ಡಿಸೆಂಬರ್ 5ಕ್ಕೆ ರಾಜ್ಯ ಉಪಚುನಾವಣೆ, ಡಿ.9 ರಂದು ಫಲಿತಾಂಶ

ಕರ್ನಾಟಕ ರಾಜ್ಯ ಉಪ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಈಗ ನಿಗದಿ ಮಾಡಿದೆ. ಈಗ ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆ ಡಿಸೆಂಬರ್ 5 ರಂದು ನಡೆಯಲಿದೆ ಎಂದು ಆಯೋಗ ಪ್ರಕಟಿಸಿದೆ.

Last Updated : Sep 27, 2019, 08:47 PM IST
 ಡಿಸೆಂಬರ್ 5ಕ್ಕೆ ರಾಜ್ಯ ಉಪಚುನಾವಣೆ, ಡಿ.9 ರಂದು ಫಲಿತಾಂಶ title=
ಸಾಂದರ್ಭಿಕ ಚಿತ್ರ

ನವದೆಹಲಿ: ಕರ್ನಾಟಕ ರಾಜ್ಯ ಉಪ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಈಗ ನಿಗದಿ ಮಾಡಿದೆ. ಈಗ ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆ ಡಿಸೆಂಬರ್ 5 ರಂದು ನಡೆಯಲಿದೆ ಎಂದು ಆಯೋಗ ಪ್ರಕಟಿಸಿದೆ.

15 ಕ್ಷೇತ್ರಗಳಿಗೆ ನಡೆಯಬೇಕಾಗಿದ್ದ ರಾಜ್ಯ ಉಪ ಚುನಾವಣೆ ದಿನಾಂಕಕ್ಕೆ ಸುಪ್ರೀಂಕೋರ್ಟ್ ಆದೇಶದನ್ವಯ ತಡೆ ನೀಡಲಾಗಿತ್ತು. ಈಗ ಎಲ್ಲ ಕ್ಷೇತ್ರಗಳ ಉಪ ಚುನಾವಣೆ ದಿನಾಂಕವನ್ನು ನಿಗದಿ ಪಡಿಸಿದ್ದು, ಚುನಾವಣಾ ಆಯೋಗದ ಘೋಷಣೆ ಪ್ರಕಾರ ಈಗ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ಅದಾದ ನಂತರ ಡಿಸೆಂಬರ್ 9ಕ್ಕೆ ಮತ ಎಣಿಕೆ ಕಾರ್ಯ ನಡೆಯುತ್ತದೆ  

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯ 11 ರಂದು ಆರಂಭವಾಗುತ್ತದೆ. ನ.18ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಇನ್ನೂ ನ.19 ರಂದು ನಾಮಪತ್ರಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಕಣದಲ್ಲಿರುವ ಅಭ್ಯರ್ಥಿಗಳು ನ. 21 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ. 

ಚುನಾವಣಾ ಆಯೋಗದ ಘೋಷಣೆಯಂತೆ ರಾಜ್ಯ ಉಪಚುನಾವಣೆಯ ಪೂರ್ಣ ಪ್ರಕ್ರಿಯೆ ಡಿಸೆಂಬರ್ 11 ರೊಳಗೆ ಮುಗಿಯಲಿದೆ.  

Trending News