ಬೆಂಗಳೂರು: ಕೋವಿಡ್(COVID-19) ನಿಯಂತ್ರಣ ಸಂಬಂಧಿತವಾಗಿ ಸರ್ಕಾರದ ಎಲ್ಲಾ ಕ್ರಮಗಳನ್ನು ವಿರೋಧಿಸುತ್ತಾ ಬಂದ ಕಾಂಗ್ರೆಸ್ ಇಂದು ಬೂಟಾಟಿಕೆ ತೋರುತ್ತಿದೆ ಎಂದು ಬಿಜೆಪಿ(Karnataka BJP) ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದು,‘ಕೋವಿಡ್ ಪರಿಹಾರ ಕ್ರಮಗಳ ಬಗ್ಗೆ ಅಸಡ್ಡೆ ತೋರಿ, ದುರಿತ ಕಾಲದಲ್ಲಿ ದೇಶದ ಜೊತೆ ನಿಲ್ಲದೆ ಈಗ ಸತ್ತವರ ಹೆಸರಿನಲ್ಲಿ ರಾಜಕಾರಣ ಮಾಡಲು ನಾಚಿಕೆಯಾಗುವುದಿಲ್ಲವೇ?’ ಎಂದು ಪ್ರಶ್ನಿಸಿದೆ.
‘ಕೋವಿಡ್ ಸಾಂಕ್ರಾಮಿಕದ ಮೊದಲನೆಯ ಅಲೆಯ ಬಳಿಕ ಪ್ರಧಾನಿ ಮೋದಿ(Narendra Modi) ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿರೋಧಿಸಿದ್ದೇ ಕಾಂಗ್ರೆಸ್. ಲಸಿಕಾ ಅಭಿಯಾನ ನಡೆಸುವ ಪ್ರಧಾನಿ ಕರೆಗೆ ವಿರೋಧ, ಲಸಿಕೆಯ ಫಲಿತಾಂಶದ ಬಗ್ಗೆ ಅನುಮಾನ, ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆಗೆ ಪ್ರೇರೇಪಣೆ, ಕೋವಿಡ್ ಸಮಯದಲ್ಲಿ ಇವೇ ಅಲ್ಲವೇ ನಿಮ್ಮ ಸಾಧನೆ?’ ಎಂದು ಬಿಜೆಪಿ ‘ಕೈ’ ಪಕ್ಷಕ್ಕೆ ಕುಟುಕಿದೆ.
ಕೋವಿಡ್ ನಿಯಂತ್ರಣ ಸಂಬಂಧಿತವಾಗಿ ಸರ್ಕಾರದ ಎಲ್ಲಾ ಕ್ರಮಗಳನ್ನು ವಿರೋಧಿಸುತ್ತಾ ಬಂದ ಕಾಂಗ್ರೆಸ್ ಇಂದು ಬೂಟಾಟಿಕೆ ತೋರುತ್ತಿದೆ.
ಕೋವಿಡ್ ಪರಿಹಾರ ಕ್ರಮಗಳ ಬಗ್ಗೆ ಅಸಡ್ಡೆ ತೋರಿ, ದುರಿತ ಕಾಲದಲ್ಲಿ ದೇಶದ ಜೊತೆ ನಿಲ್ಲದೆ, ಈಗ ಸತ್ತವರ ಹೆಸರಿನಲ್ಲಿ ರಾಜಕಾರಣ ಮಾಡಲು ನಾಚಿಕೆಯಾಗುವುದಿಲ್ಲವೇ?#ಉತ್ತರಿಸಿಕಾಂಗ್ರೆಸ್
— BJP Karnataka (@BJP4Karnataka) December 4, 2021
ಇದನ್ನೂ ಓದಿ: ನೀವು ಹೋದಲ್ಲೆಲ್ಲ ಸೋಲು ಕಟ್ಟಿಟ್ಟ ಬುತ್ತಿ!: ಖರ್ಗೆಗೆ ಬಿಜೆಪಿ ತಿರುಗೇಟು
‘ಕೋವಿಡ್ ಸಾಂಕ್ರಾಮಿಕದ ಸಾವಿನ ವಿಚಾರದಲ್ಲೂ ರಾಜಕಾರಣ ನಡೆಸುವ ಹೀನ ಮನಸ್ಥಿತಿಗೆ ಕಾಂಗ್ರೆಸ್ ಪಕ್ಷ(Congress Party) ಇಳಿದಿರುವುದು ದುರಂತ. ಸಾವನ್ನು ವಿಜೃಂಭಿಸುವಾಗಲೂ ಅಂತಃಕರಣ ಪ್ರಶ್ನಿಸುವುದಿಲ್ಲವೇ? ನಕಲಿ ಗಾಂಧಿ ಕುಟುಂಬ ನಿರ್ದೇಶಿತ ನಾಟಕ ಇಷ್ಟು ಕೀಳುಮಟ್ಟಕ್ಕೆ ಇಳಿದಿದೆಯೇ?’ ಎಂದು ಬಜೆಪಿ ಕಟುವಾಗಿ ಟೀಕಿಸಿದೆ.
ಕೋವಿಡ್ ಸಾಂಕ್ರಾಮಿದ ಸಾವಿನ ವಿಚಾರದಲ್ಲೂ ರಾಜಕಾರಣ ನಡೆಸುವ ಹೀನ ಮನಸ್ಥಿತಿಗೆ @INCIndia ಪಕ್ಷ ಇಳಿದಿರುವುದು ದುರಂತ.
ಸಾವನ್ನು ವಿಜೃಂಭಿಸುವಾಗಲೂ ಅಂತಃಕರಣ ಪ್ರಶ್ನಿಸುವುದಿಲ್ಲವೇ?
ನಕಲಿ ಗಾಂಧಿ ಕುಟುಂಬ ನಿರ್ದೇಶಿತ ನಾಟಕ ಇಷ್ಟು ಕೀಳುಮಟ್ಟಕ್ಕೆ ಇಳಿದಿದೆಯೇ?#ಉತ್ತರಿಸಿಕಾಂಗ್ರೆಸ್
— BJP Karnataka (@BJP4Karnataka) December 4, 2021
‘ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟವರ ಹೆಸರಿನಲ್ಲಿ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ಸಿಗರೇ ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂದೂಗಳ ಮಾರಣ ಹೋಮದ ಲೆಕ್ಕ ದೇಶದ ಮುಂದಿಡುವಿರಾ? ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟವರ ಹೆಸರಿನಲ್ಲಿ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ಸಿಗರೇ ಕಾಂಗ್ರೆಸ್ ಪ್ರಾಯೋಜಿತ ಸಿಖ್ ಹತ್ಯಾಕಾಂಡದಲ್ಲಿ ನೀವು ನಡೆಸಿದ ನರಮೇಧದ ಲೆಕ್ಕ ಕೊಡುವಿರಾ?’ ಎಂದು ಬಿಜೆಪಿ(BJP) ಪ್ರಶ್ನಿಸಿ ಟ್ವೀಟ್ ಮಾಡಿದೆ.
ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟವರ ಹೆಸರಿನಲ್ಲಿ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ಸಿಗರೇ,
ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂದೂಗಳ ಮಾರಣ ಹೋಮದ ಲೆಕ್ಕ ದೇಶದ ಮುಂದಿಡುವಿರಾ?#ಉತ್ತರಿಸಿಕಾಂಗ್ರೆಸ್ pic.twitter.com/5fAlInkRxP
— BJP Karnataka (@BJP4Karnataka) December 4, 2021
ಇದನ್ನೂ ಓದಿ: K.Rosaiah: ಕರ್ನಾಟಕದ ಮಾಜಿ ರಾಜ್ಯಪಾಲ ಕೆ.ರೋಸಯ್ಯ ವಿಧಿವಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.