Loksabha Election 2024: ದೇಶದಲ್ಲಿ ಎಲ್ಲಿಯೂ ಮೋದಿ ಅಲೆ ಇಲ್ಲ, ನಮ್ಮ ಗ್ಯಾರಂಟಿಗಳದ್ದೇ ಅಲೆ ಜೋರಾಗಿದೆ-ಸಿಎಂ ಸಿದ್ದರಾಮಯ್ಯ

Loksabha Election 2024: ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಪರವಾಗಿ ಮತಯಾಚಿಸಿದ್ದೆ. ಒಂದು ವೇಳೆ ನಾನು ಬರದೇ ಹೋಗಿದ್ದರೆ ಅವರು ಗೆಲ್ಲುತ್ತಿರರಲಿಲ್ಲ. ಈ ಬಾರಿ ಅವರನ್ನು ಸೋಲಿಸಿ ಎಂದು ಕರೆ ಕೊಡಲು ನಾನು ಬಂದಿದ್ದೇನೆ ಎಂದು ಹೇಳಿದರು.

Written by - Manjunath N | Last Updated : Apr 19, 2024, 10:25 PM IST
  • ನರೇಂದ್ರ ಮೋದಿಯವರು ಭ್ರಮಾಲೋಕವನ್ನೇ ಸೃಷ್ಟಿಸಿದರು.
  • ಕೊಟ್ಟ ಮಾತಿನಂತೆ 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬರ ಖಾತೆಗೆ ಹಾಕಿಲ್ಲ.
  • ಯಾಕೆ ಕೊಡಲಾಗಿಲ್ಲ ಎಂಬ ಬಗ್ಗೆ ಮಾತನಾಡಿಲ್ಲ. ಈ ಬಾರಿ ಬಿಜೆಪಿಯೊದಿಗೆ ಜೆಡಿಎಸ್ ನವರೂ ಸೇರಿಕೊಂಡಿದ್ದಾರೆ.
Loksabha Election 2024: ದೇಶದಲ್ಲಿ ಎಲ್ಲಿಯೂ ಮೋದಿ ಅಲೆ ಇಲ್ಲ, ನಮ್ಮ ಗ್ಯಾರಂಟಿಗಳದ್ದೇ ಅಲೆ ಜೋರಾಗಿದೆ-ಸಿಎಂ ಸಿದ್ದರಾಮಯ್ಯ title=

Loksabha Election 2024: ಸಕಲೇಶಪುರ: ದೇಶದಲ್ಲಿ ಎಲ್ಲಿಯೂ ಮೋದಿ ಅಲೆ ಇಲ್ಲ, ಬಿಜೆಪಿ ಅಲೆ ಇಲ್ಲ. ನಮ್ಮ ಗ್ಯಾರಂಟಿಗಳದ್ದೇ ಅಲೆ ಜೋರಾಗಿದೆ. ಈ ಬಾರಿ ನೂರಕ್ಕೆ ನೂರು ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಹಾಸನ ಲೋಕಸಭಾ ಕ್ಷೇತ್ರದ ಸಕಲೇಶಪುರದಲ್ಲಿ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪರವಾಗಿ ನಡೆದ ಪ್ರಜಾಧ್ವನಿ-02 ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಇದನ್ನೂ ಓದಿ- ಎಲ್ಲರೂ ಒಟ್ಟಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ: ತುಷಾರ್ ಗಿರಿ ನಾಥ್

ಜಂತರ್ ಮಂತರ್ ಬಳಿ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಪ್ರತಿಭಟನೆಯಾದಾಗ ಪ್ರಜ್ವಲ್ ರೇವಣ್ಣ, ದೇವೇಗೌಡರು ಬಾಯಿ ಬಿಟ್ಟರೇ? ಜನಗಳ ಪ್ರತಿನಿಧಿಯಾಗಿ ಲೋಕಸಭೆ, ರಾಜ್ಯಸಭೆಯಲ್ಲಿ ಮಾತನಾಡದಿದ್ದರೆ ಯಾಕೆ ಹೋಗಬೇಕು? ಪ್ರಜ್ವಲ್ ರೇವಣ್ಣ 5 ವರ್ಷ ಸಂಸದರಾಗಿ ಏನಾದರೂ ಮಾಡಿದ್ದಾರೆಯೇ? ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಪಾಲು ನೀಡದೆ ಅನ್ಯಾಯ ಮಾಡಿದಾಗಲೂ ಏನೂ ಮಾತನಾಡಲಿಲ್ಲ. ಕರ್ನಾಟಕದಿಂದ ಕೇಂದ್ರಕ್ಕೆ ಕೊಡುವ ತೆರಿಗೆ 4.30 ಲಕ್ಷ ಕೋಟಿ ರೂ.ಗಳು. ನಮಗೆ ವಾಪಸ್ಸು ಬರುವುದು 55 ಕೋಟಿ ಸಾವಿರ ರೂ.ಗಳು ಮಾತ್ರ. ಇದು ಅನ್ಯಾಯವಲ್ಲವೇ? ಎಂದು ಅವರು ಪ್ರಶ್ನಿಸಿದರು.

ಬಿಜೆಪಿಯಿಂದ 25 ಜನ ಸಂಸದರಾಗಿದ್ದರು. ಈಗ 27 ಜನರಾಗಿದ್ದಾರೆ. ಇವರು ಯಾರು ಕೇಂದ್ರದ ವಿರುದ್ಧ ಬಾಯಿ ಬಿಡಲಿಲ್ಲ. ನೀರಾವರಿ, ಬರಗಾಲಕ್ಕೆ ಹಣ ಬಿಡುಗಡೆ ಮಾಡಲಿಲ್ಲ. ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಕೊಟ್ಟು ಆರು ತಿಂಗಳಾದರೂ ಒಂದು ರೂಪಾಯಿ ಪರಿಹಾರವನ್ನೂ ಬಿಡುಗಡೆ ಮಾಡಿಲ್ಲ. ನರೇಂದ್ರ ಮೋದಿ ಅವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಬಂದಾಗ ಮಾತ್ರ. ಬರಗಾಲ, ಪ್ರವಾಹ ಬಂದಾಗ ಬರಲಿಲ್ಲ. ರಾಜ್ಯದ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಈ ಬಗ್ಗೆ ನಿಮಗೆ ಕೋಪ ಬಂದಿದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಲೋಕಸಭೆಗೆ ಕಳುಹಿಸುವ ತೀರ್ಮಾನ ಮಾಡಲೇಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ- Voter ID ಕಳೆದುಹೋಗಿದೆಯೇ? ಈ ದಾಖಲೆಗಳನ್ನು ನೀಡಿ ಮತ ಚಲಾಯಿಸಬಹುದು!

ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಪರವಾಗಿ ಮತಯಾಚಿಸಿದ್ದೆ. ಒಂದು ವೇಳೆ ನಾನು ಬರದೇ ಹೋಗಿದ್ದರೆ ಅವರು ಗೆಲ್ಲುತ್ತಿರರಲಿಲ್ಲ. ಈ ಬಾರಿ ಅವರನ್ನು ಸೋಲಿಸಿ ಎಂದು ಕರೆ ಕೊಡಲು ನಾನು ಬಂದಿದ್ದೇನೆ ಎಂದು ಹೇಳಿದರು.

ನರೇಂದ್ರ ಮೋದಿಯವರು ಭ್ರಮಾಲೋಕವನ್ನೇ ಸೃಷ್ಟಿಸಿದರು. ಕೊಟ್ಟ ಮಾತಿನಂತೆ 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬರ ಖಾತೆಗೆ ಹಾಕಿಲ್ಲ. ಯಾಕೆ ಕೊಡಲಾಗಿಲ್ಲ ಎಂಬ ಬಗ್ಗೆ ಮಾತನಾಡಿಲ್ಲ. ಈ ಬಾರಿ ಬಿಜೆಪಿಯೊದಿಗೆ ಜೆಡಿಎಸ್ ನವರೂ ಸೇರಿಕೊಂಡಿದ್ದಾರೆ. ವಾಚಾಮಗೋಚರವಾಗಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದ ದೇವೇಗೌಡರು ಈಗ ತಮಗೂ ಮೋದಿಗೂ ಜನ್ಮ ಜನ್ಮಾಂತರದ ಸಂಬಂಧವಿದೆ ಎನ್ನುತ್ತಿದ್ದಾರೆ. ಈ ಅನಿರೀಕ್ಷಿತ ಪ್ರೀತಿಯ ಬಗ್ಗೆ ಜನ ವಿಚಾರ ಮಾಡಬೇಕು. ಸ್ವಾರ್ಥಕ್ಕಾಗಿ, ಕುಟುಂಬ ರಾಜಕಾರಣಕ್ಕಾಗಿ ಈಗ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿದ್ದಾರೆ. ಬಡವರ ಕಷ್ಟ ಸುಖ, ಸಾಮಾನ್ಯ ಜನರ, ರೈತರಿಗಾಗಿ ಸೇರಿಲ್ಲ ಎಂದು ಕಿಡಿ ಕಾರಿದರು.

ಅಳಿಯ, ಮಗ, ಮೊಮ್ಮಗನನ್ನು ನಿಲ್ಲಿಸಿದ್ದಾರೆ. ಕೋಲಾರ ಮೀಸಲು ಸ್ಥಾನವಾಗಿರುವುದರಿಂದ ಬಿಟ್ಟಿದ್ದಾರೆ ಅಷ್ಟೇ. ಇದು ಕುಟುಂಬ ರಾಜಕಾರಣ ಅಲ್ಲವಾ? ಇದರ ವಿರುದ್ಧ ಮೋದಿಯವರ ನಿಲುವು ಏನು? ಎಂದು ಅವರು ಪ್ರಶ್ನಿಸಿದರು.

ಈ ಚುನಾವಣೆಯಲ್ಲಿ ಹೊಸಬರಿಗೆ ಅಂದರೆ ಕಾಂಗ್ರೆಸ್ ಅಭ್ಯರ್ಥಿಗೆ ಅವಕಾಶ ನೀಡಬೇಕು. ಕೊಟ್ಟ ಮಾತು ಈಡೇರಿಸಿದ್ದೇವೆ. ಬಸವಾದಿ ಶರಣರ ಹಾದಿಯಲ್ಲಿ ನಡೆಯುವ ಕೆಲಸವನ್ನು ಮಾಡುತ್ತಿದ್ದು, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಕೆಂಪೇಗೌಡರ ಜಯಂತಿಯನ್ನು ಸರ್ಕಾರವೇ ಆಚರಿಸಲು ತೀರ್ಮಾನ ಮಾಡಿದ್ದು ನಮ್ಮ ಸರ್ಕಾರ.ನಮ್ಮದು ಸರ್ವರನ್ನೂ ಒಳಗೊಂಡ ಮಾನವೀಯ ಸಿದ್ಧಾಂತ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News