Hijab Controversy - ಕರ್ನಾಟಕದಿಂದ ಆರಂಭವಾದ ಹಿಜಾಬ್ ವಿವಾದದಲ್ಲಿ (Karnataka Hijab Controversy) ರಾಜಕೀಯ ಹಸ್ತಕ್ಷೇಪ ನಿರಂತರವಾಗಿ ಹೆಚ್ಚುತ್ತಿದೆ. ಕರ್ನಾಟಕದಿಂದ ಆರಂಭವಾದ ಈ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಶುಕ್ರವಾರ, ಈ ವಿಷಯದಲ್ಲಿ ತಕ್ಷಣದ ಕ್ರಮಕೈಗೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ವಿಷಯವನ್ನು ರಾಷ್ಟ್ರೀಯ ಪ್ರಕರಣವನ್ನಾಗಿಸಬೇಡಿ ಎಂದು ಹೇಳಿದೆ. ಈ ಕುರಿತು ದೇಶಾದ್ಯಂತ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನೊಂದೆಡೆ ಕಾಲೇಜಿನಲ್ಲಿ ಧಾರ್ಮಿಕ ಘೋಷಣೆ ಕೂಗಿ ಚರ್ಚೆಗೆ ಗ್ರಾಸವಾದ ಮುಸ್ಕಾನ್ ಖಾನ್ (Muskaan Khan) ಹೇಳಿಕೆಯೊಂದು ಇದೀಗ ಬಹಿರಂಗಗೊಂಡಿದೆ.
ಮುಸ್ಕಾನ್ ಖಾನ್ ಅವರು ಜೀ ನ್ಯೂಸ್ ಜೊತೆಗಿನ ಸಂಭಾಷಣೆಯಲ್ಲಿ ತಮ್ಮ ಅಸೈನ್‌ಮೆಂಟ್ ಸಲ್ಲಿಸಲು ಕಾಲೇಜಿಗೆ ಹೋಗಿರುವುದಾಗಿ ಹೇಳಿದ್ದಾಳೆ. ಕಾಲೇಜು ತಲುಪಿದ ಕೂಡಲೇ ಆಕೆಯನ್ನು ನೋಡಿದ ಕೆಲವು ವಿದ್ಯಾರ್ಥಿಗಳು ಹಿಜಾಬ್ ತೆಗೆಯುವಂತೆ ಹೇಳಿ, ಜೈ ಶ್ರೀ ರಾಮ್ ಎಂದು ಕೂಗಲಾರಂಭಿಸಿದರು. ಮನೆಗೆ ಮರಳುತ್ತಿರುವಾಗಲು ಕೂಡ ಅವರು ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಇನ್ನೊಂದೆಡೆ ವಿದ್ಯಾರ್ಥಿನಿ ಕೂಡ ಕಾಲೇಜು ಆವರಣದಲ್ಲಿ 'ಅಲ್ಲಾಹ್ ಹು ಅಕ್ಬರ್' ಘೋಷಣೆ ಕೂಗಿದ್ದಾಳೆ. ಪ್ರಿಯಾಂಕಾ ಗಾಂಧಿ (Priyanka Gandhi) ಮತ್ತು ಅಸಾದುದ್ದೀನ್ ಓವೈಸಿ (Asaduddin Owaisi) ಅವರಿಂದ ದೊರೆತ ಬೆಂಬಲದ ಕುರಿತು ಮಾತನಾಡಿರುವ ಮುಸ್ಕಾನ್ ತಾನೋರ್ವ ವಿದ್ಯಾರ್ಥಿನಿಯಾಗಿದ್ದು. ಓದನ್ನೇ ಮುಂದುವರೆಸುವೆ, ಅವರಿಗೆ ರಾಜಕೀಯಕ್ಕೆ ಬರುವ ಇರಾದೆ ಇಲ್ಲ ಎಂದಿದ್ದಾಳೆ. ಕಾಲೇಜಿನ ಪ್ರಾಂಶುಪಾಲರಿಂದ ಹಿಡಿದು ಸಿಬ್ಬಂದಿವರೆಗೆ ಎಲ್ಲರೂ ಜೊತೆಗಿದ್ದಾರೆ ಎಂದು ಮುಸ್ಕಾನ್ ಹೇಳಿದ್ದಾರೆ. ಓದಿನ ವಿಚಾರದಲ್ಲಿ ಹಿಂದೂ-ಮುಸ್ಲಿಂ ಎಂದು ಬೇಡ ಎಂದು ಮುಸ್ಕಾನ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನನಗೆ ಸಂಪೂರ್ಣ ನಂಬಿಕೆ ಇದೆ ಹಾಗೂ ಕೋರ್ಟ್ ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿದೆ ಎಂದೂ ಕೂಡ ಮುಸ್ಕಾನ್ ಹೇಳಿದ್ದಾಳೆ.
ಇದನ್ನೂ ಓದಿ-'ತೀರ್ಪು ಬರುವವರೆಗೂ ಧಾರ್ಮಿಕ ಉಡುಗೆ ತೊಡಬಾರದು' : ಹೈಕೋರ್ಟ್ ಖಡಕ್ ಸೂಚನೆ
ಯಾರು ಈ ಮುಸ್ಕಾನ್?
ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಮಣಿಪಾಲದ ಮಹಾತ್ಮಾ ಗಾಂಧಿ ಮೊಮೊರಿಯಲ್ ಕಾಲೇಜಿನಲ್ಲಿ ಮುಸ್ಕಾನ್ ಓದುತ್ತಾಳೆ. ಸಾಮಾಜಿಕ ಮಾಧ್ಯಮದಲ್ಲಿ ಈ ಯುವತಿಯ ವಿಡಿಯೋ ಇತ್ತೀಚಿಗೆ ಭಾರಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ 'ಜೈ ಶ್ರೀರಾಮ್' ಘೋಷಣೆಯನ್ನು ಕೂಗುತ್ತಿದ್ದ ವಿದ್ಯಾರ್ಥಿಗಳಿಗೆ ತಿರುಗಿ ನಿಂತು 'ಅಲ್ಲಾಹ್ ಹು ಅಕ್ಬರ್' ಘೋಷಣೆಯನ್ನು ಕೂಗಿದ್ದಳು. ಮುಸ್ಕಾನ್ ಈ ಕಾಲೇಜಿನ ಬಿ.ಕಾಮ್ ಎರಡನೇ ವರ್ಷದಲ್ಲಿ ಅಧ್ಯಯನ ನಡೆಸುತ್ತಾಳೆ.
ಇದನ್ನೂ ಓದಿ-ಹಿಜಾಬ್ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ, ಕೋರ್ಟ್ ಹೇಳಿದ್ದೇನು ?
ರಾಷ್ಟ್ರೀಯ ಪ್ರಕರಣವನ್ನಾಗಿಸಬೇಡಿ ಎಂದ ಸುಪ್ರೀಂ
ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸುತ್ತಿರುವುದಾಗಿ ಹೇಳಿದೆ. ಇದನ್ನು ರಾಷ್ಟ್ರೀಯ ಮಟ್ಟದ ವಿಷಯವನ್ನಾಗಿ ಮಾಡಬೇಡಿ ಮತ್ತು ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸುವುದಾಗಿ ಸುಪ್ರೀಂ ಕೋರ್ಟ್ ವಕೀಲರಿಗೆ ಹೇಳಿದೆ. ಹಿಜಾಬ್ ವಿಷಯವನ್ನು ಧಾರ್ಮಿಕ ಮತ್ತು ರಾಜಕೀಯ ಮಾಡಬೇಡಿ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಇದನ್ನೂ ಓದಿ-ಸುಪ್ರೀಂ ಕೋರ್ಟ್ ಕದ ತಟ್ಟಿದ ಹಿಜಾಬ್ ವಿವಾದ ಪ್ರಕರಣ, ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.