ಚಿಕ್ಕಮಗಳೂರು: ರಾಜ್ಯ-ಕೇಂದ್ರ ಸರ್ಕಾರಗಳ ಅಂತ್ಯದ ದಿನ ಹತ್ತಿರ ಬರುತ್ತಿದೆ. ರೈತ ವಿರೋಧಿ ಸರ್ಕಾರ ಎಂಬುದಕ್ಕೆ ದೆಹಲಿ ದೌರ್ಜನ್ಯವೇ ಸಾಕ್ಷಿ. ರೈತರ ಕೋಪ-ಶಾಪ-ತಾಪ ಎಲ್ಲವೂ ಇವರಿಗೆ ತಗುಲುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್(D.K.Shivakumar), ಕೆಂಪೇಗೌಡ ಕಟ್ಟಿದ ಬೆಂಗಳೂರು ರಾಜ್ಯದ ಆಸ್ತಿ. ರಾಜಧಾನಿಯಲ್ಲಿ ಬೆಂಝ್ ಹಾಗೂ ದೊಡ್ಡ ಕಾರುಗಳು ಮಾತ್ರ ಓಡಾಡಬೇಕಾ ? ಟ್ರ್ಯಾಕ್ಟರ್ ಓಡಾಡಬಾರದೇ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
B.C.Patil: 'ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಿರೋರು ಭಯೋತ್ಪದಕರು'
ರೈತರಿಲ್ಲದೆ ಬೆಂಗಳೂರಿಗರು ಊಟ ಮಾಡುತ್ತಾರಾ ? ರೈತರ ಮಕ್ಕಳೆಂದು ಶಾಲು ಹಾಕಿಕೊಂಡು ಸರ್ಕಾರ ಮಾಡುವವರು, ಅವರನ್ನ ಬೆಂಗಳೂರಿನೊಳಗೆ ಬರಲು ಏಕೆ ಬಿಡುತ್ತಿಲ್ಲ. ಸರ್ಕಾರದ ವೈಫಲ್ಯವನ್ನು ವಿಪಕ್ಷ ಹಾಗೂ ಸಂಘಟನೆಗಳು ಪ್ರಶ್ನಿಸುತ್ತಿವೆ ಎಂದು ಕಿಡಿಕಾರಿದರು.
Vinay Guruji: 'ಡಿಕೆಶಿ ಮಗಳ ಮದುವೆ ವ್ಯಾಲಂಟೈನ್ ಡೇಗೆ ಆಗಲೆಂದು ತಮಾಷೆ ಮಾಡಿದ್ದೇ, ಈಗ ಹಾಗೆ ಆಗ್ತಿದೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.