ಮೆಗಾ ಮನೆಯಲ್ಲಿ ಮತ್ತೊಂದು ಮದುವೆ ಸದ್ದು.. ಸಿಎಂ ಮೊಮ್ಮಗನ ಮಾಜಿ ಗೆಳತಿ ಕೈ ಹಿಡಿಯಲಿದ್ದಾರೆ ಸ್ಟಾರ್‌ ನಟ!

Mega Hero Marriage: ಮೆಗಾ ಹೀರೋ ಸಾಯಿಧರಮ್ ತೇಜ್ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ. ಮೆಗಾ ಸೋದರಳಿಯನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ಸಾಯಿಧರಮ್ ತೇಜ್ ಕಡಿಮೆ ಅವಧಿಯಲ್ಲೇ ವಿಶೇಷ ಮನ್ನಣೆ ಪಡೆದರು.   

Written by - Savita M B | Last Updated : Nov 12, 2024, 09:51 AM IST
  • ಸಾಯಿ ಧರಮ್ ತೇಜ್ ಮದುವೆಯ ಬಗ್ಗೆ ಹಲವು ಸುದ್ದಿಗಳು ಕೆಲ ದಿನಗಳಿಂದ ವೈರಲ್ ಆಗಿವೆ
  • ಬಳಿಕ ರೆಜಿನಾ ಜತೆ ಸಾಯಿ ಧರಮ್ ತೇಜ್ ಅಫೇರ್ ಹೊಂದಿದ್ದಾರೆ ಎಂಬ ವರದಿಗಳು ಬಂದಿದ್ದವು.
ಮೆಗಾ ಮನೆಯಲ್ಲಿ ಮತ್ತೊಂದು ಮದುವೆ ಸದ್ದು.. ಸಿಎಂ ಮೊಮ್ಮಗನ ಮಾಜಿ ಗೆಳತಿ ಕೈ ಹಿಡಿಯಲಿದ್ದಾರೆ ಸ್ಟಾರ್‌ ನಟ!

Sai Dharam Tej:  'ಸುಬ್ರಹ್ಮಣ್ಯಂ ಫಾರ್ ಸೇಲ್', 'ಸುಪ್ರೀಮ್', 'ತಿಕ್ಕ', 'ವಿಜೇತ', 'ನಕ್ಷತ್ರಂ', 'ಜವಾನ್', 'ಬುದ್ಧಿವಂತ', 'ತೇಜ್ ಐ ಲವ್ ಯೂ', 'ಎವೆರಿ ಡೇ ಪಾಂಡೆ', ' 'ಚಿತ್ರಲಹರಿ', 'ಸೋಲೋ ಬ್ರತುಕೆ ಸೋ ಬೆಟರ್', 'ರಿಪಬ್ಲಿಕ್' ಮತ್ತು 'ವಿರೂಪಾಕ್ಷ' ಚಿತ್ರಗಳಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದ ಸಾಯಿ ಧರಮ್ ತೇಜ್ ಸದ್ಯ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Add Zee News as a Preferred Source

ಇದನ್ನೂ ಓದಿ-ರಸ್ತೆ ಬದಿ ನಿಂತು ಜಗಳವಾಡ್ತಿದ್ದವರಿಗೆ ವೋಲ್ವೋ ಬಸ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು!

 ಸಾಯಿ ಧರಮ್ ತೇಜ್ ಮದುವೆಯ ಬಗ್ಗೆ ಹಲವು ಸುದ್ದಿಗಳು ಕೆಲ ದಿನಗಳಿಂದ ವೈರಲ್ ಆಗಿವೆ. ಸಾಯಿ ಧರಮ್ ತೇಜ್ ಮತ್ತು ನಾಯಕಿ ಮೆಹ್ರೀನ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ‘ಜವಾನ್’ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಶೂಟಿಂಗ್ ವೇಳೆ ಉಂಟಾದ ಪರಿಚಯ ಪ್ರೇಮಕ್ಕೆ ತಿರುಗುತ್ತಿದ್ದಂತೆಯೇ ಇವರಿಬ್ಬರ ಸಂಬಂಧವನ್ನು ಮದುವೆ ಆಗಿ ಪರಿವರ್ತಿಸಲು ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿದೆ. ಆದರೆ ಸಾಯಿ ಧರಮ್ ತೇಜ್ ಚಿತ್ರತಂಡ ಈ ಸುದ್ದಿಯನ್ನು ಅಲ್ಲಗಳೆದಿದ್ದು, ಅಂತಹದ್ದೇನೂ ಇಲ್ಲ ಎಂದು ಹೇಳಿದ್ದಾರೆ. ಸಾಯಿ ಧರಮ್ ತೇಜ್ ಹಲವು ನಾಯಕಿಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಹಬ್ಬಿತ್ತು. ಬಳಿಕ ರೆಜಿನಾ ಜತೆ ಸಾಯಿ ಧರಮ್ ತೇಜ್ ಅಫೇರ್ ಹೊಂದಿದ್ದಾರೆ ಎಂಬ ವರದಿಗಳು ಬಂದಿದ್ದವು.

ಇದನ್ನೂ ಓದಿ-"ಟೀಂ ಇಂಡಿಯಾ ಟೆಸ್ಟ್‌ನಲ್ಲಿ ಸೋಲಲು ಕಾರಣ ನಾನೆ".. ವೈಟ್‌ವಾಶ್‌ ನಂತರ ಸೋಲಿನ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಅಶ್ವಿನ್‌!! ಬಿಸಿಸಿಐ ಮುಂದಿನ ನಿರ್ಧಾರ ಏನು..?!   

ಇದೆಲ್ಲದರ ಮಧ್ಯೆ ಸಾಯಿ ಧರಮ್ ತೇಜ್ ಅವರ ಇತ್ತೀಚಿನ ಪೋಸ್ಟ್ ಹಾಟ್ ಟಾಪಿಕ್ ಆಗಿದೆ. ಸಾಯಿ ಧರಮ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಎರಡೂ ಕೈಗಳಿಂದ ನಮಸ್ಕರಿಸುವ ಸ್ಟಿಲ್ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು 'ಹ್ಯಾಪಿ ಸಿಂಗಲ್ಸ್ ಡೇ 11/11/24' ಎಂಬ ಶೀರ್ಷಿಕೆಯನ್ನು ಸೇರಿಸಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಮೂಲಕ ಸಾಯಿ ಧರಂ ತೇಜ್ ಈಗ ಮದುವೆಯಾಗುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News