Karnataka CM Oath Taking-LIVE: ನಮ್ಮದು ನುಡಿದಂತೆ ನಡೆಯುವ ಸರ್ಕಾರ, ಕೊಟ್ಟ ಭರವಸೆ ಈಡೇರಿಸುತ್ತೇವೆ: ಸಿದ್ದರಾಮಯ್ಯ

ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಳಿದ ನೂತನ ಸಚಿವರೂ ಕೂಡ ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಠೀರವ ವೇದಿಕೆ ಮದುವಣಗಿತ್ತಿಯಂತೆ ಅಲಂಕಾರಗೊಂಡಿದೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಂಬಂಧಿಸಿ ಕ್ಷಣ ಕ್ಷಣದ ಮಾಹಿತಿಯನ್ನು ನೀಡಲಾಗುತ್ತಿದೆ.

Written by - Bhavishya Shetty | Last Updated : May 20, 2023, 06:59 PM IST
  • Karnataka CM Oath Taking-LIVE: ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಳಿದ ನೂತನ ಸಚಿವರೂ ಕೂಡ ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಠೀರವ ವೇದಿಕೆ ಮದುವಣಗಿತ್ತಿಯಂತೆ ಅಲಂಕಾರಗೊಂಡಿದೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಂಬಂಧಿಸಿ ಕ್ಷಣ ಕ್ಷಣದ ಮಾಹಿತಿಯನ್ನು ನೀಡಲಾಗುತ್ತಿದೆ.
Karnataka CM Oath Taking-LIVE: ನಮ್ಮದು ನುಡಿದಂತೆ ನಡೆಯುವ ಸರ್ಕಾರ, ಕೊಟ್ಟ ಭರವಸೆ ಈಡೇರಿಸುತ್ತೇವೆ: ಸಿದ್ದರಾಮಯ್ಯ
Live Blog

Karnataka CM Oath Taking-LIVE: ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಳಿದ ನೂತನ ಸಚಿವರೂ ಕೂಡ ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಠೀರವ ವೇದಿಕೆ ಮದುವಣಗಿತ್ತಿಯಂತೆ ಅಲಂಕಾರಗೊಂಡಿದೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಂಬಂಧಿಸಿ ಕ್ಷಣ ಕ್ಷಣದ ಮಾಹಿತಿಯನ್ನು ನೀಡಲಾಗುತ್ತಿದೆ.

 

 

 

20 May, 2023

  • 18:59 PM

    ಮೇ 22ರಿಂದ 3 ದಿನಗಳ ಕಾಲ ರಾಜ್ಯ ವಿಧಾನಸಭೆ ಅಧಿವೇಶನ: ಮೇ 22ರಿಂದ 24ರವರೆಗೆ ಬೆಂಗಳೂರಿನ ವಿಧಾನಸೌಧದಲ್ಲಿ 3 ದಿನಗಳ ಕಾಲ ರಾಜ್ಯ ವಿಧಾನಸಭಾ ಅಧಿವೇಶನಕ್ಕೆ ರಾಜ್ಯಪಾಲರ ಅನುಮತಿ ಕೋರಿದ್ದು, ಈ ಅಧಿವೇಶನದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.   

    ಸದನದ ಅತ್ಯಂತ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ಸಭಾಧ್ಯಕ್ಷರಾಗಿ (ಪ್ರೊ ಟರ್ಮ್ ಸ್ಪೀಕರ್ ಆಗಿ) ಕಾರ್ಯನಿರ್ವಹಿಸುವಂತೆ ವಿನಂತಿಸಲಾಗಿದ್ದು, ಸೋಮವಾರವೇ ನೂತನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.  

  • 18:55 PM

    ಬಿಜೆಪಿ ಸರ್ಕಾರ ನಿರುಪಯುಕ್ತವಾಗಿತ್ತು: ಹಿಂದೆ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರ ನಿರುಪಯುಕ್ತವಾಗಿತ್ತು, ನಮಗೆ ತೆರಿಗೆಯ ಪಾಲು ಸರಿಯಾಗಿ ಸಿಗಲಿಲ್ಲ. ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರ ನಮಗೆ 5,495 ಕೋಟಿ ರೂ. ನೀಡಬೇಕಿತ್ತು. ಆದರೆ ಹಿಂದಿನ ಸರ್ಕಾರಕ್ಕೆ ಸಿಗಲಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ರಾಜ್ಯಸಭಾ ಸಂಸದೆಯಾಗಿದ್ದು, ಕರ್ನಾಟಕಕ್ಕೆ ನಷ್ಟವಾಗಲು ಅವರು ಮತ್ತು ಪ್ರಧಾನಿ ಮೋದಿಯವರೇ ಕಾರಣವೆಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

     

  • 18:51 PM

    ಹೇಳಿದ್ದೇನು ಮಾಡಿದ್ದೇನು?: ಎಲ್ಲಾ ಸರ್ಕಾರಗಳು 5 ವರ್ಷದಲ್ಲಿ 1 ಲಕ್ಷ ಕೋಟಿ ರೂ. ಸಾಲ ತಂದಿದ್ದಾರೆ. ಪ್ರಧಾನಿ ಮೋದಿಯವರು ಸುಳ್ಳು ಹೇಳಿದ್ದಾರೆ ಎಂದಿದ್ದಾರೆ. ೫೦ ಸಾವಿರ ಕೋಟಿ ರೂ. ಮನೆ ಕಟ್ಟಿಕೊಡಬಹುದಿತ್ತು, ಉದ್ಯೋಗ ಸೃಷ್ಠಿ ಮಾಡಬಹುದಿತ್ತು. ನೀರಾವರಿಗೆ ಹಣ ಎಲ್ಲಿಂದ‌ ತರ್ತಾರೆ? ಇದು ಬರೀ ಘೋಷಣೆಯಷ್ಟೇ ಹೇಳಿದ್ದೇನು ಮಾಡಿದ್ದೇನು? ಜಿಎಸ್‍ಟಿ ತೆರಿಗೆ ಸಂಗ್ರಹದಲ್ಲಿ ನಾವು 2ನೇ ಸ್ಥಾನದಲ್ಲಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.  

  • 18:49 PM

    ಕಾಂಗ್ರೆಸ್ ಸರ್ಕಾರದ ಭರವಸೆ ಸುಳ್ಳಾಗಿದೆ: ಕಾಂಗ್ರೆಸ್ ಸರ್ಕಾರದ ಭರವಸೆ ಸುಳ್ಳಾಗಿದೆ. ಮೊದಲ‌ ಕ್ಯಾಬಿನೆಟ್‍ನಲ್ಲಿ ಜಾರಿ ಮಾಡುವುದಿಲ್ಲವೆಂಬುದು ಎಲ್ಲರಿಗೂ ತಿಳಿದಿದೆ. ಮುಂದಿನ ಕ್ಯಾಬಿನೆಟ್‍ನಲ್ಲಿ ಜಾರಿಗೊಳಿಸುವುದಾಗಿ ಹೇಳಿ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

  • 18:49 PM

    ವಿದ್ಯುತ್ ಫ್ರೀ ಕೊಡುವುದಿಲ್ಲ: ನಮ್ಮ ಬಜೆಟ್‍ನಲ್ಲಿ ಆದಾಯ ಬಜೆಟ್ ಮಂಡಿಸಿದ್ದೇವೆ. ದಾರಿಯಲ್ಲಿ ಹೋಗುವವರಿಗೆಲ್ಲಾ ಉಚಿತ ಭರವಸೆ ಕೊಡಲ್ಲವೆಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರೆಲ್ಲಾ ಮತ ಹಾಕಿದ್ದಾರೆ. ಬಿಪಿಎಲ್ ಕಾರ್ಡ್‍ದಾರರು ಇದ್ದಾರೆ, ಅವರಿಗೆ ಡೈರೆಕ್ಟ್ ಬೆನಿಫಿಟ್ ಸ್ಕೀಂನಲ್ಲಿ ಹಣ ಹಾಕಬಹುದಿತ್ತು. ಎಸ್ಕಾಂಗಳ ಬಳಿ ಮಾಹಿತಿ ಇದ್ದು, ವಿದ್ಯುತ್ ಫ್ರೀ ಕೊಡುವುದಿಲ್ಲವೆಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.  

  • 18:40 PM

    ಸಾಲ ಮಾಡದೇ 'ಪಂಚ ಖಾತರಿ': ಕಾಂಗ್ರೆಸ್​ ಸರ್ಕಾರದ ಮೊದಲ ಸಚಿವ ಸಂಪುಟದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ‘ರಾಜ್ಯವನ್ನು ಸಾಲಕ್ಕೆ ತಳ್ಳದೇ ‘ಪಂಚ ಖಾತರಿ ಯೋಜನೆ’ಗಳನ್ನು ಜಾರಿ ಮಾಡುತ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

  • 17:23 PM

    ಜುಲೈನಲ್ಲಿ ಹೊಸ ಬಜೆಟ್: ಜುಲೈನಲ್ಲಿ 3.15 ಲಕ್ಷ ಕೋಟಿ ರೂ. ಮೊತ್ತದ ಹೊಸ ಬಜೆಟ್ ಮಂಡಿಸುತ್ತೇನೆ. 50 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಮಾಡುತ್ತೇವೆ. 5 ಗ್ಯಾರೆಂಟಿಗಳ ಪೈಕಿ ಎಲ್ಲಾ ಮನೆಗಳಿಗೆ ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ. ಇದಕ್ಕೆ 1 ತಿಂಗಳಿಗೆ ಸುಮಾರು 1,200 ಕೋಟಿ ರೂ. ಆಗಬಹುದು. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ  2,000 ರೂ. ನೀಡಲಾಗುತ್ತದೆ. ಅನ್ನಭಾಗ್ಯ ಯೋಜನೆಯ ಖರ್ಚಿನ ಬಗ್ಗೆ ಸಮಾಲೋಚನೆ ನಡೆಸಬೇಕು, ಹೀಗಾಗಿ ಮುಂದಿನ ಕ್ಯಾಬಿನೆಟ್‍ನಲ್ಲಿ ಈ ಬಗ್ಗೆ ಹೇಳುತ್ತೇವೆ. ನಿರುದ್ಯೋಗಿ ಪದವೀಧರರಿಗೆ 2 ವರ್ಷದವರೆಗೆ ಉದ್ಯೋಗ ಭತ್ಯೆ ಮತ್ತು ಸರ್ಕಾರಿ ಬಸ್‌ನಲ್ಲಿ ಓಡಾಡುವ ಮಹಿಳೆಯರಿಗೆ ಉಚಿತ ಪಾಸ್ ನೀಡಲಾಗುತ್ತದೆ. ಎಲ್ಲಾ ಗ್ಯಾರಂಟಿಗಳಿಗೆ ತಾಂತ್ರಿಕ ಅನುಮೋದನೆ ಅಷ್ಟೇ. ತಾತ್ವಿಕವಾಗಿ ಒಪ್ಪಿಗೆ ಕೊಟ್ಟಿದ್ದೇವೆ ಎಂದು ಹೇಳಿದರು.

  • 17:05 PM

    GST ತೆರಿಗೆ ಬಿಟ್ಟು ಉಳಿದ ತೆರಿಗೆ ಹಾಕಬಹುದು: ರಾಜ್ಯದ ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ. ಆದರೆ ವಿರೋಧ ಪಕ್ಷದವರು ತಪ್ಪು ದಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ದೇಶದ ಪ್ರಧಾನ ಮಂತ್ರಿ ಅವರೇ ‘ಮನ್ ಕೀ ಭಾತ್’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇದು ವಾಸ್ತವದಲ್ಲಿ ಆಗದ ವಿಷಯವೆಂದು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಹೇಳಿದ್ದರು. ಈ ಎಲ್ಲಾ ಕಾರ್ಯಕ್ರಮಕ್ಕೆ 50 ಸಾವಿರ ಕೋಟಿ ರೂ. ಆಗಬಹುದು. ವರ್ಷದಿಂದ ವರ್ಷಕ್ಕೆ ಶೇ.10ರಷ್ಟು ಬಜೆಟ್ ಗಾತ್ರ ಹೆಚ್ಚಾಗುತ್ತದೆ. ಪ್ರತೀವರ್ಷ ಶೇ.10ರಷ್ಟು ಬಜೆಟ್ ಗಾತ್ರ ಹೆಚ್ಚಾಗುತ್ತದೆ. ತೆರಿಗೆ ವಸೂಲಾತಿ ಮಾಡಿದರೆ ಹೆಚ್ಚಳಕ್ಕೆ ಅವಕಾಶವಿದೆ. ಜಿಎಸ್‍ಟಿ ತೆರಿಗೆ ಬಿಟ್ಟು ಉಳಿದ ತೆರಿಗೆ ಹಾಕಬಹುದು. 1 ಲಕ್ಷ ಕೋಟಿ ರೂ. ಬರಬೇಕಿತ್ತು. ಸಹಾಯಧನದ ಸೇರಿ ೫೦ ಸಾವಿರ ಕೋಟಿ ರೂ. ಬರಲಿಲ್ಲ. 4 ಲಕ್ಷ ಕೋಟಿ ರೂ. ತೆರಿಗೆಯನ್ನು ಕರ್ನಾಟಕದಿಂದ ಕೇಂದ್ರ ವಿಧಿಸಿಲಿದೆ. 5,64,000 ಕೋಟಿ ರೂ. ಸಾಲ ಇದೆ. ಇವರು ಬಂದ ಮೇಲೆ. 3.22 ಲಕ್ಷ ಕೋಟಿ ರೂ. ಆಗಿದೆ. 78 ಸಾವಿರ ಕೋಟಿ ರೂ. ಸಾಲ ವರ್ಷ ಪ್ರಸ್ತಾವಿತ ಸಾಲವಾಗಿದೆ. ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷದಲ್ಲಿ 1.16 ಲಕ್ಷ ಕೋಟಿ ರೂ. ಸಾಲ ಮಾಡಿದ್ದೆ ಎಂದು ಹೇಳಿದ್ದಾರೆ.

     

  • 16:58 PM

    ನಮ್ಮದು ನುಡಿದಂತೆ ನಡೆಯುವ ಸರ್ಕಾರ: ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. 2013-18ರಲ್ಲಿ ಕೊಟ್ಟ ಮಾತು ಈಡೇರಿಸಿದ್ದೇವೆ. ಕೊಟ್ಟ ಭರವಸೆಗಳ ಜೊತೆಗೆ 30 ಭರವಸೆಗಳನ್ನು ಹೆಚ್ಚುವರಿಯಾಗಿ ಈಡೇರಿಸಿದ್ದೆವು. ಸರ್ಕಾರ ರಚನೆ ಬಳಿಕ ಮೊದಲ ಸಚಿವ ಸಂಪುಟ ಸಭೆ ನಡೆದಿದೆ. ಪ್ರಮುಖವಾಗಿ ನಮ್ಮ ಪ್ರಣಾಳಿಕೆಮೂಲಕ ಅನೇಕ ಭರವಸೆ ನೀಡಿದ್ದೇವೆ. ಎಲ್ಲಾ ಭರವಸೆ ಒಂದೇ ವರ್ಷದಲ್ಲಿ ಈಡೇರಿಸಲು ಸಾಧ್ಯವಿಲ್ಲ. 5 ಗ್ಯಾರೆಂಟಿ ಮಾತ್ರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯುವುದಾಗಿ ಹೇಳಿದ್ವಿ. ಇದನ್ನು ಅನೇಕ ಜಾಗದಲ್ಲಿ ಪ್ರಸ್ತಾಪ ಮಾಡಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. 2013ರ ಸರ್ಕಾರದಲ್ಲಿ 165ರಲ್ಲಿ 155 ಭರವಸೆ ಈಡೇರಿಸಿದ್ದೇವೆ ಎಂದು ಹೇಳಿದರು.

  • 16:56 PM

    ಸರ್ಕಾರದ ರಚನೆ ನಂತರ ಸಿದ್ದರಾಮಯ್ಯ ಮೊದಲ ಸುದ್ದಿಗೋಷ್ಠಿ: ಕಾಂಗ್ರೆಸ್ ಸರ್ಕಾರ ರಚನೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲನೆಯ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸಚಿವರು, ಡಿಸಿಎಂ, ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಆಗಿದೆ. ನಾಡಿನ ಜನತೆಗೆ ಮತ್ತು ಮತದಾರರಿಗೆ ಧನ್ಯವಾದಗಳು. ರಾಷ್ಟ್ರೀಯ ನಾಯಕರು, ಇತರೆ ರಾಜ್ಯಗಳ ಬಿಜೆಪಿಯೇತರ ನಾಯಕರು ಶುಭಾಶಯ ಕೊರಿದ್ದಾರೆ. ಪ್ರಣಾಳಿಕೆ ಮೂಲಕ ಹಲವಾರು ಭರವಸೆ ನೀಡಿದ್ದೇವೆ. 6 ಗ್ಯಾರಂಟಿಗಳನ್ನು ವಾಗ್ದಾನದ ರೂಪದಲ್ಲಿ ನೀಡಿದ್ದೆವು. ಎಲ್ಲಾ ಗ್ಯಾರಂಟಿಗಳಿಗೆ ಅನುಮೋದನೆ ನೀಡಿ ಆದೇಶ ಹೊರಡಿಸಲು ಹೇಳಿದ್ದೇವೆ ಎಂದು ಹೇಳಿದ್ದಾರೆ.

     

  • 14:20 PM
    • ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧಕ್ಕೆ ಆಗಮಿಸಿದ ಡಿ.ಕೆ ಶಿವಕುಮಾರ್
    • ಪಶ್ಚಿಮ ದ್ವಾರ ಮೂಲಕ ವಿಧಾನಸೌಧ ಪ್ರವೇಶ ಮಾಡಿದ ಡಿಕೆಶಿ
    • ಪ್ರವೇಶಕ್ಕೂ ಮುನ್ನ ವಿಧಾನಸಭೆ ಪಶ್ಚಿಮ ದ್ವಾರದ ಮೆಟ್ಟಿಲಿಗೆ ತಲೆ ನಮಸ್ಕರಿಸಿ ಒಳ ಹೋದ ಡಿಸಿಎಂ ಡಿಕೆಶಿ
    • ಬಳಿಕ ಮೂರನೇ ಮಹಡಿಯಲ್ಲಿ ನಡೆಯುತ್ತಿರುವ ಸಚಿವ ಸಂಪುಟಕ್ಕೆ ಭಾಗಿಯಾದ ಡಿ.ಕೆ ಶಿವಕುಮಾರ್
  • 13:55 PM

    ನಿಮ್ಮೆಲ್ಲರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸರ್ಕಾರ ಬರಲು ರಾಜ್ಯದ ಜನರ ಆಶೀರ್ವಾದ ಕಾರಣ. ಸರ್ಕಾರ ಬರಲು ಭಾರತ್ ಜೋಡೋ ಕಾರಣ. ಖರ್ಗೆ, ಪ್ರಿಯಾಂಕ ಗಾಂಧಿಯವರ ಮಾರ್ಗದರ್ಶನವಿದೆ. ಅವರೆಲ್ಲರಿಗೂ ನಾನು ಧನ್ಯವಾದ ಅರ್ಪಿಸ್ತೇನೆ. ಸಾಹಿತಿ, ಚಿಂತಕರಿಗೆ, ರೈತರು, ಕಾರ್ಮಿಕರಿಗೆ ಧನ್ಯವಾದ ಹೇಳುತ್ತೇನೆ, ಪದಗ್ರಹಣಕ್ಕೆ ಅನೇಕ ನಾಯಕರು ಆಗಮಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎನ್ನುತ್ತಾ ಸಿದ್ದರಾಮಯ್ಯ, ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರೆ ಎಳೆದರು.

  • 13:33 PM

    ಕಾಂಗ್ರೆಸ್’ನ ಪಂಚ ಆಶ್ವಾಸನೆ ಜಾರಿ ಖಚಿತ: ‘ಗ್ಯಾರಂಟಿ’ ನೀಡಿದ ರಾಹುಲ್ ಗಾಂಧಿ

    ಸಚಿವ ಸಂಪುಟದಲ್ಲಿ ಮುದ್ರೆ ಬರೆಯಲು ರಾಹುಲ್ ಗಾಂಧಿ ಸೂಚನೆ

     

     

     

  • 13:23 PM

    ಬೆಂಗಳೂರು: ಕರ್ನಾಟಕದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧದ ಸಿಎಂ ಕಚೇರಿಯ ಹೊರಗೆ ಸಿದ್ದರಾಮಯ್ಯ ಅವರ ನಾಮಫಲಕ ಹಾಕಲಾಯಿತು.

     

     

  • 13:13 PM

    ಅಲ್ಲಾ ಮತ್ತು ತಾಯಿಯ ಹೆಸರಿನಲ್ಲಿ ಜಮೀರ್ ಅಹ್ಮದ್ ಪ್ರಮಾಣ ವಚನ ಸ್ವೀಕಾರ

     

  • 13:08 PM

    ಬುದ್ಧ, ಬಸವೇಶ್ವರರ ಹೆಸರಿನಲ್ಲಿ ಸತೀಶ್ ಜಾರಕಿಹೊಳಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ

    ಪ್ರಿಯಾಂಕ್ ಖರ್ಗೆ ಪ್ರಮಾಣ ವಚನ ಸ್ವೀಕಾರ

    ರಾಮಲಿಂಗಾ ರೆಡ್ಡಿ ಪ್ರಮಾಣ ವಚನ ಸ್ವೀಕಾರ

  • 13:02 PM

    ಬಬಲೇಶ್ವರದಿಂದ (6 ಬಾರಿ) ನಿರಂತರವಾಗಿ ಗೆದ್ದುಕೊಂಡು ಬರುತ್ತಿರುವ ಎಂ ಬಿ ಪಾಟೀಲ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

     

     

  • 12:58 PM

    ಕೆಕೆ ಜಾರ್ಜ್ ಪ್ರಮಾಣವಚನ ಸ್ವೀಕಾರ

     

     

  • 12:56 PM

    7 ಬಾರಿ ಎಂಪಿಯಾಗಿ ಕಾರ್ಯನಿರ್ವಹಿಸಿರುವ ಕೆ ಎಚ್ ಮುನಿಯಪ್ಪ ಪ್ರಮಾಣ ವಚನ ಸ್ವೀಕಾರ

  • 12:54 PM

    ಡಾ. ಜಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ

     

  • 12:47 PM

    ಶ್ರೀ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಮಾಡಿದ ಡಿಕೆ ಶಿವಕುಮಾರ್

     

     

     

  • 12:30 PM

    ಬಿಹಾರ ಸಿಎಂ ನಿತೀಶ್ ಕುಮಾರ್, ಛತ್ತೀಸ್‌ಗಢ ಸಿಎಂ ಭೂಪೇಶ್ ಭಗೇಲ್, ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಬೆಂಗಳೂರಿನಲ್ಲಿ ಚುನಾಯಿತ ಕರ್ನಾಟಕ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

     

     

     

  • 12:21 PM

    ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಕರ್ನಾಟಕ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ.

     

     

  • 12:14 PM

    ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂಗೆ ಕರ್ನಾಟಕ ನಿಯೋಜಿತ ಮಂತ್ರಿಗಳು ಈಗಾಗಲೇ ಆಗಮಿಸಿದ್ದಾರೆ. ಇದೇ ವೇಳೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮತ್ತು ಇತರ ಡಿಎಂಕೆ ನಾಯಕರು ಆಗಮಿಸಿದ್ದು, ಅವರನ್ನು ಕರ್ನಾಟಕದ ನಿಯೋಜಿತ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ವಾಗತಿಸಿದರು.

     

     

  • 10:34 AM

    ಕರ್ನಾಟಕದ ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬೆಂಬಲಿಗರೊಬ್ಬರು ತಮ್ಮ ಎದೆಯ ಮೇಲೆ ತಮ್ಮ ನೆಚ್ಚಿನ ನಾಯಕನ ಹಚ್ಚೆ ಹಾಕಿಸಿಕೊಂಡಿದ್ದಾರೆ. ಜೊತೆಗೆ ಡಿಕೆಶಿ ಮತ್ತು ಕಾಂಗ್ರೆಸ್ ಪಕ್ಷದ ಇತರ ನಾಯಕರ ಫೋಟೋ ಫ್ರೇಮ್ ಕೂಡ ತಂದಿದ್ದಾರೆ.

    ಬೆಂಗಳೂರಿನಲ್ಲಿರುವ ಡಿಕೆ ಶಿವಕುಮಾರ್ ನಿವಾಸದ ಹೊರಗಿನ ದೃಶ್ಯಗಳು:

     

     

  • 10:30 AM

    ತಂದೆಯ ಹಾದಿಯಲ್ಲಿ ಶಾಸಕ ಸಾಗುತ್ತಿದ್ದಾರೆ ಎನ್ನುವುದಕ್ಕೆ ನಿದರ್ಶನ ನೀಡಿದ್ದಾರೆ ದರ್ಶನ್ ಪುಟ್ಟಣ್ಣಯ್ಯ. ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮ ಹಿನ್ನೆಲೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ರೈಲಿನಲ್ಲಿ ಬೆಂಗಳೂರಿಗೆ ಸಾಮಾನ್ಯ ವ್ಯಕ್ತಿಯಂತೆ ಪ್ರಯಾಣಿಸಿದ್ದಾರೆ. ಮೇಲುಕೋಟೆ ಕ್ಷೇತ್ರದ ಶಾಸಕನಾಗಿರುವ ದರ್ಶನ್ ಪುಟ್ಟಣ್ಣಯ್ಯ, ತಂದೆ ದಿ.ಪುಟ್ಟಣ್ಣಯ್ಯನಂತೆ ಸರಳತೆ ಮೈಗೂಡಿಸಿಕೊಂಡಿದ್ದಾರೆ. ಪಾಂಡವಪುರ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುವ ಫೋಟೋಗಳು ವೈರಲ್ ಆಗಿದೆ.

  • 10:03 AM

    “ಮೊದಲ ಕ್ಯಾಬಿನೆಟ್’ನಲ್ಲಿ  ಗ್ಯಾರೆಂಟಿಗಳ ನಿರ್ಧಾರ ಆಗುತ್ತದೆ. 8 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರಾ ಎಂಬುದು ಗೊತ್ತಿಲ್ಲ. ನಾನು ದೆಹಲಿಗೆ ಹೋಗಿಲ್ಲ. ಖಾತೆ ನೀಡುವ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ನನ್ನ ಇಷ್ಟದ ಖಾತೆ ವಿಚಾರ, ನನ್ನದು ಏನೇನೋ ಇದೆ, ಒಳ್ಳೆಯ ಆಡಳಿತ ನೀಡ್ತೇವೆ. ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ. ತಮ್ಮ ಸಹಕಾರ ಇರಲಿ. ಇನ್ನು ಡಿಸಿಎಂ ಕೇಳುವವರು ಸಾಕಷ್ಟು ಜನ ಬರ್ತಾರೆ. ನನಗೆ ಯಾವುದೇ ಬೇಸರ ಇಲ್ಲ. ಅಸಂತೋಷದ ವಿಚಾರ ಇಲ್ಲ” ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ.

  • 09:52 AM

    ನಿಯೋಜಿತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿಗರು ಅವರ ನಿವಾಸದ ಮುಂಭಾಗ ನಿಂತಿದ್ದು, ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

     

     

  • 09:16 AM

    ಬೆಂಗಳೂರಿನಲ್ಲಿರುವ ಕರ್ನಾಟಕ ನಿಯೋಜಿತ ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಮುಂಭಾಗ ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ನುಡಿಸಲಾಗುತ್ತಿದೆ. ಪ್ರಮಾಣವಚನ ಸಮಾರಂಭಕ್ಕೂ ಮುನ್ನ ಬೆಂಬಲಿಗರು ಅವರ ನಿವಾಸದ ಹೊರಗೆ ಜಮಾಯಿಸುತ್ತಿದ್ದಾರೆ. ಈ ವಿಡಿಯೋ ನೋಡಿ.

     

     

  • 09:05 AM

    ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಅವರ ಬೆಂಬಲಿಗರು ಬೆಂಗಳೂರಿನಲ್ಲಿರುವ ಅವರ ನಿವಾಸದ ಮುಂದೆ ಹಾಡುಗಳನ್ನು ಹಾಡುತ್ತಾ, ಸಿಹಿ ಹಂಚುತ್ತಿರುವ ದೃಶ್ಯ ಕಂಡುಬಂತು.

     

     

  • 08:57 AM

    “ರಾಜಕೀಯ ಜೀವನ ಆರಂಭಿಸಿದ ದಿನದಿಂದಲೂ ಛಲ ಬಿಡದ ತ್ರಿವಿಕ್ರಮನಂತೆ ಜನ ಸೇವೆ ಮಾಡುತ್ತಿರುವ ಸಾದ ಸೀದ ವ್ಯಕ್ತಿತ್ವದ ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ಶುಭಾಶಯಗಳು”

    “ಎಷ್ಟೇ ಕಷ್ಟ ಬಂದರೂ ಬಂಡೆಯಂತೆ ನಿಂತು ಹೋರಾಡುವ ಡಿ ಕೆ ಶಿವಕುಮಾರ್ ಅವರಿಗೂ ಸಹ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ಅಭಿನಂದನೆಗಳು. ಇಬ್ಬರೂ ರಾಜ್ಯವನ್ನು ಅಭಿವೃದ್ಧಿಯತ್ತ‌ ಕರೆದುಕೊಂಡು ಹೋಗಿ ಬಡ ಬಗ್ಗರ, ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸುತ್ತೀರ ಎಂಬ ನಂಬಿಕೆ ನನ್ನಂತಹ ಕೋಟ್ಯಾಂತರ ಮಂದಿಗಿದೆ. ಅದನ್ನೂ ಈಡೇರಿಸಿ” ಎಂದು ನಟ ದುನಿಯಾ ವಿಜಯ್ ತಮ್ಮ ಫೇಸ್’ಬುಕ್ ಪೇಜ್’ನಲ್ಲಿ ಬರೆದುಕೊಂಡಿದ್ದಾರೆ.

     

    https://m.facebook.com/story.php?story_fbid=pfbid08DeUEL1vHbgtvFrsqJRLiDGGcB4Z4eVKLjMH4duKaaQBLav1GHN3m7rQQ9NdkfiVl&id=100044389120871&mibextid=Nif5oz

  • 08:42 AM

    ಸಿಎಂ, ಉಪಮುಖ್ಯಮಂತ್ರಿ ಹಾಗೂ ಎಂಟು ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ. ನಾನು ಅದಕ್ಕೆ ಹೋಗುತ್ತಿದ್ದೇನೆ. ಇದು ಸಂತಸದ ವಿಷಯ. ಕರ್ನಾಟಕದಲ್ಲಿ ಹೊಸ ಮತ್ತು ಬಲಿಷ್ಠ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದರಿಂದ ಕರ್ನಾಟಕಕ್ಕೆ ಅನುಕೂಲವಾಗಲಿದೆ ಮತ್ತು ಇದು ದೇಶದಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

     

     

     

  • 08:33 AM

    ಕರ್ನಾಟಕ ನಿಯೋಜಿತ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಹಾಲಿ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಇತರ ನಾಯಕರ ಭಾವಚಿತ್ರವುಳ್ಳ ಬ್ಯಾನರ್‌-ಫ್ಲೆಕ್ಸ್’ಗಳು ಬೆಂಗಳೂರಿನ ನಗರದಲ್ಲಿ ರಾರಾಜಿಸುತ್ತಿವೆ. ಇಂದು ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

     

     

     

  • 08:30 AM

    ಸಿಇಟಿ ಬರೆಯುವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಕ್ರಮಕ್ಕೆ ಸೂಚನೆ ನೀಡಿದ್ದು ಪರೀಕ್ಷಾ ಕೇಂದ್ರಗಳಿಗೆ ತೆರಳುವವರು ಮುಂಚಿತವಾಗಿ ತೆರಳಲು ಟ್ವೀಟ್​ ಮೂಲಕ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

     

     

     

  • 08:27 AM

    ಡಿಸಿಎಂ ಆಗಿಒ ಡಿಕೆಶಿ ಪ್ರಮಾಣವಚನ ಮಾಡಲಿದ್ದು, ಈ ಸಂತಸವನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಫ್ಯಾನ್ಸ್, ಸದಾಶಿವನಗರ ಡಿಕೆಶಿ ನಿವಾಸದ ಸುತ್ತಮುತ್ತ ಫ್ಲೆಕ್ಸ್ ಮತ್ತು ಬಂಟಿಂಗ್ಸ್ ಹಾಕಿ ಅಭಿನಂದರೆ ಸಲ್ಲಿಸಿದ್ದಾರೆ.

  • 08:23 AM

    ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪದಗ್ರಹಣ ಹಿನ್ನಲೆ, ಕಂಠೀರವ ಸ್ಟೇಡಿಯಂ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸ್ಟೇಡಿಯಂ ಸುತ್ತಮುತ್ತ 1500 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, 9 ಡಿಸಿಪಿ, 25 ಎಸಿಪಿ, 50 ಇನ್ಸ್‌’ಪೆಕ್ಟರ್, 150 ಪಿಎಸ್ಐ, 1300 ಹೆಚ್ ಸಿ ಮತ್ತು ಪಿಸಿ, 16 ಕೆಎಸ್ಆರ್ ಪಿ ತುಕಡಿ, 100 ಡಿ ಸ್ವಾಟ್ ತುಕಡಿ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರಿಗೆ 25 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ.

  • 08:14 AM

    ಸಿಎಂ, ಡಿಸಿಎಂ ಜೊತೆಗೆ 8 ಮಂದಿ ಸಚಿವರಾಗಿ ಸಂವಿಧಾನ ಗೌಪ್ಯತೆ ಪ್ರತಿಜ್ಞೆ ಸ್ವೀಕಾರ ಮಾಡಲಿದ್ದಾರೆ. ಸಿಂಹಲಗ್ನದಲ್ಲಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಂ.ಬಿ. ಪಾಟೀಲ್,ಡಾ.ಜಿ. ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೆ.ಜೆ. ಜಾರ್ಜ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್ ಖಾನ್, ರಾಮಲಿಂಗಾರೆಡ್ಡಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 25 ಜನರು ಸಂಪುಟ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

  • 08:10 AM

    ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಲಿದ್ದು, ಎರಡನೇ ಬಾರಿಗೆ ಸಿಎಂ ಗದ್ದುಗೆ ಏರುತ್ತಿದ್ದಾರೆ. ಇನ್ನು ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನಕ್ಕೆ ಅದ್ದೂರಿ‌ ಸಿದ್ದತೆ ನಡೆಸಲಾಗುತ್ತಿದ್ದು, ಇಂದು ಮಧ್ಯಾಹ್ನ 12.30ಕ್ಕೆ ಕೃತ್ತಿಕಾ ನಕ್ಷತ್ರ, ಅಜಗಂಡ ನಾಮಯೋಗದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

Trending News