Karnataka Budget 2021: ಇಂದು ರಾಜ್ಯ ಬಜೆಟ್ ಮಂಡನೆ, ರಾಜಾಹುಲಿ ಲೆಕ್ಕಾಚಾರ ಏನು? LIVE

Karnataka Budget 2021 - ಇಂದು ರಾಜ್ಯ ಬಜೆಟ್ ಮಂಡನೆ. ರಾಜ್ಯದ ಮುಖ್ಯಮಂತ್ರಿಯಾಗಿರುವ BS Yadurappa ಅವರು ಯಮಗಂಡ ಕಾಲ ಮುಕ್ತಾಯದ ಬಳಿಕ ಅಂದರೆ 12.05ರ ಅಭಿಜೀತ ಮುಹೂರ್ತದಲ್ಲಿ ತಮ್ಮ 8ನೇ ಬಜೆಟ್ ಮಂಡನೆ ಮಾಡಲಿದ್ದಾರೆ. 

Written by - Nitin Tabib | Last Updated : Mar 8, 2021, 02:14 PM IST
Karnataka Budget 2021: ಇಂದು ರಾಜ್ಯ ಬಜೆಟ್ ಮಂಡನೆ, ರಾಜಾಹುಲಿ ಲೆಕ್ಕಾಚಾರ ಏನು? LIVE
Live Blog

Karnataka Budget 2021 - ಇಂದು ರಾಜ್ಯ ಬಜೆಟ್ ಮಂಡನೆ. ರಾಜ್ಯದ ಮುಖ್ಯಮಂತ್ರಿಯಾಗಿರುವ BS Yadurappa ಅವರು ಯಮಗಂಡ ಕಾಲ ಮುಕ್ತಾಯದ ಬಳಿಕ ಅಂದರೆ 12.05ರ ಅಭಿಜೀತ ಮುಹೂರ್ತದಲ್ಲಿ ತಮ್ಮ 8ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಕೊರೊನಾ ಮಹಾಮಾರಿಯ ಹಿನ್ನೆಲೆ ಬರಿದಾಗಿರುವ ರಾಜ್ಯದ ಖಜಾನೆಗೆ CM Yadyurappa ಯಾವ ರೀತಿಯಲ್ಲಿ ಮರುಜೀವ ತುಂಬುತ್ತಾರೆ? ಸಂಪನ್ಮೂಲ ಕ್ರೂಢೀಕರಣಕ್ಕಾಗಿ ಯಾವ ಕ್ರಮಗಳನ್ನು ಕೈಗೊಳ್ಳುತ್ತಾರೆ? ಕೇಂದ್ರದಂತೆ ಸರ್ಕಾರಿ ಯೋಜನೆಗಳನ್ನು ಸಮೀಕರಿಸುತ್ತಾರೆಯೇ? ಎಂಬುದರ ಮೇಲೆ ಎಲ್ಲರ ಚಿತ್ತ ಕೇಂದ್ರೀಕರಿಸಿದೆ. 

ಬಜೆಟ್ ಮಂಡನೆಯೂ ಮುನ್ನ ಶಾಸಕೀಯರು ಹಾಗೂ ಸಚಿವೆಯರು ಮುಖ್ಯಮಂತ್ರಿ ಅವರ ನಿವಾಸದಲ್ಲಿ ಅವರಿಗೆ ಆರತಿ ಬೆಳಗಿ ಶುಭ ಕೋರಿದ್ದಾರೆ. ಬಳಿಕ ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ತರೆಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಯಡಿಯೂರಪ್ಪ, ಅಂತಾರಾಷ್ಟ್ರೀಯ ದಿನಾಚರಣೆಯ (International Women's Day 2021) ದಿನದಂದು ತಾವು ಬಜೆಟ್ ಮಂಡನೆ ಮಾಡಲಿದ್ದು, ಈ ಬಾರಿಯ ಬಜೆಟ್ (Karnataka Budget 2021) ನಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿರುವುಗಾಗಿ ಹೇಳಿದ್ದಾರೆ. ವಿಧಾನಸೌಧಕ್ಕೆ ತಲುಪುವ ಮುನ್ನ ಮುಖ್ಯಮಂತ್ರಿಗಳು ಶ್ರೀ ರಾಘವೇಂದ್ರ ಸ್ವಾಮಿ ಅವರ ಮಠಕ್ಕೆ ತಲುಪಿ ಸ್ವಾಮಿಗಳ ದರ್ಶನ ಪಡೆಯಲಿದ್ದಾರೆ. ಬಳಿಕ ಬೆಳಿಗ್ಗೆ 11.30ರ ಸುಮಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.

ಈ ಬಾರಿಯ ಬಜೆಟ್ ನಲ್ಲಿ ರಾಜ್ಯದ ಶ್ರೀಸಾಮಾನ್ಯರಿಗೆ ಏನೆಲ್ಲಾ ಕಾದಿದೆ. ಈ ಬಾರಿಯ ಬಜೆಟ್ ಜನಪ್ರೀಯ ಬಜೆಟ್ ಆಗಿರಲಿದೆಯೇ ?  ಅಥವಾ ಕೊರತೆಯ ಬಜೆಟ್ ಆಗಿರಲಿದೆಯೇ? ಎಂಬುದನ್ನು LIVE ತಿಳಿದುಕೊಳ್ಳೋಣ ಬನ್ನಿ.

ಬಜೆಟ್ ಮುಖ್ಯಾಂಶಗಳು - 

8 March, 2021

  • 14:13 PM

    - ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ನೀಡಲಾಗಿರುವ ಒಟ್ಟು ಅನುದಾನ 7,297 ಕೋಟಿ ರೂ. 
    - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರಕ್ಕೆ ನೀಡಲಾಗಿರುವ ಒಟ್ಟು ಅನುದಾನ ರೂ.4 351 ಕೋಟಿ ರೂ.
    - 2020-21ರ ಸಾಲಿನಲ್ಲಿ ಒಟ್ಟು 22,700 ರೂ. ಅಬಕಾರಿ ಇಲಾಖೆಯಿಂದ ಸಂಗ್ರಹಿಸಲಾಗಿತ್ತು. 2021-22ರ ಅವಧಿಯಲ್ಲಿ 24, 580 ಕೋಟಿ ಸಂಗ್ರಹಣೆಯ ಗುರಿ ಹೊಂದಲಾಗಿದೆ.
    - ಈ ಬಾರಿಯ ಒಟ್ಟು ಬಜೆಟ್ ಗಾತ್ರ 2 ಲಕ್ಷ 43 ಸಾವಿರದ 734 ಕೋಟಿ ರೂ. 
    - ಬಜೆಟ್ ಮಂಡನೆಯ ಬಳಿಕ ವಿಧಾನಸಭೆ ಕಾರ್ಯಕಲಾಪವನ್ನು ನಾಳೆ 11 ಗಂಟೆಯವರೆಗೆ ಮುಂದೂಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.

  • 14:03 PM

    - ಅಬಕಾರಿ ತೆರಿಗೆಯಲ್ಲಿಯೂ ಕೂಡ ಯಾವುದೇ ಬದಲಾವಣೆ ಮಾಡಲಾಗಿಲ್ಲ.
    - ಮಹಿಳೆಯರ ಸುರಕ್ಷತೆಗೆ 7500 ಕೋಟಿ ರೂ. ಅನುದಾನ.
    - ಮಹಿಳೆಯರ ಸುರಕ್ಷತೆಗೆ ಇ-ಬೀಟ್ ವ್ಯವಸ್ಥೆ.
    -ಹಾಸನದಲ್ಲಿ ಅಂಬೇಡ್ಕರ್ ಭವನ ಸ್ಥಾಪನೆಗೆ 1 ಕೋಟಿ ರೂ. ನಿರ್ಮಾಣ. 
    - ಸಾವಯವ ಇಂಗಾಲ ಹೆಚ್ಚಿಸಲು ಕ್ರಮ.
    - ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಪೋಲೀಸ್ ಸಂಕೀರ್ಣ ನಿರ್ಮಾಣಕ್ಕೆ 8 ಕೋಟಿ ರೂ ಅನುದಾನ.
    - ಬೆಂಗಳೂರಿನ ಹೆಸರಘಟ್ಟದಲ್ಲಿ 100 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್ ನಿರ್ಮಾಣ.
    - ಸಮಗ್ರ ಗೋಸಂಕುಲ ಸಂರಕ್ಷಣೆ ಯೋಜನೆ ಜಾರಿಗೆ ಕ್ರಮ.
    -ಎಪಿಎಂಸಿ ತೆರಿಗೆಯನ್ನು ಶೇ.1.5 ರಿಂದ ಶೇ.0.6 ಕ್ಕೆ ಇಳಿಕೆ
    - ಸಮಾಜ ಕಲ್ಯಾಣ ಇಲಾಖೆಗೆ 88ಕೋಟಿ ರೂ. ಅನುದಾನ
    - ಬಾದಾಮಿ ಜಿಲ್ಲೆಯ ಗುಳೆದಗುಡ್ಡದಲ್ಲಿ ಜವಳಿ ಪಾರ್ಕ್ ಸ್ಥಾಪನೆ.
    -ಲೋಕೋಪಯೋಗಿ ಇಲಾಖೆಗೆ 10, 256 ಕೋಟಿ ರೂ. ಅನುದಾನ 
    - ಸಾರಿಗೆ ಇಲಾಖೆಗೆ ಒಟ್ಟು 10, 33  ಕೋಟಿ ರೂ. ಅನುದಾನ 
    - ಗ್ರಾಮೀಣಾಭಿವೃದ್ಧಿಗೆ ಒಟ್ಟು 16,036 ಕೋಟಿ ರೂ ಅನುದಾನ
    - ನಗರಾಭಿವೃದ್ಧಿ 27,337 ಕೋಟಿ ರೂ ಅನುದಾನ 

  • 13:39 PM

    - ಆಹಾರ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರಕ್ಕೆ ಒಟ್ಟು 11,908 ಕೋಟಿ ರೂ . ಅನುದಾನ ನೀಡಲಾಗಿದೆ
    - ಶಿಕ್ಷಣ ಕ್ಷೇತ್ರಕ್ಕೆ ಒಟ್ಟು 29,688 ಕೋಟಿ ರೂ.ಗಳ ಅನುದಾನ ನೀಡಲಾಗಿದೆ.
    - ಇಂಧನ ಕ್ಷೇತ್ರಕ್ಕೆ ಒಟ್ಟು 16, 515 ಕೋಟಿ ರೂ.ಗಳ ಅನುದಾನ ಬಿಡುಗಡೆ
    - ಬ್ಯಾಡಗಿಯಲ್ಲಿ ಮೆಣಸಿನಕಾಯಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕ್ರಮ.
    - ಅಡಿಕೆ ಪರ್ಯಾಯ ಬೆಲೆ ಪ್ರೋತ್ಸಾಹನ ನೀಡಲು 25 ಕೋಟಿ ರೂ ಅನುದಾನ ನೀಡಲಾಗುವುದು.
    - ಶಿವಮೊಗ್ಗದಲ್ಲಿ ಪಶುವೈದ್ಯಕೀಯ ಸಂಶೋಧನಾ ಕೇಂದ್ರ ಸ್ಥಾಪನೆ. 
    - ಬುದ್ಧಿಮಾಂದ್ಯರಿಗೆ ನೀಡಲಾಗುವ ಮಾಶಾಸನದಲ್ಲಿ ಹೆಚ್ಚಳ
    - ಎಪಿಎಂಸಿ ಮಾರುಕಟ್ಟೆಗಳಲ್ಲಿ ಮಹಿಳೆಯರಿಗೆ ಶೇ.10 ರಷ್ಟು ಮೀಸಲಾತಿ ನೀಡಲಾಗುವುದು.
    - ಉಪ್ಪ್ಪಿನ ಕಾಯಿ ಮಾರಾಟ ಮಾಡುವ ಮಹಿಳೆಯರಿಗಾಗಿ 25ಸಾವಿರ ಸಹಾಯ ಧನ ಒದಗಿಸಲಾಗುವುದು.
    - ಬ್ರಾಹ್ಮಣರ ಅಭಿವೃದ್ಧಿ ನಿಗಮಕ್ಕೆಗೆ ಒಟ್ಟು 50 ಕೋಟಿ ರೂ ಅನುದಾನ.
    - ತೆರಿಗೆ ಯಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲದ ಕಾರಣ ನೌಕರರಿಗೆ ಭಾರಿ ನಿರಾಶೆ.

  • 13:38 PM

    - ಜಲಧಾರೆ ಯೋಜನೆಗೆ 6201 ಕೋಟಿ ರೂ.ಗಳ ಅನುದಾನ.
    - ತಾಲೂಕುಗಳ ಅಭಿವೃದ್ಧಿಗೆ 3000 ಕೋಟಿ ರೂ.ಅನುದಾನ.
    - ಯಾದಗಿರಿಯಲ್ಲಿ ಬಲ್ಕ್ ಡ್ರಗ್ಸ್ ಪಾರ್ಕ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. 
    - ಹಾಸನ ವಿಮಾನ ನಿಲ್ದಾಣಕ್ಕೆ 175 ಕೋಟಿ ರೂ ಅನುದಾನ.
    - ಗ್ರಾಮಬಂಧ ಸೇತು ಯೋಜನೆಗೆ 100 ಕೋಟಿ ರೂ.
    - ಹೊರ ರೈಲು ಮಾರ್ಗಗಳ ನಿರ್ಮಾಣಕ್ಕೆ 463 ಕೋಟಿ ರೂ. ಅನುದಾನ ಬಿಡುಗಡೆ.
    - ಆಯ್ದ ಮಹಾನಗರಗಳಲ್ಲಿ ಸಂಜೆ ಕಾಲೇಜುಗಳ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು.
    - ಚಿತ್ರದುರ್ಗ ಜಿಲ್ಲೆಯ ನಾಗರಿಕರ ಬಹುನಿರೀಕ್ಷಿತ ಬೇಡಿಕೆಯಗುರುವ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅನುಮೋದನೆ.
    - ಎದೆ ಹಾಲಿನ ಬ್ಯಾಂಕ್ ನಿರ್ಮಾಣಕ್ಕೆ 2.50 ಕೋಟಿ ರೂ. ಅನುದಾನ.
    - ರಾಜ್ಯದ 400 ಉರ್ದು ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಗೆ ಕ್ರಮ.
    - ಬಸವಕಲ್ಯಾಣ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ
    - ಅಯೋದ್ಯಾ ಯಾತ್ರಿ ನಿವಾಸಕ್ಕಾಗಿ 5 ಕೋಟಿ ರೂ. ಮೀಸಲು.
    - ಆದಿಚುಂಚನಗಿರಿ ಕ್ಷೇತ್ರ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
    - ರಾಜ್ಯಾದ್ಯಂತ ಪರ್ವ ನಾಟಕ ಪ್ರದರ್ಶನಕ್ಕೆ 1 ಕೋಟಿ ರೂ. ಅನುದಾನ.
    - ಬೆಂಗಳೂರು-ಮೈಸೂರಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಅಭುವೃದ್ಧಿ
    - ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿಗೆ 2645 ಕೋಟಿ ರೂ. ಅನುದಾನ.
    - 234 ಕೆರೆಗಳನ್ನು ತುಂಬಿಸಲು ಒಟ್ಟು 500 ಕೋಟಿ ರೂ. ಅನುದಾನ ನೀಡಲಾಗುವುದು.

  • 13:13 PM

    - ಕ್ರಿಶ್ಚನ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ ಅನುದಾನ ಮುಂದುವರೆಸಲಾಗುವುದು.
    - ವಿಪತ್ತು ಚೆತರಿಗೆ ಮತ್ತು ವ್ಯವಹಾರ ಮುಂದುವರೆಕೆ ತಾಣಕ್ಕೆ 35 ಕೋಟಿ ರೂ. ಅನುದಾನ ಮೀಸಲು.
    - ಭೂ ಕಂದಾಯ ಅಧಿನಿಯಮಕ್ಕೆ ತಿದ್ದುಪಡಿ ತಂದು, ಭೂ ದಾಖಲೆಗಳ ತ್ವರಿತ ವಿಲೇವಾರಿಗೆ ಕ್ರಮ. ಭೂ ದಾಖಲೆಗಳ ಸಂಗ್ರಕ್ಕೆ ಕ್ರಮ.
    - 100 ಪೋಲೀಸ್ ಕಛೇರಿಗಳ ನಿರ್ಮಾಣಕ್ಕೆ ಒಟ್ಟು 2 ಕೋರಿ ರೂ. ನೀಡಲಾಗುವುದು.
    - 100 ಕಿತ್ತೂರು ರಾಣಿ ಶಿಶುಪಾಲನ ಕೇಂದ್ರಗಳ ಸ್ಥಾಪನೆ.
    - ರಾಷ್ಟ್ರೀಯ ಶೈಕ್ಷಣಿಕ ಡಿಪಾಸಿಟರಿ ಸ್ಥಾಪನೆಗಾಗಿ 3 ಕೋಟಿ ರೂ.  ಅನುದಾನ.
    - ಸಾರ್ವಜನಿಕ ಸೇವಾ ವಲಯಕ್ಕೆ 52519 ಕೋಟಿ ರೂ ಅನುದಾನ.
    -ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ 500 ಕೋಟಿ ರೂ.
    - ವಿಜಯಪುರ ವಿಮಾನ ನಿಲ್ದಾಣಕ್ಕೆ 220 ಕೋಟಿ ರೂ ಅನುದಾನ.
    -ಶಿವಮೊಗ್ಗ ವಿಮಾನ ನಿಲ್ದಾಣಕೀ 384 ಕೋಟಿ ರೂ ಅನುದಾನ.
    -ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 1500 ಕೋಟಿ ರೂ ಅನುದಾನ

  • 12:43 PM

    - ಬೆಂಗಳೂರು ಸಮಗ್ರ ಅಭಿವೃದ್ಧಿಗೆ 7795 ಕೋಟಿ ರೂ ಅನುದಾನ.
    - 5500 ಪಿಎಸಿ ಎಸ್ ಗಳ ಕಾರ್ಯಕ್ಷಮತೆ ಹೆಚ್ಚಳಕ್ಕೆ 198 ಕೋಟಿ ರೂ.ಅನುದಾನ.
    - ಒಕ್ಕಲಿಗರ ಸರ್ವಾಂಗೀಣ ಅಭಿವೃದ್ಧಿಗೆ ನಿಗಮ.
    - ಕೃಷಿ ಮೇಲಿನ ಅಡಮಾನ ಸಾಲದ ಬಡ್ಡಿ ದರದಲ್ಲಿ ಇಳಿಕೆ
    - ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ 50 ಕೋಟಿ ರೂ.ಗಳ ಅನುದಾನ.
    - ಬಳ್ಳಾರಿಯ ಆಲದಹಳ್ಳಿಯಲ್ಲಿ ಮೆಣಸಿನ ಕಾಯಿ ಮಾರುಕಟ್ಟೆ ನಿರ್ಮಾಣ.
    - ಮಹದಾಯಿ, ಕಳಸಾ-ಬಂಡೂರಿ ಕಾಲುವೆ ನಿರ್ಮಾಣಕ್ಕೆ ಅನುದಾನ.
    - ಸೋಮೇಶ್ವರ ಕಡಲು ತೀರ ಅಭಿವೃದ್ಧಿಗೆ ಮತ್ತು ಇತರೆ ಕಡಲು ತೀರಗಳ ಅಭಿವೃದ್ಧಿಗೆ ತಲಾ 10 ಕೋಟಿ. ರೂ.ಅನುದಾನ.
    - ಕೃಷ್ಣಾ ಭಾಗ್ಯ ಜಲನಿಗಮ ಯೋಜನೆಗೆ 5600 ಕೋಟಿ ರೂ ಅನುದಾನ.
    - ಕೊಪ್ಪಳದಲ್ಲಿ ಸಂವರ್ಧನಾ ಕೇಂದ್ರ ನಿರ್ಮಾಣಕ್ಕೆ ಅನುದಾನ. 
    - ಎತ್ತಿನ ಹೊಳೆ ಯೋಜನೆಗೆ ಭೂಸ್ವಾಧೀನ ಕೆಲಸ ಆರಂಭಿಸಲಾಗುವುದು.
    - ವಿಶ್ವ ಬ್ಯಾಂಕ್ ನೆರವಿನ ಡ್ರಿಪ್ ಯೋಜನೆಗೆ 1500 ಕೋಟಿ ರೂ.
    - ಕೋರಮಂಗಲ ಕಣಿವೆ ರಾಜ ಕಾಲುವೆ ಅಭಿವುರ್ದ್ಧಿಗೆ 169 ಕೋಟಿರೂ ಅನುದಾನ
    - 58 ಡ್ಯಾಮ್ ಗಳ ಪುನಶ್ಚೇತನ ಹಾಗೂ ಅಭಿವೃದ್ಧಿಗೆ ಅನುದಾನ ನೀಡಲಾಗುವುದು.
    - ಅಲ್ಪ ಸಂಖ್ಯಾತರ ಅಭಿವುರ್ದ್ಧಿಗೆ 1500 ಕೋಟಿ ರೂ ಮೀಸಲು

  • 12:41 PM

    -100 ತಾಲೂಕುಗಳಲ್ಲಿ 6 ಬೆಡ್ ICU ನಿರ್ಮಾಣ.
    - ಆನುವಂಶಿಕ ಮೆಟಾಬಾಲಿಕ್ ಕಾಯಿಲೆ ಪತ್ತೆಗೆ ಲ್ಯಾಬೋರೇಟರಿ.
    - ಮಹಿಳೆಯರಲ್ಲಿ ಸ್ಕ್ಯಾನಿಂಗ್ ಉತ್ತೇಜನಕ್ಕೆ 'ಚಿಗುರು' ಕಾರ್ಯಕ್ರಮ.
    - ಬಸವಣ್ಣನವರ ಜನ್ಮಸ್ಥಳ ಇಂಗಳೆಶ್ವರ ಗ್ರಾಮ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ.
    - ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ.
    - ಕಿದ್ವಾಯಿ ಮಾಡೆಲ್ ಆಸ್ಪತ್ರೆ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ
    - ನಂದಿದುರ್ಗ ಮೇಕೆ ತಳಿ ಅಭಿವೃದ್ಧಿಗೆ 1 ಕೋಟಿ ರೂ ಅನುದಾನ.
    - ಪೆಟ್ರೋಲ್-ಡಿಸೇಲ್ ಮೇಲಿನ ರಾಜ್ಯ ತೆರಿಗೆ (KST)ಯಲ್ಲಿ ಯತಾಸ್ಥಿತಿ ಮುಂದುವರೆಕೆ.
    - ರಾಮನಗರದ ಹೈ ಟೆಕ್ ರೇಷ್ಮೆಗೂಡು ಮಾರುಕಟ್ಟೆಗೆ 75 ಕೋಟಿ ರೂ. ಅನುದಾನ.
    -ಕಿರು ಆಹಾರ ಸಂಸ್ಕರಣ ಉದ್ಯಮಕ್ಕೆ 50 ಕೋಟಿ ರೂ ಅನುದಾನ ನೀಡಲಾಗುವುದು.
    - ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪಿಸಲಾಗುವುದು.
    - ಬೆಂಗಳೂರಿನ ಹೆಸರಘಟ್ಟದಲ್ಲಿ ಥೀಮ್ ಪಾರ್ಕ್ ಸ್ಥಾಪನೆ.
    - ಉಪನಗರ ರೈಲು ಯೋಜನೆಗೆ 15,767 ಕೋಟಿ ರೂ.ಅನುದಾನ.
    -ಮಂಡ್ಯ ನಗರ ಕ್ರೀಡಾಂಗಣ ಉನ್ನತೀಕರಣಕ್ಕೆ 10 ಕೋಟಿ ರೂ. ಅನುದಾನ.

  • 12:18 PM

    - ಕೊರೊನಾ ಸಾಂಕ್ರಾಮಿಕದ ಕಠಿಣ ಕಾಲದಲ್ಲಿಯೂ ಕೂಡ ಸರ್ಕಾರ ತನ್ನ ಕೆಲಸ ಮಾಡಿದೆ.
    - ಕೊರೊನಾ ಕಾಲವನ್ನು ನಾವು ಒಂದು ಕ್ಷಣವೂ ಮರೆಯುವ ಹಾಗಿಲ್ಲ.
    - ಕೊರೊನಾ ಕಾಲದಲ್ಲಿ ನಿರಂತರವಾಗಿ ಕೆಲಸ ಮಾಡಿದ ವೈದ್ಯಕೀಯ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ ಸಿಎಂ.
    - ಕೊರೊನಾ ಕಾಲದಲ್ಲಿ 1 ಲಕ್ಷ ಪಿಪಿಇ ಕಿಟ್ ಗಳನ್ನು ಹಂಚಿಕೆ ಮಾಡಲಾಗಿದೆ.
    - ಕೊರೊನಾ ಕಾಲದಲ್ಲಿ ರಾಜಸ್ವ ಸಂಗ್ರಹದಲ್ಲಿ ಕೊರತೆ.
    - ವಾರ್ಷಿಕ ಆವ್ಯವ್ಯಯದಲ್ಲಿ ವ್ಯತ್ಯಯ ಉಂಟಾಗಿದೆ.
    - ಆದರೂ ಕೂಡ ಆಹಾರ ಧಾನ್ಯ ಉತ್ಪಾದನೆಯಲ್ಲಿ ಬರೆಯಲಾಗಿದೆ. 
    - ಮಹಿಳಾ ಉದ್ಯಮಿಗಳಿಗೆ ಶೇ.4 ರ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ.
    - ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗಾಗಿ ರಿಯಾಯಿತಿ ದರದಲ್ಲಿ ಪಾಸ್ ವ್ಯವಸ್ಥೆ ಮಾಡಲಾಗಿದೆ
    - ರಾಜ್ಯಾದ್ಯಂತ ಸುಮಾರು 60 ಸಾವಿರ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.
    - ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಪ್ರಾಧಾನ್ಯತೆ.
    - ಎಲಿವೇಟರ್ ವುಮೆನ್ ಎಂಟರ್ ಪ್ರಿನರ್ಶಿಪ್ ಕಾರ್ಯಕ್ರಮ ಆರಂಭಿಸಲಾಗಿದೆ

  • 12:09 PM

    - ವಿಧಾನಸಭೆಯಲ್ಲಿ ಸಿ.ಎಂ ಬಿ.ಎಸ್ ಅವರಿಂದ ಬಜೆಟ್ ಮಂಡನೆ ಆರಂಭ.
    - ಬಜೆಟ್ ಮಂಡನೆಗೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಂದ ಆಕ್ಷೇಪ.
    - ಸರ್ಕಾರಕ್ಕೆ ಬಜೆಟ್ ಮಂಡಿಸಲು ನೈತಿಕ ಹಕ್ಕಿಲ್ಲ. 
    - ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸುತ್ತ ಸಭಾತ್ಯಾಗ ಮಾಡಿದ ಕಾಂಗ್ರೆಸ್ ಸದಸ್ಯರು.

  • 11:52 AM

    - ಈ ಸರ್ಕಾರ ಅನೈಕತೆಯ ಮೂಟೆ ಹೊತ್ತಿದೆ. 
    - ಸ್ವತ ಸಿಎಂ, ನಿರಾಣಿ ಜಾಮೀನಿನ ಮೇಲೆ ಹೊರಗಿದ್ದಾರೆ.
    - ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಸೋಮಶೇಖರ್, ಬಿಸಿ ಪಾಟಿಲ್, ಭೈರತೀ ಬಸವರಾಜ್, ಸುಧಾಕರ್ ಭಯದ ಹಿನ್ನೆಲೆ ಸಿವಿಲ್ ಕೋರ್ಟ್ ಮೊರೆ ಹೋಗಿದ್ದಾರೆ.
    - ಸಂವಿಧಾನ ಬಾಹೀರವಾಗಿರುವ ಕೆಲಸಕ್ಕೆ  ಕಾಂಗ್ರೆಸ್ ತನ್ನ ಸಮರ್ಥನೆ ನೀಡುವುದಿಲ್ಲ. ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ ಸಿದ್ಧರಾಮಯ್ಯ.

  • 11:45 AM

    - ವಿಧಾನಸೌಧದಲ್ಲಿ ಮಾಜಿ ಸಿಎಂ ಹಾಗೂ ಪ್ರತಿ ಪಕ್ಷ ನಾಯಕ ಸಿದ್ಧರಾಮಯ್ಯ ಅವರಿಂದ ಸುದ್ದಿಗೋಷ್ಠಿ.
    - 'ರಾಜ್ಯ ಸರ್ಕಾರಕ್ಕೆ 2021-22 ರ ಆರ್ಥಿಕ ಆಯವ್ಯಯ ಮಂಡನೆಗೆ ನೈತಿಕ ಹಕ್ಕಿಲ್ಲ'. 
    - 'ಈ ಬಜೆಟ್ ಅನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಸಭಾತ್ಯಾಗ ಮಾಡಲಿದೆ'. 
    - 'ಸಂಜೆ ಲೆಜಿಸ್ಲೇಟಿವ್ ಪಾರ್ಟಿ ಮೀಟಿಂಗ್ ಕರೆದಿದ್ದೇವೆ'. 
    - 'ಪ್ರಸ್ತುತ ಭಯದ ಹಿನ್ನೆಲೆ 6 ಹೈಕೋರ್ಟ್ ಮೊರೆ ಹೋಗಿದ್ದಾರೆ'.
    - ಹೀಗಾಗಿ ಈ ಸರ್ಕಾರ ಬಜೆಟ್ ಮಂಡಿಸುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ'. 
    - ಬಜೆಟ್ ಮಂಡನೆಯ ವೇಳೆ ಕರ್ನಾಟಕದಲ್ಲಿ ಈ ರೀತಿ ಪ್ರತಿಪಕ್ಷ ಸಭಾತ್ಯಾಗ ಮಾಡುವುದು ಇತಿಹಾಸದಲ್ಲೇ ಮೊದಲು. 
    - ಬಜೆಟ್ 2021-22ಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆದ ಸಿಎಂ ಯಡಿಯೂರಪ್ಪ.

  • 11:26 AM
  • 11:11 AM

    ಸಿಎಂ ಅಧಿಕೃತ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆರತಿ ಬೆಳಗಿದ ಸಚಿವೆಯರು ಹಾಗೂ ಶಾಸಕೀಯರು.
    'ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬಜೆಟ್ ಮಂಡಿಸುತ್ತಿರುವ ಹಿನ್ನೆಲೆ, ಮಹಿಳೆಯರಿಗೆ ಹೆಚ್ಚಿನ ಆದ್ಯಂತೆ ನೀಡಿದ್ದೇನೆ' - CM Yadyurappa.
    ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿದ ಸಿಎಂ ಯಡಿಯೂರಪ್ಪ ಅವರಿಗೆ ಸ್ವಾಮೀಜಿಗಳ ದರ್ಶನ ಮತ್ತು ಅರ್ಚನೆ.
    ವಿಧಾನಸೌಧ ತಲುಪಿದ ಸಿಎಂ ಯಡಿಯೂರಪ್ಪ. 
    ರಾಜ್ಯ ಬಜೆಟ್ 2021 ಗೆ ಸಚಿವ ಸಂಪುಟ ಅನುಮೋದನೆ ಪಡೆಯಲು ಸಚಿವ ಸಂಪುಟ ಸಭೆ ಆರಂಭ.

Trending News