ಬೆಂಗಳೂರು : ಅನಾಥ ಗೋವುಗಳ ಪಾಲನೆ-ಪೋಷಣೆಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಮಾಡಿರುವ "ಪುಣ್ಯಕೋಟಿ ಯೋಜನೆ"ಯ ರಾಯಭಾರಿಯನ್ನಾಗಿ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನೇಮಿಸಿ ಸರ್ಕಾರ ವಿಶೇಷ ಗೌರವ ನೀಡಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಗೋವುಗಳ ಸಂರಕ್ಷಣೆಯಲ್ಲಿ ಜನರ ಪಾಲುದಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಮಾಡಲಾದ ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಚುರಪಡಿಸಲು ಮತ್ತು ಉತ್ತೇಜಿಸಲು ನಟ, ನಿರ್ದೇಶಕ ಅಭಿನಯ ಚಕ್ರವರ್ತಿ ಸುದೀಪ್ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಗೋಶಾಲೆಯಲ್ಲಿ ರಕ್ಷಿಸಲ್ಪಟ್ಟ ಅನಾಥ ಗೋವುಗಳ ಪಾಲನೆ - ಪೋಷಣೆಗೆ ನೆರವಾಗುವ ನಿಟ್ಟಿನಲ್ಲಿ ಜಾರಿಮಾಡಲಾದ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ "ಪುಣ್ಯಕೋಟಿ ಯೋಜನೆ"ಯ ರಾಯಭಾರಿಯಾದ ಸುಪ್ರಸಿದ್ಧ ನಟ, ಅಭಿನಯ ಚಕ್ರವರ್ತಿ ಶ್ರೀ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. pic.twitter.com/uNkHetZOrV
— Prabhu Bhamla Chavan (@PrabhuChavanBJP) September 2, 2022
ಇದನ್ನೂ ಓದಿ: Kiccha Sudeep: ಅಭಿನಯ ಚಕ್ರವರ್ತಿಗೆ ಹುಟ್ಟುಹಬ್ಬದ ಸಂಭ್ರಮ: ಕಿಚ್ಚನ ಸಿನಿಜರ್ನಿಯೇ ವಿಭಿನ್ನ-ಸ್ಪೂರ್ತಿದಾಯಕ
ಅಲ್ಲದೆ, ಗೋವುಗಳನ್ನು ಸಂರಕ್ಷಿಸುವ ಈ ಸತ್ಕಾರ್ಯಕ್ಕೆ ಕೈಜೋಡಿಸಿರುವ ಸುದೀಪ್ ಅವರು ಇದಕ್ಕಾಗಿ ಯಾವುದೇ ಸಂಭಾವನೆ ಪಡೆಯುವುದಿಲ್ಲ ಎಂದು ತಿಳಿಸಿರುತ್ತಾರೆ. ಅವರ ಈ ನಿರ್ಧಾರ ಗೋವುಗಳ ಮೇಲಿನ ಕಾಳಜಿ ಹಾಗೂ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತಿದೆ. ಇವರನ್ನು ಆದರ್ಶವಾಗಿರಿಸಿಕೊಂಡು ಕಲಾವಿದರು, ಅಭಿಮಾನಿಗಳು ಹಾಗೂ ಶ್ರೀ ಸಾಮಾನ್ಯರು ನಮ್ಮ ಈ ಪುಣ್ಯಕೋಟಿ ಯೋಜನೆಯ ಯಶಸ್ಸಿಗೆ ಕೈಜೋಡಿಸುವಂತಾಗಲಿ ಎಂದಿದ್ದಾರೆ. ಸದ್ಯ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಕಿಚ್ಚನ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.