ಕವಿಪವಿ ವೆಬಿನಾರ್: ಯಾವುದೇ ಮಾಧ್ಯಮದ ಭವಿಷ್ಯ ಆತಂಕದಲ್ಲಿಲ್ಲ; ಸಂಪಾದಕರ ಅಭಿಮತ

ಮಾಧ್ಯಮ ಯಾವುದಾದರೂ ಸರಿ. ಬಳಸುವ ಭಾಷೆ ಚೆನ್ನಾಗಿರಬೇಕು. ಸುದ್ದಿಯನ್ನು ಗ್ರಹಿಸಲು ಚೆನ್ನಾಗಿ ಓದಿಕೊಂಡಿರಬೇಕು. ಜೊತೆಗೆ ಗ್ರಹಿಸಿದ ಸುದ್ದಿಯನ್ನು ಬೇರೆಯವರಿಗೆ ಅರ್ಥವಾಗುವಂತೆ ತಿಳಿಸಬೇಕು. ಹಾಗಿದ್ದಲ್ಲಿ ನೀವು ಮಾಧ್ಯಮ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಬಹುದು ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅಭಿಪ್ರಾಯಪಟ್ಟರು. 

Written by - Zee Kannada News Desk | Last Updated : Feb 3, 2024, 05:33 PM IST
  • ಈಗಲೂ ಕೂಡ ಮುದ್ರಣ ಮಾಧ್ಯಮದ ಭವಿಷ್ಯಕ್ಕೆ ತೊಂದರೆಯಿಲ್ಲ
  • ಭಾರತದಲ್ಲಿ ಓದುವವರ ಸಂಖ್ಯೆ ಇದೆ
  • ಮುದ್ರಣ ಮಾಧ್ಯಮ ಪೂರ್ತಿ ನಿಂತು ಹೋಗುತ್ತದೆ ಎಂಬ ಪರಿಸ್ಥಿತಿ ಇಲ್ಲ
ಕವಿಪವಿ ವೆಬಿನಾರ್: ಯಾವುದೇ ಮಾಧ್ಯಮದ ಭವಿಷ್ಯ ಆತಂಕದಲ್ಲಿಲ್ಲ; ಸಂಪಾದಕರ ಅಭಿಮತ title=

ಬೆಂಗಳೂರು, ಫೆ. 03: ಮಾಧ್ಯಮ ಯಾವುದಾದರೂ ಸರಿ. ಬಳಸುವ ಭಾಷೆ ಚೆನ್ನಾಗಿರಬೇಕು. ಸುದ್ದಿಯನ್ನು ಗ್ರಹಿಸಲು ಚೆನ್ನಾಗಿ ಓದಿಕೊಂಡಿರಬೇಕು. ಜೊತೆಗೆ ಗ್ರಹಿಸಿದ ಸುದ್ದಿಯನ್ನು ಬೇರೆಯವರಿಗೆ ಅರ್ಥವಾಗುವಂತೆ ತಿಳಿಸಬೇಕು. ಹಾಗಿದ್ದಲ್ಲಿ ನೀವು ಮಾಧ್ಯಮ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಬಹುದು ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅಭಿಪ್ರಾಯಪಟ್ಟರು. ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ (ಕವಿಪವಿ) ಕೂಟ ಆಯೋಜಿಸಿದ್ದ ವೆಬಿನಾರ್ನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ವಸಂತ ನಾಡಿಗೇರ ಅವರೊಂದಿಗೆ ಭಾಗವಹಿಸಿ ಮಾತನಾಡಿದರು. 

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಮಾಧ್ಯಮ ಉನ್ನತಿ ಹೊಂದುತ್ತಿದೆ ಎಂಬ ಅಭಿಪ್ರಾಯಗಳಿವೆ. ಹೀಗಾಗಿ ಯಾವ ಮಾಧ್ಯಮವನ್ನು ಆರಿಸಿಕೊಳ್ಳಬೇಕು ಎಂಬ ಸಹಜ ಗೊಂದಲಗಳು ಯುವ ಪತ್ರಕರ್ತರಲ್ಲಿವೆ ಈ ಕುರಿತು ‘ಡಿಜಿಟಲ್ ಸುದ್ದಿ ಮಾಧ್ಯಮದ ಉನ್ನತಿ ಮತ್ತು ಮುದ್ರಣ ಮಾಧ್ಯಮದ ಭವಿಷ್ಯ’ ಎಂಬ ವಿಷಯದ ಕುರಿತು ಪತ್ರಿಕೋದ್ಯಮ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳೂ ಸೇರಿದಂತೆ ಯುವ ಪತ್ರಕರ್ತರಿಗೆ ಭವಿಷ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ವೆಬಿನಾರ್ ಆಯೋಜಿಸಲಾಗಿತ್ತು.

ಡಿಜಿಟಲ್ ಮಾಧ್ಯಮದಿಂದ ಮುದ್ರಣ ಮಾಧ್ಯಮದ ಭವಿಷ್ಯಕ್ಕೆ ಆತಂಕ?

ಡಿಜಿಟಲ್ ಮಾಧ್ಯಮದ ಉನ್ನತಿಯಿಂದ ಮುದ್ರಣ ಮಾಧ್ಯಮದ ಭಿಷ್ಯಕ್ಕೆ ಯಾವುದೇ ತೊಂದರೆಯಿಂದ ಎಂದು ಇಬ್ಬರೂ ಸಂಪಾದಕರು ಅಭಿಪ್ರಾಯ ಪಟ್ಟರು. ಇದೇ ವಿಷಯದ ಮೇಲೆ ಮಾತನಾಡಿದ ರವೀಂದ್ರ ಭಟ್ಟ ಅವರು, ಪತ್ರಕರ್ತರಾಗುವವರಿಗೆ ಮಾಧ್ಯಮ ಯಾವೂದಾದರೂ ಸರಿ. ಭಾಷೆಯ ಮೇಲೆ ಹಿಡಿತವಿರಬೇಕು. ನೀವು ತಾಂತ್ರಿಕ ವಿಷಯಗಳನ್ನು ವಿಡಿಯೋ ಎಡಿಟಿಂಗ್ ಮುಂತಾದ ತಾಂತ್ರಿಕ ವಿಷಯಗಳನ್ನು ನೀವು 4 ದಿನಗಳಲ್ಲಿ ಕಲಿಯಬಹುದು. ಆದರೆ ಭಾಷೆ, ಗ್ರಹಿಸುವಿಕೆ, ಸರಳವಾಗಿ ವಿವರಿಸಉವುದನ್ನು ನೀವು ಅರಿತಿರಬೇಕು ಎಂದು ವಿವರಿಸಿದರು.

ಇದೇ ವಿಷಯದ ಮೇಲೆ ಮಾತನಾಡಿದ ವಸಂತ ನಾಡಿಗೇರ ಅವರು, ಪತ್ರಿಕೋದ್ಯಮದ ವಿದ್ಯಾರ್ಥಿಗಳು, ಎಲ್ಲೂ ಸೀಟ್ ಸಿಗಲಿಲ್ಲ ಅಂತಾ ಇಲ್ಲಿಗೆ ಬಂದೆ ಎನ್ನುವಂತಿರಬಾರದು. ಒಂದು ಬಾರಿ ಈ ಕ್ಷೇತ್ರಕ್ಕೆ ಬಂದರೆ ಆಸಕ್ತಿ ಬೆಳೆಸಿಕೊಳ್ಳಬೇಕು. ಆಸಕ್ತಿಯನ್ನೇ ಬೆಳೆಸಿಕೊಳ್ಳದ್ದರೆ ಮಾಧ್ಯಮ ಕ್ಷೇತ್ರದಲ್ಲಿ ಬೆಳೆಯುವುದು ಹೇಗೆ?. ಹೀಗಾಗಿ ಮಾಧ್ಯಮ ಯಾವುದೇ ಇರಲಿ ಆಸಕ್ತಿ ಬೇಕೆ ಬೇಕು. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈಗ ಹೇಗಾಗಿದೆ ಎಂದರೆ, ಪತ್ರಕರ್ತರು ಪಾಠ ಮಾಡಲ್ಲ, ಪಾಠ ಮಾಡುವ ಅಧ್ಯಾಪಕರು ಓದುವುದಿಲ್ಲ ಎಂಬಂತಾಗಿದೆ. ಇಬ್ಬರಲ್ಲಿಯೂ ಬದಲಾವಣೆ ಬರಬೇಕು. ಪತ್ರಕರ್ತರು ವಿವಿಗಳಿಗೆ ಹೋಗಿ ತಮ್ಮ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಕೊಡಬೇಕು. ಅದೇ ರೀತಿ ಅಧ್ಯಾಪರ ಈಗಿನ ಕಾಲಕ್ಕೆ ಬೇಕಾದಂತಹ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು ಎಂದರು. 

ಸಂಪಾದಕರಾದ ವಸಂತ ನಾಡಿಗೇರ ಮಂಡಿಸಿದ ಕೆಲವು ವಿಷಯಗಳು..

* ಇಂದಿನ ವೆಬಿನಾರ್ ವಿಷಯದ ಕುರಿತು ಚರ್ಚೆ ಮಾಡುವುದು ಇಂದಿನ ಅಗತ್ಯವಾಗಿದೆ. ಇದು ಅತ್ಯಂತ ಪ್ರಸ್ತುಕವಾದ ವಿಷಯ. ಡಿಜಿಟಲ್ ಮಾಧ್ಯಮದ ಉನ್ನತಿ ಸಂದರ್ಭದಲ್ಲಿ ಮುದ್ರಣ ಮಾಧ್ಯಮದ ಭವಿಷ್ಯದ ಬಗ್ಗೆ ಸಂಶಯಗಳು ಎದ್ದಿವೆ.  
* ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿಲ್ಲ. ನಟಿ ಪೂನಂ ಪಾಂಡೆ ನಿಧನದ ಸುದ್ದಿ ಬಂದಿತು. ನಿಧನದ ಬಗ್ಗೆ ದಾಖಲೆ ಇಲ್ಲ ಎಂದರು. ಪೂರ್ತಿ ಫ್ಯಾಕ್ಟ್ ಚೆಕ್ ಮಾಡದೇ ಸುದ್ದಿ ಮಾಡುತ್ತಾರೆ. ನಾವೇ ಮೊದಲು ಸುದ್ದಿಯನ್ನು ಕೊಡಬೇಕು ಎಂಬ ಧಾವಂತವಿದೆ. ಈ ಧಾವಂತದಿಂದ ಸುಳ್ಳು ಸುದ್ದಿಗಳು ಪ್ರಕಟವಾಗುತ್ತವೆ. ನಿಧನದ ಸುದ್ದಿ ಕೊಡುವಾಗ ಎಚ್ಚರಿಕೆ ಅಗತ್ಯ. ಹೀಗಾಗಿ ವಿಶ್ವಾಸಾರ್ಹತೆಯ ಕೊರತೆ ಬಹಳಷ್ಟು ಕಂಡು ಬರುತ್ತಿದೆ. ಡಿಜಿಟಲ್ ಮಾಧ್ಯಮದ ಭರಾಟೆಯಲ್ಲಿ ಸಿಲುಕಿ ಮುದ್ರಣ ಮಾಧ್ಯಮವೂ ವೇಗಕ್ಕೆ ತುತ್ತಾಗುತ್ತಿದೆ. ಸುದ್ದಿ ನಿಖರತೆಯನ್ನು ಪರಿಶೀಲನೆ ಮಾಡದೇ ಸುದ್ದಿ ಮಾಡುತ್ತಿವೆ. ಸುದ್ದಿಯಲ್ಲಿ ನಿಖರತೆ ಇರಬೇಕು.
* ಮುದ್ರಣ ಮಾಧ್ಯಮದ ನ್ಯೂನತೆಗಳನ್ನು ತಿದ್ದಿಕೊಳ್ಳಲು, ಬದಲಾವಣೆ ಮಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಡಿಜಿಟಲ್ ಅಥವಾ ಹೈಬ್ರಿಡ್ ಮಾಧ್ಯಮ ಕೊಡುತ್ತಿವೆ. ಹೀಗಾಗಿ ಡಿಜಿಟಲ್ ಮಾಧ್ಯಮದಿಂದ ನಮಗೆ ಅನುಕೂಲವೂ ಆಗಿದೆ.
* ಈಗ ಮುದ್ರಣ ಮಾಧ್ಯಮದ ವರದಿಗಾರನು, ಮುದ್ರಣ ಹಾಗೂ ಡಿಜಿಟಲ್ ಎರಡೂ ಮಾಧ್ಯಮಗಳಿಗೆ ಸುದ್ದಿ ಕೊಡಬೇಕು. ಹೀಗಾಗಿ ಮಾಧ್ಯಮಗಳು ಯಾವುದೂ ಕೂಡ ಬೇರೆ ಬೇರೆ ಅಲ್ಲ. 
* ನಾವು ಮುದ್ರಣ ಮಾಧ್ಯಮದಲ್ಲಿದ್ದುಕೊಂಡು ನನಗೆ ಏನೂ ಬರಲ್ಲ ಅಂದರೆ ಭವಿಷ್ಯವಿಲ್ಲ. ನಾವು ಕೇಲವ ಒಂದು ವಿಭಾಗದಲ್ಲಿ ಕೆಲಸ ಮಾಡುತ್ತೇವೆ ಎಂದುಕೊಂಡರೆ ಮುದ್ರಣ ಮಾಧ್ಯಮದಲ್ಲಿ ಭವಿಷ್ಯವಿಲ್ಲ. 
* ಮುದ್ರಣ ಮಾಧ್ಯಮದಲ್ಲಿ ಭವಿಷ್ಯ ಕಂಡುಕೊಳ್ಳಲು ನೀವು ಎಲ್ಲವನ್ನು ತಿಳಿದಿರಬೇಕು. ಹಿಂದೆ ಪತ್ರಿಕಗಳಲ್ಲಿ ಬರೆಯಲು ವರದಿರಾರರಿದ್ದರು, ಪ್ರೂಫ್ ರೀಡಿಂಗ್ ಮಾಡಲು ಮತ್ತೊಬ್ಬರು, ಪೇಜ್ ಮಾಡಲು ಬೇರೆಯವರು. ಆದರೆ, ಈಗ ಹಾಗಿಲ್ಲ. ಎಲ್ಲ ವಿಷಯಗಳನ್ನು ನಾವು ಮಾಡಲೇಬೇಕು. ವರದಿಗಾರ ಪೇಜ್  ಮಾಡುವುದು ಕಲಿತಿರಬೇಕು.
* ಜಗತ್ತಿನ ಎಲ್ಲ ಪ್ರಾಣಿಗಳು ಹೊಂದಿಕೊಳ್ಳಲೇಬೇಕು. ಮಂಗನಿಂದ ಮಾನವ ಅಂತೇವೆ. ಆದರೆ ಮಂಗಗಳು ಇನ್ನೂ ಅಲ್ಲಿಯೇ ಇವೆ. ಯಾಕೇಂದರೆ ಅವು ಬದಲಾವಣೆಯನ್ನು ಅಳವಡಿಸಿಕೊಂಡಿಲ್ಲ. ನೀವು ಬದಲಾಗದಿದ್ದರೆ ಎಲ್ಲಿರುತ್ತಿರೋ ಅಲ್ಲಿಯೇ ಇರುತ್ತಿರಿ. ಕಾಲಘಟ್ಟಕ್ಕೆ ತಕ್ಕಂತೆ ಬದಲಾವಣೆಗೊಂಡರೆ ನಾವು ಭವಿಷ್ಯ, ಅಸ್ತಿತ್ವ ಕಂಡುಕೊಳ್ಳಬಹುದು. ಎಲ್ಲವನ್ನೂ ಪರಸ್ಪರ ಪೂರಕವಾಗಿ ಕಲಿತುಕೊಳ್ಳಬೇಕು.
* ಮೊದಲು ಬ್ರೇಕಿಂಗ್ ಅನ್ನುತ್ತಿದ್ದರು. ಈಗ ಸೂಪರ್ ಬ್ರೇಕಿಂಗ್ ಎಂದು ಕೊಡುತ್ತಿದ್ದಾರೆ. ಕ್ರಾಸ್ ಚೆಕ್ ಮಾಡಿ ಸುದ್ದಿ ಕೊಡಿ ಎನ್ನುತ್ತಿದ್ದರು ಈಗ ಸುದ್ದಿ ನೋಡುವುದಕ್ಕಾಗಿ ಕ್ರಾಸ್ ಚೆಕ್ ಮಾಡಿ ಎನ್ನುತ್ತಿದ್ದಾರೆ. ಆದರೆ ಹೀಗಾಗಬಾರದು. ವಿಶ್ವಾಸಾರ್ಹತೆ ಮುಖ್ಯ ಎಂದು ಸಂಯುಕ್ತ ಕರ್ನಾಟಕದ ಸಂಪಾದಕರಾದ ವಸಂತ ನಾಡಿಗೇರ ವಿರಿಸಿದರು. 
 
ಪ್ರಜಾವಾಣಿ ಸಂಪಾದಕರಾದ ರವೀಂದ್ರ ಭಟ್ಟ ಮಂಡಿಸಿದ ಕೆಲವು ವಿಷಯಗಳು ಇಲ್ಲಿವೆ..

* ಡಿಜಿಟಲ್ ಮಾಧ್ಯಮದ ಉನ್ನತಿ ಆಗುತ್ತಿರುವುದು ನಿಜ. ಹಾಗಂತ ಮುದ್ರಣ ಮಾಧ್ಯಮದ ಅವನತಿ ಆಗುತ್ತದೆ ಎಂದು ಅನ್ನಿಸುತ್ತಿಲ್ಲ. ಈಗ ನಾನು ಪ್ರಜಾವಾಣಿ.ನೆಟ್ ಕೂಡ ನೋಡಿಕೊಳ್ಳುತ್ತಿರುವುದರಿಂದ ಎರಡೂ ಮಾಧ್ಯಮಗಳ ಕುರಿತು ನನಗೆ ಪರಿಚಯವಿದೆ. 
* ಈ ಹಿಂದೆ ಟಿವಿ ಮಾಧ್ಯಮ ಬಂದಾಗ, ನಂತರ 24x7 ನ್ಯೂಸ್ ಚಾನಲ್ಗಳು ಬಂದಾಗಲೂ ಇಂತಹ ಚರ್ಚೆಗಳು ನಡೆದಿದ್ದವು. ಆದರೆ ಮುದ್ರಣ ಭವಿಷ್ಯಕ್ಕೆ ತೊಂದರೆ ಆಗಿಲ್ಲ.
* ಈಗಲೂ ಕೂಡ ಮುದ್ರಣ ಮಾಧ್ಯಮದ ಭವಿಷ್ಯಕ್ಕೆ ತೊಂದರೆಯಿಲ್ಲ. ಭಾರತದಲ್ಲಿ ಓದುವವರ ಸಂಖ್ಯೆ ಇದೆ. ಮುದ್ರಣ ಮಾಧ್ಯಮ ಪೂರ್ತಿ ನಿಂತು ಹೋಗುತ್ತದೆ ಎಂಬ ಪರಿಸ್ಥಿತಿ ಇಲ್ಲ. 
* ಇವತ್ತು ಜನರು ನಂಬುತ್ತಿರುವುದು ಮುದ್ರಣ ಮಾಧ್ಯಮವನ್ನು ಮಾತ್ರ. ಆದರೆ ಪೇಪರ್ಗಳನ್ನು ಓದುವ ಸಮಯ ಕಡಿಮೆಯಾಗಿರಬಹುದು. ಮೊದಲು 1 ಗಂಟೆ ಪೇಪರ್ ಓದುತ್ತಿದ್ದವರು, ಇವತ್ತು 15 ನಿಮಿಷಗಳಲ್ಲಿ ಪತ್ರಿಕೆಗಳನ್ನು ಓದಿ ಮುಗಿಸುತ್ತಿರಬಹುದು. ಈಗ ಪತ್ರಿಕೆಗಳ ವಿನ್ಯಾಸ ಬದಲಾಗಿದೆ. ಪತ್ರಿಕೆಗಳು ಎಲ್ಲಿಯವರಗೆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುತ್ತವೆಯೋ ಅಲ್ಲಿವರೆಗೆ ಉಳಿಯುತ್ತವೆ. 
* ಮುದ್ರಣ ಮಾಧ್ಯಮಗಳಿಗೆ ಸಮಯವಿರುತ್ತದೆ. ಆದರೆ ಡಿಜಿಟಲ್ ಮಾಧ್ಯಮದವರಿಗೆ ಸಮಯವಿರುವುದಿಲ್ಲ. ಆದರೂ ಫ್ಯಾಕ್ಟ್ ಚೆಕ್ ಮಾಡದೇ ಸುದ್ದಿ ಹಾಕಬಾರದು. 
* ಈಗ ಎಲ್ಲರೂ ಪತ್ರಕರ್ತರೆ. ಹಿಂದೆ ಪತ್ರಕರ್ತರು ಎಂದರೆ ಅದಕ್ಕೊಂದಿಷ್ಟು ಜನರು ಇರುತ್ತಿದ್ದರು. ಆದರೆ ಈಗ ಹಾಗಿಲ್ಲ. ಎಲ್ಲರೂ ಬರೆಯುತ್ತಾರೆ, ರೆಕಾರ್ಡ್ ಮಾಡುತ್ತಾರೆ. ಈಗ ಎಲ್ಲರೂ ಪತ್ರಕರ್ತರೇ ಆಗಿದ್ದಾರೆ. ಹೀಗಾಗಿ ಪೈಪೋಟಿ ಇದೆ.
* ಡಿಜಿಟಲ್ ಮಾಧ್ಯಮದಿಂದ ಮುದ್ರಣ ಮಾಧ್ಯಮ ಭಾಷೆ ಬದಲಾಗಿದೆ. ಇವತ್ತು ಮುದ್ರಣ ಮಾಧ್ಯಮದಲ್ಲಿಯೂ ಅನಗತ್ಯ ವಿಶೇಷಣಗಳನ್ನು ಬಳಸುತ್ತಿದ್ದೇವೆ. ಇದು ನಿಲ್ಲಬೇಕು.
* ಜೊತೆಗೆ ಮುದ್ರಣ ಮಾಧ್ಯಮದಲ್ಲಿಯೂ ಹೆಡ್ಡಿಂಗ್ನಲ್ಲಿ ಆಕರ್ಷಣೆಯನ್ನು ಬಳಸುತ್ತಿದ್ದಾರೆ. ಅಕ್ಷರಕ್ಕೊಂದು ಬಣ್ಣವನ್ನು ಕೊಡುತ್ತಿದ್ದೇವೆ. ಇದಕ್ಕೆ ಕಾರಣ ಡಿಜಿಟಲ್ ಹಾಗೂ ಟಿವಿ ಮಾಧ್ಯಮದ ಪ್ರಭಾವಕ್ಕೆ ಮುದ್ರಣ ಮಾಧ್ಯಮ ಒಳಗಾಗಿರುವುದು ನಮ್ಮ ಮೂಲತನವನ್ನು ನಾವು ಮುದ್ರಣ ಮಾಧ್ಯಮದಲ್ಲಿ ನಾವು ಉಳಿಸಿಕೊಳ್ಳಬೇಕಿದೆ.
* ಎಲ್ಲವನ್ನೂ ಮುದ್ರಣ ಮಾಧ್ಯಮದಲ್ಲಿ ಹಾಕಲು ಆಗುವುದಿಲ್ಲ. ಡಿಜಿಟಲ್ ಪೇಪರ್ನಲ್ಲಿ ಹಾಕುತ್ತೇವೆ ಎಂದರೂ, ಚಿಕ್ಕದಾದರೂ ಕೂಡ ನಮ್ಮ ಸುದ್ದಿಯನ್ನು ಮುದ್ರಣ ಮಾಧ್ಯಮದಲ್ಲಿಯೇ ಪ್ರಕಟಿಸಿ ಎಂದು ಕೇಳುತ್ತಾರೆ. 
* ಮುದ್ರಣ ಮಾಧ್ಯಮದಲ್ಲಿ ನನ್ನ ಓದುಗ ಯಾರು ಅಂತಾ ಗೊತ್ತಾಗುವುದಿಲ್ಲ. ಆದರೆ ಡಿಜಿಟಲ್ ಮಾಧ್ಯಮದಲ್ಲಿ ನನ್ನ ಓದುಗ ಯಾರು ಅನ್ನೋದು ಗೊತ್ತಾಗುತ್ತದೆ. ಹೀಗಾಗಿ ಓದುಗನಿಗೆ ಬೇಕಾದ ಸುದ್ದಿಯನ್ನು ಕೊಡಬಹುದು. ಡಿಜಿಟಲ್ ಮಾಧ್ಯಮದ ಈಗ ಉನ್ನತ ಸ್ಥಾನಕ್ಕೆ ಬಂದಿದೆ. ವರಮಾನವನ್ನೂ ಕೂಡ ಪಡೆಯುತ್ತಿವೆ. 
* ಪತ್ರಿಕೆಗಳ ಆದಾಯ ಜಾಹೀರಾತಿನ ಮೇಲೆ ನಿಂತಿದೆ. ಮುದ್ರಣ ಮಾಧ್ಯಮದಲ್ಲಿ ಸುದ್ದಿ ಯಾವುದು ಜಾಹೀರಾತು ಯಾವುದು ಎಂಬುದನ್ನು ಓದುಗ ನೋಡುವಂತೆ ಮಾಡಿದ್ದೇವೆ. ಇದರಿಂದ ಹೊರಗೆ ಬರಬೇಕು.
* ಪತ್ರಿಕೆ ಪತ್ರಿಕೆಯಾಗಿ ಮಾತ್ರ ಇರುತ್ತದೆ ಎಂದುಕೊಂಡರೆ ಅದು ಇನ್ನುಮುಂದೆ ಆಗುವುದಿಲ್ಲ. ಎಲ್ಲ ಮಾಧ್ಯಮಗಳು ಒಂದಕ್ಕೊಂದು ಪೂರಕವಾಗಿರಬೇಕು. 
* ಪತ್ರಿಕೆ ಮೊದಲು ಸುದ್ದಿ ಕೊಡುವುದನ್ನು ಮಾತ್ರ ಮಾಡುತ್ತಿದ್ದವು. ಈಗ ಪತ್ರಿಕೆಗಳು ಉಳಿಯಲು ಬ್ಯೂಸಿನೆಸ್ ಮಾಡುತ್ತಿದ್ದಾವೆ. ಉದಾಹರಣೆಗೆ ರಿಯಲ್ ಎಸ್ಟೇಟ್ ಎಕ್ಸ್ಪೋ, ವಧುವರರ ಸಮಾವೇಶ, ಬೇರೆ ಬೇರೆಯ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ. ಅದರಿಂದ ಆದಾಯ ಗಳಿಸುತ್ತಿದ್ದಾವೆ.
* ಪತ್ರಿಕೋದ್ಯಮದ ತರಬೇತಿ ಕೊಡುವ ಶಿಕ್ಷಣ ಸಂಸ್ಥೆಗಳು ಕೂಡ ಬದಲಾವಣೆ ಮಾಡಿಕೊಳ್ಳಬೇಕು. ಭಾಷೆ, ರಾಜಕೀಯ ಇತಿಹಾಸ, ಸಾಂಸ್ಕೃತಿಕ ಇತಿಹಾಸ ಅರಿಯದಿದ್ದರೆ ಭವಿಷ್ಯವಿಲ್ಲ.
* ನೀವು ರಾಜಕೀಯ ಇತಿಹಾಸ, ಸಾಂಸ್ಕೃತಿಕ ಇತಿಹಾಸ, ಎಲ್ಲವನ್ನೂ ಓದಿಕೊಂಡರೆ ಮಾತ್ರ ನಿಮಗೆ ಯಾವುದೇ ಮಾಧ್ಯಮದಲ್ಲಿ ಭವಿಷ್ಯವಿದೆ. ಇಲ್ಲದಿದ್ದರೆ ನಿಮಗೆ ಭವಿಷ್ಯವಿಲ್ಲ.
* ತಾಂತ್ರಿಕತೆಯಿಂದ ಸಾಧ್ಯವಿರುವುದನ್ನು ಎಐ ಮಾಡುತ್ತಿದೆ. ನಿಮಗೆ ಉಳಿದ ವಿಷಯಗಳು ಗೊತ್ತಿರಬೇಕು ಹಾಗಿದ್ದಲ್ಲಿ ಮಾತ್ರ ಭವಿಷ್ಯವಿದೆ. 
* ಯಾವುದೇ ಮಾಧ್ಯವಿರಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು. ಪ್ರನಾವಾಣಿ ಉಳಿಸಿಕೊಂಡಿರುವ ವಿಶ್ವಾಸಾರ್ಹತೆಯನ್ನು ಪ್ರಜಾವಾಣಿ.ನೆಟ್ ಕೂಡ ಉಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಂಪಾದಕರಾದ ರವೀಂದ್ರ ಭಟ್ಟ ವಿವರಿಸಿದರು.

ವೆಬಿನಾರ್ ಆರಂಭದಲ್ಲಿ ಕವಿಪವಿ ಕೂಟದ ಕುರಿತು ಅಧ್ಯಕ್ಷ ಪ್ರವೀಣ್ ಶಿರಿಯಣ್ಣನವರ್ ಪರಿಚಯ ಮಾಡಿಕೊಟ್ಟರು. ಅತಿಥಿಗಳನ್ನು ಕವಿಪವಿ ಸಮಿತಿ ಸದಸ್ಯ ಗಿರೀಶ್ ದೊಡ್ಡಮನಿ ಪರಿಚಯ ಮಾಡಿಕೊಟ್ಟರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News