Lok Sabha Election 2024: ಈ ಬಾರಿ ಬಾಗಲಕೋಟೆ ಕ್ಷೇತ್ರದಲ್ಲಿದೆ ಹಲವು 'ಲೋಕ' ಲೆಕ್ಕಾಚಾರ

Lok Sabha Election 2024: ಲೋಕಸಭಾ ಚುನಾವಣೆಯಲ್ಲಿ ಸತತ ಐದನೆಯ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಸಂಸದ ಪಿಸಿ ಗದ್ದಿಗೌಡರ್ ಪ್ರತಿನಿಧಿಸುವ ಬಾಗಲಕೋಟೆ ಲೋಕಸಭಾ ಕ್ಷೇತ್ರ ಕಾವೇರಿದೆ. ಕಳೆದ ಆರೇಳು ದಿನದಿಂದ ಚುನಾವಣಾ ಕಾವು ಕೂಡ ಏರುತ್ತಿದೆ.

Written by - Manjunath N | Last Updated : Mar 24, 2024, 08:35 PM IST
  • ಹಾಗೆಯೇ ಕಳೆದ ಎರಡು ಅವಧಿಯ ಚುನಾವಣೆಯಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಪ್ರಧಾನಮಂತ್ರಿಗಳು, ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ನೆರವು ನೀಡುವ ಅಭಯ ನೀಡಿದ್ದರು.
  • ಇಲ್ಲಿ ಸಂಸದರು ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಲಿಲ್ಲ.
  • ಮೋದಿ ಅವರ ಭರವಸೆ ಈಡೇರಿಲ್ಲ ಎನ್ನುವ ಆರೋಪಕ್ಕೆ ಸಂಸದರಿಂದ ಉತ್ತರಿಸಬೇಕಿದೆ.
Lok Sabha Election 2024: ಈ ಬಾರಿ ಬಾಗಲಕೋಟೆ ಕ್ಷೇತ್ರದಲ್ಲಿದೆ ಹಲವು 'ಲೋಕ' ಲೆಕ್ಕಾಚಾರ title=

Lok Sabha Election 2024: ಲೋಕಸಭಾ ಚುನಾವಣೆ ಅಂದ್ರೆ ಪ್ರಜಾಪ್ರಭುತ್ವದ ಹಬ್ಬ, ದೇಶಕ್ಕೆ ಪ್ರಧಾನ ಮಂತ್ರಿಯನ್ನು ಆರಿಸೋಕೆ, ಜನಪ್ರತಿನಿಧಿಗಳನ್ನು ಚುನಾಯಿಸಿ ಕಳುಹಿಸುವ ಗುರುತರವಾದ ಕೆಲಸ ಮತದಾರರ ಮೇಲಿದೆ.. ಆದ್ದರಿಂದ ಸಂಸದರ ಆಯ್ಕೆ ವೇಳೆ ಎಚ್ಚರಿಕೆ ಮತ್ತು ಪ್ರಬುದ್ಧತೆಯಿಂದ ವರ್ತಿಸಬೇಕಿದೆ. ನಾಯಕರು ಕೂಡ ಮತದಾರ ಪ್ರಭುಗಳನ್ನ ತಮ್ಮತ್ತ ಸೆಳೆಯಲು, ನಾನಾ ರಾಜಕೀಯ ಲೆಕ್ಕಾಚಾರ ಹಾಕ್ತಾರೆ. ಇದೇ ಲೋಕಸಭೆ ಲೆಕ್ಕಾಚಾರ.. 

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ಬಾಗಲಕೋಟೆ ಜಿಲ್ಲೆ ಬಸವಭೂಮಿ ಕೋಟೆ ನಾಡು ಚಾಲುಕ್ಯರ ನಾಡು ಅಂತಲೇ ಫೇಮಸ್‌ ಪಡೆದಿದೆ. ಟಿಕೆಟ್ ಆಕಾಂಕ್ಷಿಗಳು ತೆರೆಮರೆಯಲ್ಲಿಯೇ ಭಾರಿ ಪೈಪೋಟಿಯನ್ನು ನಡೆಸುತ್ತಿದ್ದಾರೆ.ಲೋಕಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ, ದಲಿತ, ಮುಸ್ಲಿಂ ಸೇರುವಂತೆ ಅಹಿಂದ ಮತಗಳೇ ನಿರ್ಣಾಯಕ. ಬಾಗಲಕೋಟೆ ಸಂಸತ್‌ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಬಾಗಲಕೋಟೆ ಜಿಲ್ಲೆಯ ಏಳು ಪಕ್ಕದ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಸದ್ಯ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಕೋಟೆಯನ್ನ ಛಿದ್ರ ಮಾಡಲು ಕಾಂಗ್ರೆಸ್ ಪಕ್ಷ ರಣತಂತ್ರವನ್ನು ಹಣೆಯುತ್ತಿದೆ‌.ಲೋಕಸಭಾ ಚುನಾವಣೆಯಲ್ಲಿ ಸತತ ಐದನೆಯ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಸಂಸದ ಪಿಸಿ ಗದ್ದಿಗೌಡರ್ ಪ್ರತಿನಿಧಿಸುವ ಬಾಗಲಕೋಟೆ ಲೋಕಸಭಾ ಕ್ಷೇತ್ರ ಕಾವೇರಿದೆ.ಕಳೆದ ಆರೇಳು ದಿನದಿಂದ ಚುನಾವಣಾ ಕಾವು ಕೂಡ ಏರುತ್ತಿದೆ. 

ಬಾಗಲಕೋಟೆ ರಣಕಣ
ಸಂಸದ : ಪಿಸಿ ಗದ್ದಿಗೌಡರ್‌, ಬಿಜೆಪಿ
ಸತತ ‌ನಾಲ್ಕು ಬಾರಿ ಸಂಸದರಾಗಿ ಆಯ್ಕೆ
ಪಡೆದ ಮತ : 6,64,638  (%55.17)
ಪ್ರತಿಸ್ಪರ್ಧಿ : ವೀಣಾ ಕಾಶಪ್ಪನವರ್‌, INC
ವೀಣಾ ಪಡೆದ ಮತ : 4,96,451 (%41.21)
ಒಟ್ಟು ಮತದಾರರ ಸಂಖ್ಯೆ : 17,81,395
ವ್ಯಾಪ್ತಿ : 8 ಕ್ಷೇತ್ರಗಳಲ್ಲಿ 5 INC 3 BJP ಶಾಸಕರು
ವೀರಶೈವ ಲಿಂಗಾಯತ, ದಲಿತ, ಅಹಿಂದ ಮುಖ್ಯ

ಗದ್ದಿಗೌಡರ್ ಪರ್ವತಗೌಡ ಚಂದನಗೌಡ ಅಲಿಯಾಸ್‌ ಪಿಸಿ ಗದ್ದಿಗೌಡರ್‌ 2004ರಿಂದ ನಿರಂತರವಾಗಿ 4 ಬಾರಿ ಗೆದ್ದು ಬೀಗಿದ್ದಾರೆ. ನಾಲ್ಕು ಬಾರಿಯು ಬಿಜೆಪಿಯಿಂದ ವಿಜಯಶಾಲಿ ಆಗಿರೋ 
ಸಂಸದರ ಸಾಧನೆ ಬಗ್ಗೆ ಕ್ಷೇತ್ರದ ಮತದಾರ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ಬ್ರಿಟಿಷರ ಕಾಲದ ಬಾಗಲಕೋಟೆ ಕುಡುಚಿ ರೈಲು ಮಾರ್ಗದ ಕಾಮಗಾರಿ ಮುಗಿದಿಲ್ಲ ಅಂತ ಮೊದಲಿಗೆ ಬರೋ ಮಾತು. ಅದ್ರ ಜೊತೆಗೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು  ಹೇಳಿಕೊಳ್ಳುವ ಯಾವುದೇ ಕೈಗಾರಿಕೆಗಳು ಸ್ಥಾಪನೆ ಆಗದಿರುವುದು ಜನರಲ್ಲಿರುವ ಅಸಮಾಧಾನ ಹೆಚ್ಚಿಸಿದೆ. ಆದ್ರೂ ಅಂದಾಜು 20 ವರ್ಷದಲ್ಲಿ ಸಂಸದರು ಮಾಡಿದ್ದೇನು ಅಂತ ರಿಪೋರ್ಟ್ ಕಾರ್ಡ್ ನೋಡ್ಕೊಂಡು ಬರೋಣ..

ಸಂಸದ ಪಿ.ಸಿ.ಗದ್ದಿಗೌಡರ ಸಾಧನೆ 
* 2004 ರಿಂದ 2019ರ ವರೆಗೂ ನಿರಂತರ ಗೆಲುವು
* ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಸದ್ಭಳಕೆ
* ವಿವಿಧ ಕಾಮಗಾರಿಗಳಿಗೆ ಅನುದಾನ ಒದಗಿಸಿದ್ದಾರೆ
* ಧಾರ್ಮಿಕ, ಸಾಮಾಜಿಕ, ಅಂಗವಿಕಲರಿಗೆ ಸಲಕರಣೆ 
* ವಿವಿಧೆಡೆ ಸಮುದಾಯ ಭವನಗಳ ನಿರ್ಮಾಣ
* ಸಂಸತ್‌ ಕಲಾಪದಲ್ಲಿ ಶೇಕಡಾ. 91 ಹಾಜರಾತಿ 
* ಕಲಾಪದಲ್ಲಿ 5 ಚರ್ಚೆಯಲ್ಲಿ ಭಾಗಿ, 76 ಪ್ರಶ್ನೆ
* ಕೇಂದ್ರ ಕೃಷಿ ಸಮಿತಿ ಅಧ್ಯಕ್ಷರಾಗಿಯೂ ಉತ್ತಮ ಕಾರ್ಯ 
* ಸಂಸದ ರತ್ನ ಪ್ರಶಸ್ತಿ ಕೂಡ ಗದ್ದಿಗೌಡರ್‌ ಮುಡಿಗೇರಿದೆ

ಈ ಕ್ಷೇತ್ರದ ಮಹಾತ್ಮೆ ಎಂಥಾದ್ದು ಅಂದ್ರೆ.. 1980ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಿಎಂ ವೀರೇಂದ್ರ ಪಾಟೀಲ ಸ್ಪರ್ಧಿಸಿ ಗೆದ್ದಿದ್ದರು. ರಾಜ್ಯದಲ್ಲಿ ವೀರೇಂದ್ರ ಪಾಟೀಲರದ್ದು ದೊಡ್ಡ ಹೆಸರು. ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತರೂ ಗೆಲುವು ಸಾಧಿಸಬಹುದಾದ ಧೀರ. ಕಾಂಗ್ರೆಸ್‌ ಪಕ್ಷ ಹೋಳಾಗಿದ್ದ ಸಂಕಷ್ಟದ ಸಮಯದಲ್ಲಿ ರಾಜಕೀಯ ಪುನರ್ ಜೀವನ ಕೊಟ್ಟಿದ್ದೇ ಬಾಗಲಕೋಟೆಯ ಮತದಾರರು. ಅಂದ್‌ ಹಾಗೆ.. ಬಿಜೆಪಿ ಅನ್ನೋದಕ್ಕಿಂತ ಸಂಸದರ ವೈಯಕ್ತಿಕ ವರ್ಚಸ್ಸೇ ಹೆಚ್ಚಿದೆ. ಹೀಗಾಗಿ ಬಾಗಲಕೋಟೆ ರಣಕಣದಲ್ಲಿ ಪಿಸಿ ಗದ್ದಿಗೌಡರ್‌ ಪ್ಲಸ್‌ ಮತ್ತು ಮೈನಸ್‌ ಏನೇನು ಅಂತ ನೋಡೋಣ..

ಸಂಸದ ಗದ್ದಿಗೌಡರ್ ಪ್ಲಸ್ 
* ಅಯೋಧ್ಯೆಯಲ್ಲಿ ರಾಮಮಂದಿರ‌ ನಿರ್ಮಾಣ
* ಪ್ರಧಾನಿ ಮೋದಿಯವರ ಗ್ಯಾರಂಟಿ ಯೋಜನೆ
* ದೇಶ-ಕ್ಷೇತ್ರದಲ್ಲಿ ನರೇಂದ್ರ ಮೋದಿ ಅಲೆ
* ಪಕ್ಷ ಬೇಧ ಮರೆತು ಎಲ್ಲರೊಂದಿಗೆ ಬೆರೆಯುವಿಕೆ
* ವಿವಾದಗಳಿಂದ ದೂರ, ಜಾಣ ರಾಜಕೀಯ ನಡೆ
* ಬಾಗಲಕೋಟೆಯಲ್ಲಿ ಎಫ್.ಎಂ.ಕೇಂದ್ರ ಸ್ಥಾಪನೆ
* ವಿವಿಧ ರೈಲ್ವೆ ಇಲಾಖೆಗಳ ಯೋಜನೆಗಳಿಗೆ ಚಾಲನೆ
* ಎಲ್ಲ ಸಮುದಾಯ ವಿಶ್ವಾಸಕ್ಕೆ ಪಡೆಯುವ ಚತುರ
* ವೀರಶೈವ ಲಿಂಗಾಯತ ಮತಬ್ಯಾಂಕ್‌ ಭದ್ರ

ಸಂಸದ ಗದ್ದಿಗೌಡರ್ ಮೈನಸ್

* ಬಾಗಲಕೋಟೆ-ಕುಡಚಿ ರೈಲು ಮಾರ್ ಕಾಮಗಾರಿ ಅಪೂರ್ಣ
* ಬಾದಾಮಿ, ಐಹೊಳೆ, ಪಟ್ಟಣದ ಕಲ್ಲು ಅಭಿವೃದ್ಧಿ ನಗಣ್ಯ
* ಹೃದಯ ಯೋಜನೆ ಸ್ತಬ್ಧ, ಹುಸಿಯಾಗಿರುವ ಜನರ ನಿರೀಕ್ಷೆ 
* ಬಿಜೆಪಿಗೆ  ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಎಫೆಕ್ಟ್
* ಮುಗಿಯದ ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿಗಳು

ಅಂದ್‌ ಹಾಗೆ 1991 ರಲ್ಲಿ ಮತ್ತೊಬ್ಬ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರು ಜನತಾದಳದಿಂದ ಬಾಗಲಕೋಟೆಯಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ರು. ಆದರೆ, ಅಂದಿನ ಸಿಎಂ ಎಸ್ ಬಂಗಾರಪ್ಪ ಅವರು ಹೆಗಡೆ ಅವರನ್ನ ಸೋಲಿಸಲು ಬ್ಯಾರೇಜ್ ಸಿದ್ದು ಅಂತ ಖ್ಯಾತರಾಗಿದ್ದ ಸಿದ್ದು ನ್ಯಾಮಗೌಡ ಅವರನ್ನ ಕಣಕ್ಕಿಳಿಸಿ ಹೆಗಡೆ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಪ್ರಬುದ್ಧ ಮತ್ತು ಕಾಲಕ್ಕೆ ತಕ್ಕ ರೀತಿ ಉತ್ತಮ ನಾಯಕರನ್ನ ಆರಿಸಿ ಕಳಿಸೋದ್ರಲ್ಲಿ ಇಲ್ಲಿನ ಮತದಾರ ಬುದ್ಧಿವಂತ. ಸದ್ಯ ಕಾಂಗ್ರೆಸ್‌ ಪಕ್ಷದ ಸ್ಥಿತಿಗತಿ ಕ್ಷೇತ್ರದಲ್ಲಿ ಹೇಗಿದೆ ಅಂತ ಗ್ರಾಫಿಕ್ಸ್‌ ನೋಡ್ಕೊಂಡು ಬರೋಣ..

ಕಾಂಗ್ರೆಸ್ ಪ್ಲಸ್
* ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ
* ಎಂಟು ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಶಾಸಕರು 
* ಕುರುಬ ಸಮುದಾಯದ ಮೇಲೆ ಸಿದ್ಧರಾಮಯ್ಯರ ಪ್ರಭಾವ
* ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿ ಸ್ವೀಕಾರ
* ದಲಿತ, ಮುಸ್ಲಿಂ, ಅಹಿಂದ ಮತಗಳ ಕ್ರೋಢೀಕರಣ

ಕಾಂಗ್ರೆಸ್ ಮೈನಸ್  
* ಕಾಂಗ್ರೆಸ್‌ ನಾಯಕರಲ್ಲಿ ಅಸಮಾಧಾನ ಬುಗ್ಗೆ
* ನಾಯಕ, ಕಾರ್ಯಕರ್ತರಲ್ಲಿ‌  ಒಗ್ಗಟ್ಟು ಕಡಿಮೆ
* ಮಾಜಿ ಸಚಿವ ಎಸ್.ಆರ್.ಪಾಟೀಲ್ ಕಡೆಗಣನೆ
* ಘೋಷಿತ ಅಭ್ಯರ್ಥಿ ಬೆನ್ನಿಗೆ ನಿಲ್ಲದ ನಾಯಕರು

ಅಸಲಿಗೆ ಈ ಹಿಂದೆ ನಡೆದ 17ಲೋಕಸಭೆ ಚುನಾವಣೆಗಳಲ್ಲಿ 11 ಬಾರಿ ಭಾರತೀಯ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳೇ ಗೆದ್ದಿರೋದು. ಉಳಿದಂತೆ ಹೆಚ್‌ವೈ ಮೇಟಿ ಜನತಾದಳದಿಂದ ಅಜಯ್‌ ಕುಮಾರ ಸರನಾಯಕ ಲೋಕಶಕ್ತಿಯಿಂದ ಒಮ್ಮೆ ಪಾರ್ಲಿಮೆಂಟ್‌ ಪ್ರವೇಶ ಮಾಡಿದ್ದರು. ಉಳಿದಂತೆ 2004ರಲ್ಲಿ ಪಿಸಿ ಗದ್ದಿಗೌಡರ್‌ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಕೇಸರಿ ಬಾವುಟ ಹಾರಿಸಿದ್ದರು. ಬಳಿಕ ಹಿಂದುರಿಗಿ ನೋಡದೆ 4 ಬಾರಿ ಗೆದ್ದು 5ನೇ ಬಾರಿಗೆ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಹಾಗಿದ್ಯೂ ಯಾವ ಪಕ್ಷದಿಂದ ಯಾರೆಲ್ಲರೂ ರೆಡಿಯಾಗಿದ್ದಾರೆ ಅಂತ ನೋಡೋದಾದರೆ..

ಯಾರು ರಣಕಲಿಗಳು..?  
ಬಿಜೆಪಿ ಆಕಾಂಕ್ಷಿಗಳು 
- ಪಿ.ಸಿ.ಗದ್ದಿಗೌಡರ್
 

ಯಾರು ರಣಕಲಿಗಳು..? 
ಕಾಂಗ್ರೆಸ್ ಆಕಾಂಕ್ಷಿಗಳು

ಸಂಯುಕ್ತಾ ಪಾಟೀಲ್ 

17 ಲಕ್ಷದ 81 ಸಾವಿರದ 395 ಮತದಾರರು ಈ ಸಲ ಮತದಾನ ಮಾಡಲಿದ್ದಾರೆ. ಈ ಪೈಕಿ ಅಂದಾಜು 8 ಲಕ್ಷದ 84 ಸಾವಿರ ಪುರುಷರು ಹಕ್ಕು ಚಲಾಯಿಸಲಿದ್ದು 8 ಲಕ್ಷದ 98 ಸಾವಿರ ಮಂದಿ ಮಹಿಳಾ ಮತದಾರರು ಮತದಾನದಲ್ಲಿ ಭಾಗವಹಿಸಲಿದ್ದಾರೆ.

ವಿಧಾನಸಭೆ ಬಲಾಬಲ  
ಕ್ಷೇತ್ರದ ಶಾಸಕ-ಪಕ್ಷ   
* ಹುನಗುಂದ-ಕಾಂಗ್ರೆಸ್:ವಿಜಯಾನಂದ ಕಾಶಪ್ಪನವರ
* ಬಾದಾಮಿ-ಕಾಂಗ್ರೆಸ್:ಭೀಮಸೇನ ಚಿಮ್ಮನಕಟ್ಟಿ
* ಬಾಗಲಕೋಟೆ-ಕಾಂಗ್ರೆಸ್:ಎಚ್ ವೈ ಮೇಟಿ
* ಬೀಳಗಿ- ಕಾಂಗ್ರೆಸ್:ಜೆಟಿ.ಪಾಟೀಲ
* ಮುಧೋಳ-ಕಾಂಗ್ರೆಸ್:ಆರ್‌ಬಿ.ತಿಮ್ಮಾಪುರ
* ತೇರದಾಳ-ಬಿಜೆಪಿ:ಸಿದ್ದು ಸವದಿ
* ಜಮಖಂಡಿ-ಬಿಜೆಪಿ:ಜಗದೀಶ್ ಗುಡಗುಂಟಿ
* ನರಗುಂದ-ಬಿಜೆಪಿ:ಸಿಸಿ.ಪಾಟೀಲ

ಒಟ್ನಲ್ಲಿ ಬಾಗಲಕೋಟೆ ಲೋಕಸಭಾ ಅಖಾಡ ಬೇಸಿಗೆಯಲ್ಲಿ ಮತ್ತಷ್ಟು ಕಾವೇರಿದೆ. ನಾಲ್ಕು ಬಾರಿ ವಿಜಯದ ಬಾವುಟ ಹಾರಿಸಿರೋ ಗದ್ದಿಗೌಡರ್‌ಗೆ ಈ ಸಲವೂ ಟಿಕೆಟ್‌ ನಿಕ್ಕಿ ಅಂತ ಹೇಳಲಾಗ್ತಿದೆ. ಆದ್ರೂ ಮೋದಿ ಅಲೆಯಲ್ಲಿ ಪಾನ್‌ ಮೂವ್‌ ಮಾಡಿ ದೆಹಲಿ ಪ್ರವೇಶಕ್ಕೆ ಕೇಸರಿ ಬ್ರಿಗೇಡ್‌ನಲ್ಲಿ ಹಲವರು ಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ಪಂಚ ಗ್ಯಾರಂಟಿಗಳ ಲಾಭ ಪಡೆದು ಡೆಲ್ಲಿಯ ಗದ್ದುಗೆ ಹತ್ತಲು ಕಾಂಗ್ರೆಸ್‌ ನಾಯಕರು ಕೂಡ ಭಾರೀ ಉತ್ಸಾಹದಲ್ಲಿದ್ದಾರೆ. ಎಲ್ಲದಕ್ಕೂ ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.

2004ರ ಫಲಿತಾಂಶ : 

 ಅಭ್ಯರ್ಥಿ-ಪಕ್ಷ-ಪಡೆದ ಮತಗಳು- 

ಪಿ.ಸಿ.ಗದ್ದಿಗೌಡರ-ಬಿಜೆಪಿ-459451

ಆರ್.ಎಸ್.ಪಾಟೀಲ-ಕಾಂಗ್ರೆಸ್-292068

ಗೆಲುವಿನ ಅಂತರ: 167383

====

 2009 ರ ಫಲಿತಾಂಶ: 

ಪಿ.ಸಿ.ಗದ್ದಿಗೌಡರ-ಬಿಜೆಪಿ-413272

ಜೆ.ಟಿ.ಪಾಟೀಲ-ಕಾಂಗ್ರೆಸ್-377826

ಗೆಲುವಿನ ಅಂತರ: 35446

===

 2014 ರ ಫಲಿತಾಂಶ: 

ಪಿ.ಸಿ.ಗದ್ದಿಗೌಡರ-ಬಿಜೆಪಿ-571548

ಅಜಯಕುಮಾರ ಸರನಾಯಕ-ಕಾಂಗ್ರೆಸ್-454988

ಗೆಲುವಿನ ಅಂತರ: 116560
===

 2019ರ ಫಲಿತಾಂಶ: 

ಪಿ.ಸಿ.ಗದ್ದಿಗೌಡರ-ಬಿಜೆಪಿ-664638

ವೀಣಾ ಕಾಶಪ್ಪನವರ-ಕಾಂಗ್ರೆಸ್-496451

ಗೆಲುವಿನ ಅಂತರ: 168187

ಕುಂಟುತ್ತ ಸಾಗಿದ ಕಾಮಗಾರಿಗಳೇ ಹೆಚ್ಚು : 

ಪಿ.ಸಿ.ಗದ್ದಿಗೌಡರ ನಾಲ್ಕು ಸಲ ಸಂಸದರಾಗಿದ್ದಾರೆ. ಇದರಲ್ಲಿ ಕಳೆದ 10 ವರ್ಷ ಅವರದ್ದೆ ಪಕ್ಷದ ಸರ್ಕಾರ ಇದೆ. ಹೀಗಾಗಿ ಸಂಸದರ ಮೇಲೆ ಮತದಾರದ್ದು ಅಪಾರ ನಿರೀಕ್ಷೆ ಇತ್ತು. ಸರ್ಕಾರದಿಂದ ನಡೆಯುವ ರೂಟಿನ್ ಕಾರ್ಯಕ್ರಮಗಳನ್ನು ಹೊರತು ಪಡಿಸಿ, ಕ್ಷೇತ್ರಕ್ಕೆ ವಿಶೇಷವಾದ ಯೋಜನೆ ರೂಪಿಸಿ, ಅದನ್ನು ಸರ್ಕಾರದ ಮುಂದಿಟ್ಟು ಅನುದಾನ ತಂದು ಮಾಡಿಸಿರುವ ಕಾಮಗಾರಿ ಇಲ್ಲ. ರೂಟಿನ್ ಕಾರ್ಯಕ್ರಮಗಳ ನಡೆದಿವೆ. ಅವುಗಳಲ್ಲಿ ಮಂದಗತಿಯೂ ಸೇರಿಕೊಂಡಿದೆ. ಉದಾಹರಣೆಗೆ ಬಾಗಲಕೋಟೆ-ಕುಡಚಿ ರೈಲು ಮಾರ್ಗ 2010ರಲ್ಲೆ ಆರಂಭಗೊಂಡಿದ್ದು, ಇನ್ನೂ ವರೆಗೂ 40 ಕಿ.ಮೀ. ಹಳಿ ಜೋಡಣೆ ಮುಗಿದಿಲ್ಲ. ಒಟ್ಟು 142 ಕಿ.ಮೀ. ಉದ್ದದ ರೈಲು ಹಳಿ ಜೋಡಣೆ ಆಗಬೇಕು. ಅದಕ್ಕೆ ರಾಜ್ಯ ಸರ್ಕಾರ ನಿಗದಿತ ಸಮಯಕ್ಕೆ ಜಮೀನು ಒದಗಿಸಿಲ್ಲ ಎನ್ನುವ ಮಾತನ್ನು ಸಂಸದರು ಹೇಳುತ್ತಿದ್ದಾರೆ. ಗದಗ-ಹುಟಗಿ ಡಬ್ಲಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಈಗ ಬಾದಾಮಿ ಹಾಗೂ ಗುಳೇದಗುಡ್ಡ ಮೇಲ್ ಸೇತುವೆ ಮಂಜೂರಾಗಿವೆ. ಇದೇ ತಿಂಗಳು ಪ್ರಧಾನಮಂತ್ರಿಗಳು ವರ್ಚವಲ್ ಮೂಲಕ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಬಾಗಲಕೋಟೆ ಹೊಸ ರೈಲು ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿ ಇದೆ. ಜಿಲ್ಲೆಯಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಭರದಿಂದ ನಡೆದಿವೆ.

ಹಿಂದಿನ ಅವಧಿಯಲ್ಲಿ ಜಾರಿಗೆ ಬಂದಿದ್ದ ಬಾದಾಮಿಯ ಹೃದಯ ಯೋಜನೆ ಅಡಿಯಲ್ಲಿ ಬಾದಾಮಿ ಚಿತ್ರಣವೇ ಬದಲಾಗಬೇಕಿತ್ತು. ವೇಗವಾಗಿ ಕಾಮಗಾರಿ ನಡೆಯದೇ ಹಿನ್ನಲೆಯಲ್ಲಿ 22 ಕೋಟಿ ರೂ. ಅನುದಾನವಷ್ಟೆ ಬಂದಿದ್ದರೂ ಇನ್ನೂ ಕೆಲ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಅಮೃತ ಯೋಜನೆ ಅಡಿಯಲ್ಲಿ ಬಾಗಲಕೋಟೆ ನಗರಕ್ಕೆ 124 ಕೋಟಿ ರೂ. ಬಾದಾಮಿಗೆ 35 ಕೋಟಿ ರೂ. ವೆಚ್ಚದಲ್ಲಿ  ಕುಡಿಯುವ ನೀರು, ನಗರ ಸೌಂದರ್ಯಕರಣ ಇತ್ಯಾದಿ ಆಭಿವೃದ್ಧಿ ಕಾಮಗಾರಿ ಹಿಂದಿನ ಅವಯಲ್ಲೆ ಮುಗಿಯಬೇಕಿದ್ದು, ಇನ್ನೂ ಸಹ ಕೆಲ ಕಾಮಗಾರಿ ಮುಗಿದಿಲ್ಲ. ಬಾಗಲಕೋಟೆ ಆಕಾಶವಾಣಿ ಎಫ್ ಎಂ ಕೊನೆಗೂ ಇತ್ತೀಚಿಗೆ ಉದ್ಘಾಟನೆ ಆಗಿದೆ. ಇದನ್ನು ಹೊರತುಪಡಿಸಿ ಕೇಂದ್ರ ಸರ್ಕಾರದ ಮುದ್ರಾ, ನರೇಗಾ, ಸ್ವಚ್ಛಭಾರತ, ಜಲಜೀವನ್ ಮಿಷನ್ ಸೇರಿ ಹತ್ತು ಹಲವು ಕೇಂದ್ರದ ಯೋಜನೆಗಳು ರೂಟಿನ್ ಆಗಿ ನಡೆದಿವೆ. ಸಂಸದರು ದಿಶಾ ಸರಿಯಾಗಿ ನಡೆಸುತ್ತಾರೆ. ಕ್ಷೇತ್ರಕ್ಕೆಂದು ವಿಶೇಷ ಯೋಜನೆ ತರಲ್ಲ. ರೂಟಿನ್ ಯೋಜನೆಗಳು ನಿದಾನಗತಿ ಎನ್ನುವ ಅಪವಾದವೂ ಇವೆ. ಇದಕ್ಕೆ ಸಂಸದರು ಕೇಂದ್ರ ಯೋಜನೆ ಮಾಡಿ, ಅನುದಾನ ಕೊಡುತ್ತದೆ. ಅದನ್ನು ಅನುಷ್ಠಾನ ಮಾಡುವ ಹೊಣೆ ರಾಜ್ಯ ಸರ್ಕಾರದ್ದು, ಸ್ಥಳೀಯವಾಗಿ ಜನಪ್ರತಿನಿಗಳು ಆ ಬಗ್ಗೆ ಗಮನ ಹರಿಸಬೇಕು. ಕೇಂದ್ರದಿಂದ ಏನಾದರೂ ಸಮಸ್ಯೆ ಆದರೆ ತಮ್ಮ ಗಮನಕ್ಕೆ ತಂದರೆ ಅದನ್ನು ಸರಿಪಡಿಸುತ್ತೇವೆ ಎನ್ನುತ್ತಾರೆ.

ಹಾಗೆಯೇ ಕಳೆದ ಎರಡು ಅವಧಿಯ ಚುನಾವಣೆಯಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಪ್ರಧಾನಮಂತ್ರಿಗಳು, ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ನೆರವು ನೀಡುವ ಅಭಯ ನೀಡಿದ್ದರು. ಇಲ್ಲಿ ಸಂಸದರು ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಲಿಲ್ಲ. ಮೋದಿ ಅವರ ಭರವಸೆ ಈಡೇರಿಲ್ಲ ಎನ್ನುವ ಆರೋಪಕ್ಕೆ ಸಂಸದರಿಂದ ಉತ್ತರಿಸಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News