ಹಾಗೂ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವದ ಪ್ರಶಸ್ತಿ ಘೋಷಣೆ ಮಾಡಿದೆ, ಕರ್ನಾಟಕ ರಚನೆಯಾಗಿ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬರ ಇದ್ದರೂ ಅದ್ದೂರಿ ಆಚರಣೆ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

Written by - Prashobh Devanahalli | Edited by - Manjunath N | Last Updated : Oct 31, 2023, 07:21 PM IST
  • ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು,
  • ಇಸ್ರೋ ಮುಖ್ಯಕ್ತ ಸೋಮನಾಥ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
  • ಜೊತೆಗೆ 100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ.
ಕರ್ನಾಟಕ 50: 68 ಸಾಧಕರು 10 ಸಂಘಗಳಿಗೆ ರಾಜ್ಯೋತ್ಸವ ಪ್ರಶಸ್ತಿ; ಬರ ಇದ್ದರೂ ಅದ್ದೂರಿ ಆಚರಣೆ title=
ಸಾಂದರ್ಭಿಕ ಚಿತ್ರ

ಬೆಂಗಳೂರು : ಕರ್ನಾಟಕ ರಾಜ್ಯೋತ್ಸವದ ಹಿನ್ನಲೆ ರಾಜ್ಯ ಸರ್ಕಾರ 68 ಸಾಧಕರಿಗೆ ಹಾಗೂ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವದ ಪ್ರಶಸ್ತಿ ಘೋಷಣೆ ಮಾಡಿದೆ, ಕರ್ನಾಟಕ ರಚನೆಯಾಗಿ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬರ ಇದ್ದರೂ ಅದ್ದೂರಿ ಆಚರಣೆ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ಇದನ್ನೂ ಓದಿ: ರೈತರಿಗೆ ನೀಡುವ ಕಿಸಾನ್‌ ಸಮ್ಮಾನ್‌ ನಿಧಿ ಶೀಘ್ರವೇ ಕೈ ಸೇರಲಿದೆ

ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ ಸಚಿವ ತಂಗಡಗಿ,2023ನೇ ಸಾಲಿನಲ್ಲಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ  ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರಾತಿನಿತ್ಯ ನೀಡಲಾಗಿದೆ.ಕರ್ನಾಟಕ ಸಂಭ್ರಮ-50ರ  ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು,ಇಸ್ರೋ ಮುಖ್ಯಕ್ತ ಸೋಮನಾಥ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜೊತೆಗೆ 100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ. ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು ಆಗಿದ್ದಾರೆ.13 ಮಹಿಳೆಯರು ಮತ್ತು 54 ಪುರುಷರು ಹಾಗೂ  ಮತ್ತು ಒಬ್ಬರು ಮಂಗಳ ಮುಖಿ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು.ಪ್ರಶಸ್ತಿ ಪಡೆದವರಿಗೆ ರೂ 5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕ ನೀಡಲಾಗುವುದು ಎಂದರು.

ಪ್ರಮುಖ ಪ್ರಶಸ್ತಿ ವಿಜೇತರು :

ವಿಜ್ಞಾನ ತಂತ್ರಜ್ಞಾನ ಕ್ಷೇತ್ರ

ಎಸ್ ಸೋಮನಾಥನ್ ಶ್ರೀಧರ್ ಪನಿಕರ್  ಇಸ್ರೋ ಅಧ್ಯಕ್ಷ

ಸ್ವಾತಂತ್ರ್ಯ ಹೋರಾಟಗಾರ 

ಶ್ರೀ ಪುಟ್ಟಸ್ಚಾಮಿ ಗೌಡ

ಜನಪದ ಕ್ಷೇತ್ರ

ಹುಸೇನಾಬಿ ಬುಡೆನ್ ಸಾಬ್ ಸಿದ್ದಿ

ಚಲನಚಿತ್ರ
ಡಿಂಗ್ರಿ ನಾಗರಾಜ್ 
ಬ್ಯಾಂಕ್ ಜನಾರ್ದನ

ಸಂಗೀತ
ಡಾ.‌ನಯನ ಎಸ್ ಮೋರೆ
ನೀಲಾ ಎಂ ಕೊಡ್ಲಿ
ಶಬ್ಬೀರ್ ಅಹಮದ್
ಬಾ. ಎಸ್ ಬಾಳೇಶ್ ಭಜಂತ್ರಿ..

ರಂಗಭೂಮಿ
ಎಜಿ ಚಿದಂಬರ ರಾವ್ ಜಂಬೆ
ಪಿ ಗಂಗಾಧರ ಸ್ವಾಮಿ
ಹೆಚ್ ಬಿ ಸರೋಜಮ್ಮ
ತಯ್ಯಬಖಾನ್ ಎಂ ಇನಾಮದಾರ್
ವಿಶ್ವನಾಥ್ ವಂಶಾಕೃತ ಮಠ
ಪಿ ತಿಪ್ಪೇಸ್ವಾಮಿ

ಮಾಧ್ಯಮ
ದಿನೇಶ್ ಅಮ್ಮಿನಮಟ್ಟು 
( ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಾಧ್ಯಮ ಸಲಹೆಗಾರರಾಗಿದ್ದವರು)
ಜವರಪ್ಪ
ಮಾಯಾಶರ್ಮ
ರಫೀ ಭಂಡಾರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News