ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ್ ಇನ್ನಿಲ್ಲ, ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

 ಹಿರಿಯ ಸಾಹಿತಿ ಹಾಗೂ ಲೋಹಿಯಾವಾದಿಯಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್. ನಾಗಭೂಷಣ ಅವರು ಗುರುವಾರದಂದು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು, ಅವರು ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದರು.

Written by - Zee Kannada News Desk | Last Updated : May 19, 2022, 01:36 PM IST
  • ಸಮಾಜವಾದಿ ಅಧ್ಯಯನ ಶಿಬಿರದ ಮೂಲಕ ಯುವಕರಲ್ಲಿ ಗಾಂಧಿಜೀ, ಲೋಹಿಯಾ. ಅಂಬೇಡ್ಕರ್, ಜೆ.ಪಿ. ಅವರ ಚಿಂತನೆಗಳನ್ನು ತಲುಪಿಸುವಲ್ಲಿ ಅವರು ಕ್ರಿಯಾಶೀಲರಾಗಿದ್ದರು.
  • ಸಮಾಜವಾದಿ ಮಾಸಿಕ 'ಹೊಸ ಮನುಷ್ಯ ನಾಗಭೂಷಣ್ ಅವರ ಸಂಪಾದಕತ್ವದಲ್ಲಿ ಬರುತ್ತಿತ್ತು
  • ಅವರ ಗಾಂಧಿ ಕಥನ ಕೃತಿಗೆ ಇತ್ತೀಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತ್ತು.
 ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ್ ಇನ್ನಿಲ್ಲ, ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ  title=

ಶಿವಮೊಗ್ಗ: ಹಿರಿಯ ಸಾಹಿತಿ ಹಾಗೂ ಲೋಹಿಯಾವಾದಿಯಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್. ನಾಗಭೂಷಣ ಅವರು ಗುರುವಾರದಂದು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು, ಅವರು ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದರು.

ಮೃತರ ಅಂತ್ಯಕ್ರಿಯ ಇಂದು ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಸಂಜೆ 4 ಗಂಟೆಗೆ  ನಡೆಯಲಿದೆ. ಅವರಿಗೆ ಪತ್ನಿ, ಕವಯತ್ರಿ ಸವಿತಾ ನಾಗಭೂಷಣ್ ಇದ್ದಾರೆ.ನೇರ, ನಿಷ್ಠುರ , ಪ್ರಾಮಾಣಿಕ, ಜಾತ್ಯತೀತ, ಸಿದ್ದಾಂತ ಬದ್ದ...ಎಂಬೀತ್ಯಾದಿ ವಿಶೇಷಣಗಳನ್ನು ಅಳುಕಿಲ್ಲದೆ ಬಳಸಲು ಸಾಧ್ಯವಿರುವ ಕೈಬೆರಳೆಣಿಕೆಯ ವ್ಯಕ್ತಿಗಳಲ್ಲಿ ಡಿ.ಎಸ್.ನಾಗಭೂಷಣ್ ಒಬ್ಬರಾಗಿದ್ದರು.ತರಗತಿಗಳಲ್ಲಿ ಎಂದೂ  ಪಾಠ ಮಾಡದೆ ಇದ್ದರೂ ಸಾವಿರಾರು ಕಿರಿಯರಿಗೆ ಅವರು ಬದುಕಿನ ಶಾಲೆಯ ಮೇಷ್ಟ್ರು ಆಗಿದ್ದರು.

ಸಮಾಜವಾದ ಪ್ರಖರ ಚಿಂತಕರಾಗಿದ್ದ ಅವರು ಪ್ರತಿವರ್ಷ ಅವರು ಲೋಹಿಯಾ ಪ್ರತಿಷ್ಠಾನದ ಮೂಲಕ ಶಿವಮೊಗ್ಗದ  ಕುಪ್ಪಳ್ಳಿಯಲ್ಲಿ ಸಮಾಜವಾದಿ ಅಧ್ಯಯನ ಶಿಬಿರದ ಮೂಲಕ ಯುವಕರಲ್ಲಿ ಗಾಂಧಿಜೀ, ಲೋಹಿಯಾ. ಅಂಬೇಡ್ಕರ್, ಜೆ.ಪಿ. ಅವರ ಚಿಂತನೆಗಳನ್ನು ತಲುಪಿಸುವಲ್ಲಿ ಅವರು ಕ್ರಿಯಾಶೀಲರಾಗಿದ್ದರು. ಸಮಾಜವಾದಿ ಮಾಸಿಕ 'ಹೊಸ ಮನುಷ್ಯ ನಾಗಭೂಷಣ್ ಅವರ ಸಂಪಾದಕತ್ವದಲ್ಲಿ ಬರುತ್ತಿತ್ತು .ಅವರ ಗಾಂಧಿ ಕಥನ ಕೃತಿಗೆ ಇತ್ತೀಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತ್ತು.

ಇದನ್ನೂ ಓದಿ: ವರುಣನ ನರ್ತನಕ್ಕೆ ನಲುಗಿದ ಬೆಂಗಳೂರು: ಇನ್ನೂ ಐದು ದಿನ ಭಾರಿ ಮಳೆ‌ ಮುನ್ಸೂಚನೆ

ಈಗ ಡಿ.ಎಸ್ ನಾಗಭೂಷಣ ಅವರ ನಿಧನಕ್ಕೆ ನಾಡಿನ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ'ಅನ್ಯಾಯ,‌ ಅಸಮಾನತೆ ಮತ್ತು ಆತ್ಮವಂಚಕ ನಡವಳಿಕೆಗಳ ವಿರುದ್ಧದ ಹೋರಾಟಕ್ಕೆ, ಸಮಾಜವಾದಿ ಚಿಂತನೆಗಳನ್ನು ಅಸ್ತ್ರವಾಗಿ ಬಳಸುತ್ತಾ ಬಂದಿದ್ದ ಆತ್ಮೀಯರಾಗಿದ್ದ ಡಿ.ಎಸ್.ನಾಗಭೂಷಣ್ ಅವರ ಅಗಲಿಕೆಯಿಂದ ಆಘಾತಕ್ಕೀಡಾಗಿದ್ದೇನೆ.ಅವರ ಪತ್ನಿ‌ ಮತ್ತು ಗೆಳೆಯರೆಲ್ಲರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.ಡಿ.ಎಸ್.ನಾಗಭೂಷಣ್ ಅವರ 'ಗಾಂಧಿ ಕಥನ' ವನ್ನು‌ ಪ್ರೀತಿಯಿಂದ ಕಳಿಸಿಕೊಟ್ಟಿದ್ದರು. ಅದನ್ನು ಓದುತ್ತಿದ್ದೇನೆ ಎಂದಾಗ ಖುಷಿಪಟ್ಟಿದ್ದರು.ಲೋಹಿಯಾ ಚಿಂತನೆಯ‌‌ ಪುಸ್ತಕಗಳೂ ಸೇರಿದಂತೆ ಅವರ ಎಲ್ಲ ಕೃತಿಗಳ ಮೂಲಕ ನಾಗಭೂಷಣ್ ನಮ್ಮ ನೆನಪಲ್ಲಿ‌‌‌‌ ಸದಾ ಹಸಿರಾಗಿರುತ್ತಾರೆ ಎಂದು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು "ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರ ಹಾಗೂ ಸಾಮಾಜಿಕ ಚಿಂತಕ ಶ್ರೀ ಡಿ.ಎಸ್. ನಾಗಭೂಷಣ ಅವರು ಕಾಲವಾದ ವಿಷಯ ತಿಳಿದು ಬೇಸರವಾಯಿತು. ಗಾಂಧಿ ಚಿಂತನೆಗಳ ಬಗ್ಗೆ ಮತ್ತಷ್ಟು ಅರಿವು ಮೂಡಿಸಿದ ಅವರ ಅಗಲಿಕೆಯು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪಗಳು.

ಇದನ್ನೂ ಓದಿ: ಡಿ.ಎಸ್ ನಾಗಭೂಷಣ ಅವರ ಗಾಂಧೀ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಹಿರಿಯ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಖ್ಯಾತ ವಿಮರ್ಶಕ, 'ಗಾಂಧಿ ಕಥನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿದ್ದ ಸಾಹಿತಿ ಡಿ ಎಸ್​ ನಾಗಭೂಷಣ ಅವರ ನಿಧನ ಸುದ್ಧಿ ದುಃಖ ತರಿಸಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಅವರು "ಹಿರಿಯ ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ನಮ್ಮನ್ನು ಅಗಲಿದ್ದಾರೆ. ಅವರೊಂದಿಗೆ ಸೈದ್ಧಾಂತಿಕ ವಾಗ್ವಾದದೊಂದಿಗೆ( ಮಾರ್ಕ್ಸವಾದ_ ಲೊಹಿಯಾವಾದ) ಆರಂಭವಾದ ನನ್ನ ಸ್ನೇಹ ನಂತರ ಪೂರ್ತಿ ಆತ್ಮೀಯತೆಗೆ ತಿರುಗಿತು.ಅವರು ಸಂಪಾದಿಸುತ್ತಿದ್ದ'ಹೊಸ ಮನುಷ್ಯ' ಪತ್ರಿಕೆ ನನ್ನ ತುಂಬಾ ಇಷ್ಟದ ಪತ್ರಿಕೆಯಾಗಿತ್ತು.ಕಳೆದ ಜನವರಿಯಲ್ಲಿ ಅದನ್ನು ( ಅನಾರೋಗ್ಯ ದ ಕಾರಣದಿಂದ) ನಿಲ್ಲಿಸಲು ಅವರು ಹೊರಟಾಗ " ಬೇಡ" ಎಂದು ನಾನು ಹೇಳಿದ್ದೆಆದರೆ ಅದನ್ನು ಮುಂದುವರಿಸುವ ಸ್ಥಿತಿಯಲ್ಲಿ ಅವರಿರಲಿಲ್ಲ.ಅವರ ಗಾಂಧಿ ಕಥನ ನಾನು ತುಂಬ ಇಷ್ಟ ಪಟ್ಟು ತರಿಸಿ ಓದಿದ್ದೆ.ದೇಶದಲ್ಲಿ ಫ್ಯಾಸಿಸಮ್ ಕಾಲಿಟ್ಟ ಈ ದುರಿತ ಕಾಲದಲ್ಲಿ ನಾಗಭೂಷಣ ನಿರ್ಗಮನ ಆಘಾತಕಾರಿ" ಎಂದು  ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News