ಟಿಪ್ಪುವಿನ ಬಗ್ಗೆ ಬ್ರಿಟೀಷರು ಬರೆದ ಪುಸ್ತಕಗಳನ್ನು ಬಿಜೆಪಿಗರು ಕೊಂಡು ಓದಲಿ: ಕಾಂಗ್ರೆಸ್

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಕೊಂದ ದೇಶದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆಯನ್ನು ಪೂಜಿಸುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವೆಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Zee Kannada News Desk | Last Updated : May 23, 2022, 09:16 PM IST
  • ಟಿಪ್ಪುವಿನ ಬಗ್ಗೆ ಬ್ರಿಟೀಷರು ಬರೆದ ಪುಸ್ತಕಗಳನ್ನು ಬಿಜೆಪಿಗರು ಕೊಂಡು ಓದಲಿ
  • ಮೈಸೂರು ಭಾಗದಲ್ಲಿ ಟಿಪ್ಪುವಿನ ಬಗ್ಗೆ ಜನಪದರು ಕಟ್ಟಿದ ಲಾವಣಿಗಳು ಕೇಳಿಸಿಕೊಳ್ಳಲಿ
  • ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದು ಬಿಜೆಪಿಗರ ಖಯಾಲಿಯಾಗಿಬಿಟ್ಟಿದೆ
ಟಿಪ್ಪುವಿನ ಬಗ್ಗೆ ಬ್ರಿಟೀಷರು ಬರೆದ ಪುಸ್ತಕಗಳನ್ನು ಬಿಜೆಪಿಗರು ಕೊಂಡು ಓದಲಿ: ಕಾಂಗ್ರೆಸ್   title=
ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್

ಬೆಂಗಳೂರು: ಬ್ರಿಟೀಷರ ಪಾಲಿನ ಸಿಂಹಸ್ವಪ್ನವಾಗಿದ್ದ ಟಿಪ್ಪುವಿನ ಬಗ್ಗೆ ಬ್ರಿಟೀಷರೇ ಬರೆದ ಅನೇಕ ಪುಸ್ತಕಗಳಿವೆ ಬಿಜೆಪಿಗರು ಅದನ್ನು ಕೊಂಡು ಓದುವುದು ಒಳಿತು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ‘ಟಿಪ್ಪು ಸುಲ್ತಾನ್ ಮತಾಂಧನಲ್ಲ ಎನ್ನುವ "ಜಾಣಕುರುಡುತನ ಮತ್ತು ಜಾಣಕಿವುಡುತನ" ಕಾಂಗ್ರೆಸ್ ನಾಯಕರನ್ನು ಆವರಿಸಿಕೊಂಡಿದೆ’ ಎಂಬ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.   

‘ಟಿಪ್ಪುವಿನ ಬಗ್ಗೆ ಬ್ರಿಟೀಷರು ಬರೆದ ಪುಸ್ತಕಗಳನ್ನು ಬಿಜೆಪಿಗರು ಕೊಂಡು ಓದಲಿ. ಅಷ್ಟೂ ಸಾಲದಿದ್ದರೆ ಮೈಸೂರು ಭಾಗದಲ್ಲಿ ಇವತ್ತಿಗೂ ಟಿಪ್ಪುವಿನ ಬಗ್ಗೆ ಜನಪದರು ಕಟ್ಟಿದ ಲಾವಣಿಗಳು ಪ್ರಸ್ತುತವಾಗಿವೆ ಅದನ್ನು ಕೇಳಿಸಿಕೊಳ್ಳುವುದು ಒಳ್ಳೆಯದು’ ಎಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: "ನಮ್ಮ ಹುಡುಗಿ ಜೊತೆನೆ ನನ್ನ ಮದುವೆಯಾಗಲಿ": ದೇವಿಗೆ ಯುವಕನ ಕೋರಿಕೆ

‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಕೊಂದ ದೇಶದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆಯನ್ನು ಪೂಜಿಸುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದು ಬಿಜೆಪಿಗರ ಖಯಾಲಿಯಾಗಿಬಿಟ್ಟಿದೆ. ಬ್ರಿಟೀಷರ ವಿರುದ್ಧ ಹೋರಾಡಿದವರಿಗೆ ಅವಮಾನ, ಬ್ರಿಟೀಷರಿಂದ ಪಿಂಚಣಿ ಪಡೆದವರಿಗೆ ಸನ್ಮಾನ ಇದೇ ಬಿಜೆಪಿಯ ನಿಲುವು’ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಸೋಮವಾರ ಸರಣಿ ಟ್ವೀಟ್ ಮಾಡಿದ್ದ ಬಿಜೆಪಿ,‘ಟಿಪ್ಪು ಕೇವಲ ಮತಾಂಧನಷ್ಟೇ ಅಲ್ಲ, ಬದಲಾಗಿ ಕನ್ನಡ ದ್ವೇಷಿ ಕೂಡ. ಕನ್ನಡ ಅಸ್ಮಿತೆಯ ಬಗ್ಗೆ ಮಾತನಾಡುವ ಮುನ್ನ ಸಿದ್ದರಾಮಯ್ಯ ತಮ್ಮ ಇಬ್ಬಂದಿತನಕ್ಕೆ ಔಷಧಿ ಕಂಡುಕೊಳ್ಳಲಿ. ಕಂದಾಯ ದಾಖಲೆಗಳಿಂದಲೂ ಕನ್ನಡ ಅಳಿಸಿ ಪರ್ಷಿಯನ್ ಜಾರಿಗೊಳಿಸಿದ ಜಿಹಾದಿ ಮನಸ್ಥಿತಿಯ ಟಿಪ್ಪುವಿನ ಬಗ್ಗೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಪ್ರೀತಿ?’ ಎಂದು ಪ್ರಶ್ನಿಸಿತ್ತು.

ಇದನ್ನೂ ಓದಿ: 'ಬಿ.ಸಿ.ನಾಗೇಶ್ ಅವರೇ ನಾನು ನಿಮ್ಮ ಹಾಗೆ ವಾಟ್ಸಪ್ ಯುನಿವರ್ಸಿಟಿಯ ವಿದ್ಯಾರ್ಥಿ ಅಲ್ಲ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News