ಬೆಂಗಳೂರು: ಚೈನ್ ಚೈತ್ರಾ ಯಾರೆಂದು ನಮಗೆ ತಿಳಿದೇ ಇಲ್ಲ ಎಂದು ಜಾರಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ನಾಯಕರು ಹಿಂದೆ ತಮ್ಮ ಸರ್ಕಾರದಲ್ಲಿ ಆಕೆಯ ಮೇಲಿದ್ದ ದ್ವೇಷ ಭಾಷಣದ ಮೂಲಕ ಪ್ರಚೋದನೆ ಮಾಡಿರುವುದರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ಮುತುವರ್ಜಿ ವಹಿಸಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಾಡಿಗೆ ಭಾಷಣಕಾರರನ್ನು ತಯಾರು ಮಾಡಿ ಮುಂದೆ ಬಿಡುವುದೇ ಬಿಜೆಪಿ. ಅವರನ್ನು ಬಂಧಿಸಿದರೆ ವಕಾಲತ್ತು ವಹಿಸುವುದೂ ಬಿಜೆಪಿ. ಆದರೆ ಅಕ್ರಮಗಳು, ಹಗರಣಗಳು ನಡೆದಾಗ ಮಾತ್ರ ಸೋಕಾಲ್ಡ್ ಹಿಂದೂ ಕಾರ್ಯಕರ್ತರು ಬಿಜೆಪಿಗೆ “ಅಪರಿಚಿತರು” ಆಗುವುದೇಕೆ?’ ಎಂದು ಪ್ರಶ್ನಿಸಿದೆ.
ರಾಜ್ಯ ಬಿಜೆಪಿ ನಾಯಕರನ್ನೇ ಭೇಟಿ ಮಾಡಲೊಪ್ಪದ ಬಿಜೆಪಿಯ ಹೈಕಮಾಂಡ್ ನಾಯಕರು ಜೆಡಿಎಸ್ ನಾಯಕರನ್ನು ನಿರಾಯಾಸವಾಗಿ ಭೇಟಿಯಾಗುತ್ತಾರೆ.
A ಟೀಮ್ ಗಿಂತ B ಟೀಮ್ ಮೇಲೆಯೇ ಪ್ರೀತಿ ಜಾಸ್ತಿಯೇ @BJP4Karnataka?
ರಾಜ್ಯ ಬಿಜೆಪಿ ನಾಯಕರು ಕುಮಾರಸ್ವಾಮಿಯವರ ಜೊತೆಗೆ ಹೋಗಿದ್ದಿದ್ದರೆ ಹೈಕಮಾಂಡ್ ನಾಯಕರ ಭೇಟಿ ಸುಲಭವಾಗುತ್ತಿತ್ತು, ವಿರೋಧ ಪಕ್ಷದ ನಾಯಕನ…
— Karnataka Congress (@INCKarnataka) September 21, 2023
ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರದ ಒಪ್ಪಿಗೆ
ಚಕ್ರವರ್ತಿ ಸೂಲಿಬೆಲೆ ಎಂಬ ಕರ್ನಾಟಕದ ಫ್ರಿಂಜ್ ಎಲಿಮೆಂಟ್ ಗೆ ಆತನೇ ಒಪ್ಪಿಕೊಂಡಂತೆ ಟಿಕೆಟ್ ವಂಚನೆ ಮೊದಲೇ ಗೊತ್ತಿತ್ತಂತೆ, @CTRavi_BJP ಅವರಿಗೂ ತಿಳಿದಿತ್ತಂತೆ.
ಬಿಜೆಪಿ ಪಕ್ಷದ ಹೆಸರಲ್ಲಿ ಮಹಾವಂಚನೆ ನಡೆದಿದ್ದರೂ, ಹಣದ ಅಕ್ರಮ ವರ್ಗಾವಣೆ ನಡೆದಿದ್ದರೂ ಈ ಮಹಾ ಸುಭಗಧ್ವಯರು ಸುಮ್ಮನಿದಿದ್ದೇಕೆ?
ಈ ಚೈನ್ ಚೈತ್ರ ನಮಗೆ ತಿಳಿದೇ ಇಲ್ಲ…
— Karnataka Congress (@INCKarnataka) September 21, 2023
‘ರಾಜ್ಯ ಬಿಜೆಪಿ ನಾಯಕರನ್ನೇ ಭೇಟಿ ಮಾಡಲೊಪ್ಪದ ಬಿಜೆಪಿಯ ಹೈಕಮಾಂಡ್ ನಾಯಕರು ಜೆಡಿಎಸ್ ನಾಯಕರನ್ನು ನಿರಾಯಾಸವಾಗಿ ಭೇಟಿಯಾಗುತ್ತಾರೆ. A ಟೀಮ್‍ಗಿಂತ B ಟೀಮ್ ಮೇಲೆಯೇ ಪ್ರೀತಿ ಜಾಸ್ತಿಯೇ ಬಿಜೆಪಿ? ರಾಜ್ಯ ಬಿಜೆಪಿ ನಾಯಕರು ಕುಮಾರಸ್ವಾಮಿಯವರ ಜೊತೆಗೆ ಹೋಗಿದ್ದಿದ್ದರೆ ಹೈಕಮಾಂಡ್ ನಾಯಕರ ಭೇಟಿ ಸುಲಭವಾಗುತ್ತಿತ್ತು, ವಿರೋಧ ಪಕ್ಷದ ನಾಯಕನ ಆಯ್ಕೆಯನ್ನು ಚರ್ಚಿಸಬಹುದಿತ್ತು!’ ಎಂದು ಕಾಂಗ್ರೆಸ್ ಟೀಕಿಸಿದೆ.
‘ಚಕ್ರವರ್ತಿ ಸೂಲಿಬೆಲೆ ಎಂಬ ಕರ್ನಾಟಕದ ಫ್ರಿಂಜ್ ಎಲಿಮೆಂಟ್‍ಗೆ ಆತನೇ ಒಪ್ಪಿಕೊಂಡಂತೆ ಟಿಕೆಟ್ ವಂಚನೆ ಮೊದಲೇ ಗೊತ್ತಿತ್ತಂತೆ, ಸಿ.ಟಿ.ರವಿಯವರಿಗೂ ತಿಳಿದಿತ್ತಂತೆ. ಬಿಜೆಪಿ ಪಕ್ಷದ ಹೆಸರಲ್ಲಿ ಮಹಾವಂಚನೆ ನಡೆದಿದ್ದರೂ, ಹಣದ ಅಕ್ರಮ ವರ್ಗಾವಣೆ ನಡೆದಿದ್ದರೂ ಈ ಮಹಾ ಸುಭಗಧ್ವಯರು ಸುಮ್ಮನಿದಿದ್ದೇಕೆ? ಈ ಚೈನ್ ಚೈತ್ರಾ ನಮಗೆ ತಿಳಿದೇ ಇಲ್ಲ ಎನ್ನುತ್ತಿರುವ ಎನ್ನುತ್ತಿರುವ ಬಿಜೆಪಿಗರು ಹಿಂದುತ್ವದ ಹೆಸರಲ್ಲಿ ಯಾರನ್ನು ಬೇಕಾದರೂ ಬಳಸಿಕೊಂಡು ಬೀದಿಗೆ ತಳ್ಳುತ್ತಾರೆ!’ ಎಂದು ಕಾಂಗ್ರೆಸ್ ಕುಟುಕಿದೆ.
,@CTRavi_BJP ಅವರೇ,
ನಿಮ್ಮ ಪಕ್ಷದ ಟಿಕೆಟ್ ಹೆಸರಲ್ಲಿ ಕೋಟ್ಯಂತರ ರೂಪಾಯಿಯ ವಂಚನೆ ನಡೆದಿದ್ದು ನಿಮ್ಮ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದಿದ್ದು ಏಕೆ?ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹೊಣೆಗಾರಿಕೆ ಹೊಂದಿದ್ದರೂ, ಮಾಜಿ ಸಚಿವರಾಗಿದ್ದರೂ ಇಂತಹ ಕಾನೂನು ಬಾಹಿರ ಚಟುವಟಿಕೆಗೆ ಬೆಂಬಲ ಮೌನದ ಮೂಲಕ ಬೆಂಬಲ…
— Karnataka Congress (@INCKarnataka) September 21, 2023
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಸರಕಾರ ವಜಾಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
‘ಸಿ.ಟಿ.ರವಿವರೇ ನಿಮ್ಮ ಪಕ್ಷದ ಟಿಕೆಟ್ ಹೆಸರಲ್ಲಿ ಕೋಟ್ಯಂತರ ರೂಪಾಯಿಯ ವಂಚನೆ ನಡೆದಿದ್ದು, ನಿಮ್ಮ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದಿದ್ದು ಏಕೆ? ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹೊಣೆಗಾರಿಕೆ ಹೊಂದಿದ್ದರೂ, ಮಾಜಿ ಸಚಿವರಾಗಿದ್ದರೂ ಇಂತಹ ಕಾನೂನು ಬಾಹಿರ ಚಟುವಟಿಕೆಗೆ ಬೆಂಬಲ ಮೌನದ ಮೂಲಕ ಬೆಂಬಲ ನೀಡಿದೇಕೆ? ಬಿಜೆಪಿಯಲ್ಲಿ ನಿಜಕ್ಕೂ ಹಣಕ್ಕಾಗಿ ಟಿಕೆಟ್ ಮಾರಾಟ ನಡೆಯುತ್ತಿತ್ತೆ? ಇಂತಹ ವಂಚನೆಗಳೆಲ್ಲ ಬಿಜೆಪಿಯಲ್ಲಿ ಸಾಮಾನ್ಯವೇ? ಅಥವಾ ಈ ವಂಚನೆ ಬಿಜೆಪಿಯ ದೊಡ್ಡ ನಾಯಕರ ಅಣತಿಯಂತೆ ನಡೆದಿದೆಯೇ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿ ನಾಯಕರ ಭೇಟಿಗೆ ಸಿಗದ ಹೈಕಮಾಂಡ್ ನಾಯಕರು ಕುಮಾರಸ್ವಮಿಯವರಿಗೆ ಸುಲಭಕ್ಕೆ ಸಿಗುತ್ತಿರುವುದು ಬಿಜೆಪಿ ನಾಯಕರ ರಾಜಕೀಯ ದಾರಿದ್ರ್ಯಕ್ಕೆ ಹಿಡಿದ ಕನ್ನಡಿ!
ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ನಾವು ಮೊದಲೇ ಹೇಳಿದ್ದೆವು, ನಾವು ಹೇಳಿದಂತೆಯೇ ಈಗ ಸಾಬೀತು ಮಾಡುತ್ತಿದ್ದಾರೆ.
ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ಬಂದಿಲ್ಲ ಎಂದಿದ್ದ ಜೆಡಿಎಸ್ ಈಗ…
— Karnataka Congress (@INCKarnataka) September 21, 2023
‘ಬಿಜೆಪಿ ನಾಯಕರ ಭೇಟಿಗೆ ಸಿಗದ ಹೈಕಮಾಂಡ್ ನಾಯಕರು ಕುಮಾರಸ್ವಾಮಿಯವರಿಗೆ ಸುಲಭಕ್ಕೆ ಸಿಗುತ್ತಿರುವುದು ಬಿಜೆಪಿ ನಾಯಕರ ರಾಜಕೀಯ ದಾರಿದ್ರ್ಯಕ್ಕೆ ಹಿಡಿದ ಕನ್ನಡಿ! ಜೆಡಿಎಸ್ ಬಿಜೆಪಿಯ ‘ಬಿ’ ಟೀಮ್ ಎಂದು ನಾವು ಮೊದಲೇ ಹೇಳಿದ್ದೆವು, ನಾವು ಹೇಳಿದಂತೆಯೇ ಈಗ ಸಾಬೀತು ಮಾಡುತ್ತಿದ್ದಾರೆ. ಬಿಜೆಪಿ ಜೊತೆಗೆ ಹೋಗುವ ದಾರಿದ್ರ್ಯ ಬಂದಿಲ್ಲ ಎಂದಿದ್ದ ಜೆಡಿಎಸ್ ಈಗ ಅಮಿತ್ ಶಾ ಮನೆಯ ಬಾಗಿಲು ಬಡಿಯುತ್ತಿದ್ದಾರೆ. ಇಂತಹ ಆತ್ಮವಂಚನೆಯ ಕೆಲಸಕ್ಕಿಂತ ಕುಮಾರಸ್ವಾಮಿಯವರೇ ಹೇಳಿದ್ದಂತೆ ಪಕ್ಷವನ್ನು ವಿಸರ್ಜಿಸಿವುದೇ ಉತ್ತಮ!’ ಎಂದು ಕಾಂಗ್ರೆಸ್ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.