ಎಚ್ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ ಮಂಜೂರಾತಿಗೆ ರಾಜ್ಯಪಾಲರಿಗೆ ಲೋಕಾಯುಕ್ತ  ಮನವಿ

ಸಂಡೂರಿನಲ್ಲಿ 550 ಎಕರೆ ಗಣಿ ಭೂಮಿಯನ್ನು ಅಕ್ರಮವಾಗಿ ವಿನೋದ್ ಗೋಯಲ್ ಅವರಿಗೆ ಮಂಜೂರು ಮಾಡಲು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಸಹಕರಿಸಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈಗ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಅಭಿಯೋಜನಾ (ಪ್ರಾಸಿಕ್ಯೂಷನ್‌) ಮಂಜೂರಾತಿ ಕೋರಿ ಲೋಕಾಯುಕ್ತ ಎಸ್ಪಿ 2023ರ ಸೆಪ್ಟೆಂಬರ್‌ನಲ್ಲಿ ರಾಜ್ಯಪಾಲರಾಗಿರುವ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಪತ್ರ ಬರೆದಿದ್ದಾರೆ ಎಂದು ಬಾರ್ ಎಂಡ್ ಬೆಂಚ್ ವರದಿ ಮಾಡಿದೆ

Written by - Manjunath N | Last Updated : Aug 8, 2024, 09:58 PM IST
  • ಕರ್ನಾಟಕದ ಭೂಮಿ ಭಗೆಯುವುದು ಕುಮಾರಸ್ವಾಮಿಯವರ ಅತ್ಯಂತ ಆಸಕ್ತಿದಾಯಕ ವಿಷಯ.
  • ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕೇವಲ ಅಧಿಕಾರ ಹಪಹಪಿತನಕ್ಕೆ ಮಾತ್ರವಲ್ಲ,
  • ಅಧಿಕಾರ ಬಳಸಿ ಗಣಿಯಲ್ಲಿ ಲೂಟಿಗಾರಿಕೆ ನಡೆಸುವುದು ಅವರ ಪ್ಲಾನ್ ಆಗಿತ್ತು ಎನ್ನುವುದು ಈಗ ಜಗಜ್ಜಾಹೀರಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಎಚ್ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ ಮಂಜೂರಾತಿಗೆ ರಾಜ್ಯಪಾಲರಿಗೆ ಲೋಕಾಯುಕ್ತ  ಮನವಿ title=

ಬಳ್ಳಾರಿ: ಸಂಡೂರಿನಲ್ಲಿ 550 ಎಕರೆ ಗಣಿ ಭೂಮಿಯನ್ನು ಅಕ್ರಮವಾಗಿ ವಿನೋದ್ ಗೋಯಲ್ ಅವರಿಗೆ ಮಂಜೂರು ಮಾಡಲು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಸಹಕರಿಸಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈಗ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಅಭಿಯೋಜನಾ (ಪ್ರಾಸಿಕ್ಯೂಷನ್‌) ಮಂಜೂರಾತಿ ಕೋರಿ ಲೋಕಾಯುಕ್ತ ಎಸ್ಪಿ 2023ರ ಸೆಪ್ಟೆಂಬರ್‌ನಲ್ಲಿ ರಾಜ್ಯಪಾಲರಾಗಿರುವ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಪತ್ರ ಬರೆದಿದ್ದಾರೆ ಎಂದು ಬಾರ್ ಎಂಡ್ ಬೆಂಚ್ ವರದಿ ಮಾಡಿದೆ

ಬಾರ್ ಅಂಡ್ ಬೆಂಚ್ ವರದಿಯಲ್ಲಿ ಉಲ್ಲೇಖಿಸಿರುವಂತೆ 2006ರಲ್ಲಿ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ವಿನೋದ್‌ ಗೋಯಲ್‌ ಎಂಬ ವ್ಯಕ್ತಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿನ 550 ಎಕರೆ ಭೂಮಿ ಮಂಜೂರು ಮಾಡಲು ಒಳಸಂಚು ರೂಪಿಸಿದ್ದಾರೆ ಎಂದು ವರದಿ ತಿಳಿಸಿದೆ.ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಎಸ್‌ಐಟಿಯ ತನಿಖಾ ಅಧಿಕಾರಿಗಳು ವಿನೋದ್‌ ಗೋಯಲ್‌ ಅವರನ್ನು ಪ್ರಥಮ ಆರೋಪಿಯೆಂದೂ, ಎಚ್ಡಿಕೆ ಅವರನ್ನು ಎರಡನೇ ಆರೋಪಿಯೆಂದು ದಾಖಲಿಸಲಾಗಿದೆ.ಅಷ್ಟೇ ಅಲ್ಲದೆ ಈ ಪ್ರಕರಣದ ವಿಚಾರದಲ್ಲಿ 420, 465, 468, 409 ಜೊತೆಗೆ 120ಬಿ ಮತ್ತು ಐಪಿಸಿ ಸೆಕ್ಷನ್‌ 511, ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಮತ್ತು ಎಂಎಂಆರ್‌ಡಿ ಕಾಯಿದೆಯ ಸೆಕ್ಷನ್‌ಗಳಾದ 21(2) ಮತ್ತು 23 ಗಳನ್ನು ಉಲ್ಲೇಖಿಸಲಾಗಿದೆ.

ಆದ್ದರಿಂದ ಈಗ ಈ ಪ್ರಕರಣದಲ್ಲಿ ಇದಕ್ಕೆ ಸಂಬಂಧಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲು ಅಭಿಯೋಜನಾ ಮಂಜೂರಾತಿ ನೀಡುವಂತೆ ರಾಜ್ಯಪಾಲರಿಗೆ ಲೋಕಾಯುಕ್ತ ಅಧಿಕಾರಿಗಳು 2023ರ ಸೆಪ್ಟೆಂಬರ್‌ನಲ್ಲಿ ಮನವಿ ಮಾಡಿದ್ದಾರೆ.

ಎಚ್ಡಿಕೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ:

ಕರ್ನಾಟಕದ ಭೂಮಿ ಭಗೆಯುವುದು ಕುಮಾರಸ್ವಾಮಿಯವರ ಅತ್ಯಂತ ಆಸಕ್ತಿದಾಯಕ ವಿಷಯ.ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕೇವಲ ಅಧಿಕಾರ ಹಪಹಪಿತನಕ್ಕೆ ಮಾತ್ರವಲ್ಲ, ಅಧಿಕಾರ ಬಳಸಿ ಗಣಿಯಲ್ಲಿ ಲೂಟಿಗಾರಿಕೆ ನಡೆಸುವುದು ಅವರ ಪ್ಲಾನ್ ಆಗಿತ್ತು ಎನ್ನುವುದು ಈಗ ಜಗಜ್ಜಾಹೀರಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕೇಂದ್ರ ಮಂತ್ರಿಯಾಗಿ ಕೃಷಿ ಖಾತೆಯನ್ನೇ ಕೇಳುತ್ತೇನೆ ಎನ್ನುತ್ತಿದ್ದ ಬ್ರದರ್ ಸ್ವಾಮಿಗಳು ಕರ್ನಾಟಕದ ಜನರ ಕಿವಿ ಮೇಲೆ ಇಟ್ಟಿದ್ದರಷ್ಟೇ,ಅವರ ಕಣ್ಣು ಇದ್ದಿದ್ದು ಗಣಿ ಖಾತೆ ಮೇಲೆಯೇ ಹೊರತು ಕೃಷಿ ಖಾತೆಯ ಮೇಲಲ್ಲ.ಮುಖ್ಯಮಂತ್ರಿಯಾಗಿದ್ದಾಗ ಸಂಡೂರಿನ 550 ಎಕರೆ ಭೂಮಿ ಭಗೆಯಲು ಬ್ರದರ್ ಸ್ವಾಮಿಗಳು ಅಕ್ರಮ ಮಾರ್ಗ ಅನುಸರಿಸಿದ್ದರು, ಈಗ ಕೇಂದ್ರ ಗಣಿ ಸಚಿವರಾಗಿ ದೇವದಾರಿ ಗಣಿ ಭಗೆಯಲು ಕೈ ಇಡುವ ಪ್ರಯತ್ನ ಮಾಡಿದ್ದಾರೆ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಗಳ ಮೂಲಕ ಕಿಡಿ ಕಾರಿದೆ.

ಇನ್ನೂ ಮುಂದುವರೆದು ಟ್ವೀಟ್ ಮಾಡಿರುವ ಕಾಂಗ್ರೆಸ್ 'ಕರ್ನಾಟಕ ಕಂಡ ಅತ್ಯಂತ ಸಾಚಾ ರಾಜಕಾರಿಣಿ ನಾನು ಎಂದುಕೊಳ್ಳುವ ಎಚ್ ಡಿಕೆ ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲರ ಅನುಮತಿ ಕೋರಿತ್ತು ಕರ್ನಾಟಕ ಲೋಕಾಯುಕ್ತ.ಬ್ರದರ್ ಸ್ವಾಮಿಗಳೇ, ಕರ್ನಾಟಕದ ಭೂಮಿಯ ಒಡಲನ್ನು ಭಗೆಯಲು ನಿಮಗೆ ಎಲ್ಲಿಲ್ಲದ ಆಸಕ್ತಿ ಎನ್ನುವುದು ಬಹಳ ಹಿಂದೆಯೇ ನಿರೂಪಿತವಾಗಿದೆಯಲ್ಲವೇ? ಈಗ ಮತ್ತೆ ಕೇಂದ್ರ ಗಣಿ ಸಚಿವರಾಗಲು ಅದೆಷ್ಟು ಲಾಭಿ ನಡೆಸಿದ್ದಿರೋ ಆ ದೇವರಿಗೇ ಗೊತ್ತು!' ಎಂದು ಕುಟುಕಿದೆ.

ಗಣಿಗಾರಿಕೆಯ ವಿಷಯ ಎಂದರೆ ಕುಮಾರಸ್ವಾಮಿಯವರಿಗೆ ಅಷ್ಟೊಂದು ಆಸಕ್ತಿ ಇರುವುದರ ಹಿಂದೆ ಗಣಿಗಾರಿಕೆಯಲ್ಲಿ ಲೂಟಿಗಾರಿಕೆಗೆ ಹೆಚ್ಚು ಅವಕಾಶವಿದೆ ಎಂಬ ಸತ್ಯವೇ ಕಾರಣವಲ್ಲವೇ?! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News