ಬೆಂಗಳೂರು: ಆತ್ಮವಂಚಕ ದಲಿತ ವಿರೋಧಿ(Dalit Politics) ಸಿದ್ದರಾಮಯ್ಯರ ಮಾತು ನಂಬಿಕೆಗೆ ಯೋಗ್ಯವೇ ಎಂದು ಕರ್ನಾಟಕ ಬಿಜೆಪಿ ಪ್ರಶ್ನಿಸಿದೆ. ‘ದಲಿತರು ಎಂದರೆ ಬರೀ ಪರಿಶಿಷ್ಟ ಜಾತಿಯವರು ಮಾತ್ರವಲ್ಲ, ನಾನು ಕೂಡ ದಲಿತನೇ. ಅವಕಾಶ ವಂಚಿತರೆಲ್ಲಾ ದಲಿತರು. ಯಾರೇ ಮುಖ್ಯಮಂತ್ರಿ ಆದರೂ ನಾನು ಖುಷಿ ಪಡುತ್ತೇನೆ. ಹೈಕಮಾಂಡ್ ದಲಿತ ಸಮುದಾಯದವರು ಸಿಎಂ ಆಗಲಿ ಎಂದು ಹೇಳಿದರೆ ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ’ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
#ದಲಿತವಿರೋಧಿಸಿದ್ದರಾಮಯ್ಯ ಹ್ಯಾಶ್ ಟ್ಯಾಗ್ ಬಳಿಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ(Karnataka BJP), ‘ಆತ್ಮವಂಚಕ ಸಿದ್ದರಾಮಯ್ಯ ಅವರ ಮಾತು ನಂಬಿಕೆಗೆ ಯೋಗ್ಯವೇ? ಈ ಹಿಂದೆ ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿ ಎರಡು ಕಡೆ ಚುನಾವಣೆಗೆ ನಿಂತರು. ಈಗ ದಲಿತರು ಸಿಎಂ ಆದರೆ ಸ್ವಾಗತ ಎನ್ನುತ್ತಿದ್ದಾರೆ. ಇವರನ್ನು ನಂಬಿದರೆ ದಲಿತರಿಗೆ ಮತ್ತೊಂದು ಮಹಾ ಅನ್ಯಾಯ ಎದುರಾಗುವುದರಲ್ಲಿ ಸಂಶಯವಿಲ್ಲ’ ಎಂದು ಟೀಕಿಸಿದೆ.
ಇದನ್ನೂ ಓದಿ: K Sudhakar : 'ಮುಂದಿನ ವಾರದಿಂದ 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ವಿತರಣೆ'
‘ಸಿದ್ದರಾಮಯ್ಯ(Siddaramaiah)ನವರೇ ನೀವು ಪರೋಕ್ಷವಾಗಿ ಏನನ್ನು ಸ್ಥಾಪಿಸಲು ಹೊರಟಿದ್ದೀರಿ? ‘ದಲಿತ ಸಿಎಂ ಆದರೆ ಖುಷಿ, ನಾನು ದಲಿತನೇ’ ಎಂದು ಹೇಳುವ ಮೂಲಕ ಮತ್ತೊಮ್ಮೆ ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಪಾದಿಸಿದಂತಾಯ್ತು. ನಿಮ್ಮ ಈ ಸ್ವಾರ್ಥ ಜನರಿಗೆ ಅರ್ಥವಾಗುವುದಿಲ್ಲ ಎಂದು ಭಾವಿಸಿದ್ದೀರಾ? ಸಿದ್ದರಾಮಯ್ಯ ಅವರಿಗೆ ದಲಿತ ಪರ ಕಾಳಜಿ ಇದ್ದರೆ ದಲಿತರೇ ಮುಖ್ಯಮಂತ್ರಿ ಎಂದು ಘೋಷಿಸಿ ಎಂದು ನಾವು ಆಗ್ರಹಿಸಿದ್ದೆವು. ಆದರೆ ಸಿದ್ದರಾಮಯ್ಯ ಇಲ್ಲಿಯೂ ಬುರುಡೆ ಬಿಟ್ಟಿದ್ದಾರೆ. ದಲಿತರು ಸಿಎಂ ಆದರೆ ಸ್ವಾಗತವಂತೆ. ಆದರೆ ಅವರೂ ದಲಿತರಂತೆ !!! ಹಾಗಾದರೆ ಸಿದ್ದರಾಮಯ್ಯ ಏನು ಹೇಳಿದಂತಾಯ್ತು?’ ಎಂದು ಬಿಜೆಪಿ ಪ್ರಶ್ನಿಸಿದೆ.
ಸಿದ್ದರಾಮಯ್ಯ ಅವರಿಗೆ ದಲಿತ ಪರ ಕಾಳಜಿ ಇದ್ದರೆ ದಲಿತರೇ ಮುಖ್ಯಮಂತ್ರಿ ಎಂದು ಘೋಷಿಸಿ ಎಂದು ನಾವು ಆಗ್ರಹಿಸಿದ್ದೆವು.
ಆದರೆ ಸಿದ್ದರಾಮಯ್ಯ ಇಲ್ಲಿಯೂ ಬುರುಡೆ ಬಿಟ್ಟಿದ್ದಾರೆ.
ದಲಿತರು ಸಿಎಂ ಆದರೆ ಸ್ವಾಗತವಂತೆ. ಆದರೆ ಅವರೂ ದಲಿತರಂತೆ !!!
ಹಾಗಾದರೆ, ಸಿದ್ದರಾಮಯ್ಯ ಏನು ಹೇಳಿದಂತಾಯ್ತು?#ದಲಿತವಿರೋಧಿಸಿದ್ದರಾಮಯ್ಯ pic.twitter.com/TxzJ2KRTxn
— BJP Karnataka (@BJP4Karnataka) November 10, 2021
‘ಎಲ್ಲ ನಿಯಮಗಳಿಗೂ ಅಪವಾದವಿರುತ್ತದೆ. ಇದೊಂದು ನಿಯಮ. ಹೀಗಾಗಿ ಕೆಲವು ನಿಯಮಗಳಿಗೆ ಅಪವಾದ ಇರುವುದಿಲ್ಲ ಎಂಬ ತರ್ಕ ಪಂಡಿತನ ವಾದ ಗೊತ್ತೇ? ಈ ಸಿದ್ದರಾಮಯ್ಯ ಅವರ ಕತೆಯೂ ಹೀಗೆಯೇ ಆಗಿದೆ. ದಲಿತರು ಸಿಎಂ(Dalit CM)ಆದರೆ ಸ್ವಾಗತ. ನಾನೂ ಒಬ್ಬ ದಲಿತ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಎಲ್ಲ ನಿಯಮಗಳಿಗೂ ಅಪವಾದವಿರುತ್ತದೆ. ಇದೊಂದು ನಿಯಮ. ಹೀಗಾಗಿ ಕೆಲವು ನಿಯಮಗಳಿಗೆ ಅಪವಾದ ಇರುವುದಿಲ್ಲ ಎಂಬ ತರ್ಕ ಪಂಡಿತನ ವಾದ ಗೊತ್ತೇ?
ಈ ಸಿದ್ದರಾಮಯ್ಯ ಅವರ ಕತೆಯೂ ಹೀಗೆಯೇ ಆಗಿದೆ.
ದಲಿತರು ಸಿಎಂ ಆದರೆ ಸ್ವಾಗತ. ನಾನೂ ಒಬ್ಬ ದಲಿತ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ!!!#ದಲಿತವಿರೋಧಿಸಿದ್ದರಾಮಯ್ಯ
— BJP Karnataka (@BJP4Karnataka) November 10, 2021
ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಜಲ ಆಯೋಗದ ಅನುಮತಿ ಬೇಕಾಗಿದೆ: ಬಸವರಾಜ್ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ