ಮಂಡ್ಯದಲ್ಲಿ ಮತ್ತೊಂದು ಮರ್ಡರ್; ಬೆಚ್ಚಿಬಿದ್ದ ಸಕ್ಕರೆನಾಡು..!

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೋಟೆಮಾಳ ಬೀದಿಯ ಮಂಗಳಮ್ಮ(75) ಹತ್ಯೆಯಾದ ವೃದ್ಧೆ.

Written by - Zee Kannada News Desk | Last Updated : Mar 5, 2022, 10:13 AM IST
  • ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ ನಡೆದಿದೆ
  • ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು
  • ಬೆಳಗೊಳದಲ್ಲಿ ವೃದ್ಧೆ ಹತ್ಯೆ ಮಾಡಿ ಚಿನ್ನಾಭರಣ ದೋಚಿದ ಆರೋಪಿಗಳು
ಮಂಡ್ಯದಲ್ಲಿ ಮತ್ತೊಂದು ಮರ್ಡರ್; ಬೆಚ್ಚಿಬಿದ್ದ ಸಕ್ಕರೆನಾಡು..! title=
ಮಂಡ್ಯದಲ್ಲಿ ಮತ್ತೊಂದು ಮರ್ಡರ್

ಮಂಡ್ಯ: ಸಕ್ಕರೆನಾಡು ಮಂಡ್ಯ(Mandya)ದಲ್ಲಿ ಮತ್ತೊಂದು ಮರ್ಡರ್ ನಡೆದಿದೆ. ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ(Elderly Woman's Murder) ಮಾಡಲಾಗಿದೆ. ಮಂಡ್ಯದ ಶ್ರೀರಂಗಪಟ್ಟಣ(Srirangapatna) ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೋಟೆಮಾಳ ಬೀದಿಯ ಮಂಗಳಮ್ಮ(75) ಹತ್ಯೆಯಾದ ವೃದ್ಧೆ.

ವೃದ್ಧೆಯನ್ನು ಹತ್ಯೆ(Murder Case) ಮಾಡಿರುವ ದುಷ್ಕರ್ಮಿಗಳು ಕತ್ತು ಕಿವಿಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಎಸ್ಕೇಪ್ ಆಗಿದ್ದಾರೆ. ತಡರಾತ್ರಿ ಯಾರೂ ಇಲ್ಲದ ವೇಳೆಯನ್ನು ಗಮನಿಸಿ ವೃದ್ಧೆಯನ್ನು ಹತ್ಯೆ ಮಾಡಿದ್ದಾರೆ. ಬಳಿಕ ವೃದ್ಧೆಯ ಬಳಿಯಿದ್ದ ಚಿನ್ನಾಭರಣ ಕಳುವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಶ್ರೀಗಂಧ ಮರದ ಕಳ್ಳನನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

ಸ್ಥಳಕ್ಕೆ ಕೆಆರ್ ಎಸ್ ಠಾಣೆ ಪೊಲೀಸರು(KRS Police Station) ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಬರ್ಬರ ಹತ್ಯೆಗೆ ಬೆಚ್ಚಿಬಿದ್ದ ಸಕ್ಕರೆನಾಡು

ಸಕ್ಕರೆನಾಡು ಮಂಡ್ಯದಲ್ಲಿ ದಿನಬೆಳಗಾಗುವುದರಲ್ಲಿ 2 ಕೊಲೆಗಳು ನಡೆದಿವೆ. ಶ್ರೀರಂಗಪಟ್ಟಣ(Srirangapatna) ತಾಲೂಕಿನ ಕಾರೇಕುರ ಗ್ರಾಮದ ಜಮೀನಿನ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಯುವಕನ್ನು ಬರ್ಬರವಾಗಿ  ಹತ್ಯೆ ಮಾಡಿದ್ದರು. ಕಾರೇಕುರ ಗ್ರಾಮದ 26 ವರ್ಷದ ಸಾಗರ್ ಎಂಬಾತನ ಹತ್ಯೆಯಾಗಿತ್ತು. ರಾತ್ರಿ ಮನೆಯಿಂದ ಹೊರ ಹೋಗಿದ್ದ ಯುವಕ ಬೆಳಿಗ್ಗೆ ಜಮೀನಿನ ಬಳಿ ಶವವಾಗಿ ಪತ್ತೆಯಾಗಿದ್ದ. ಮಂಡ್ಯ(Mandya Crime)ಜಿಲ್ಲೆಯಲ್ಲಿ ಅದೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ದಿನಕ್ಕೊಂದು ಕೊಲೆಗಳು ನಡೆಯುತ್ತಿರುವುದರಿಂದ ಇಲ್ಲಿನ ಸ್ಥಳೀಯ ಜನರು ಭಯಭೀತರಾಗಿದ್ದಾರೆ. ಹಳೆದ್ವೇಷ, ಚಿನ್ನಾಭರಣ ದೋಚಲು ದುಷ್ಕರ್ಮಿಗಳು ಕೊಲೆ ಮಾಡುತ್ತಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಬೆಲೆ ಬಿಸಿದ್ದು, ತನಿಖೆ ನಡೆಸುತ್ತಿದ್ದಾರೆ.  

ಇದನ್ನೂ ಓದಿ: ಕಂಪ್ಯೂಟರ್ ಸೈನ್ಸ್ ಸೀಟ್ ಕೊಡಿಸುವುದಾಗಿ ವಂಚನೆ: ಮತ್ತಿಬ್ಬರು ಆರೋಪಿಗಳ ಬಂಧನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News