ಬೆಂಗಳೂರು: ರೇವಾ ಕಾಲೇಜಿ(Reva College)ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜನಿಯರಿಂಗ್ ಸೀಟ್(Engineering Seat) ಕೊಡಿಸುವುದಾಗಿ ಯುವತಿಗೆ ವಂಚಿಸಿದ್ದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹರ್ಷ(24) ಮತ್ತು ಚೇತನ್(27) ಬಂಧಿತ ಆರೋಪಿ(Cheating Case)ಗಳಾಗಿದ್ದಾರೆ. ಜನವರಿ 28ರಂದು ರಾಜೇಶ್ವರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳನ್ನೂ ಅರೆಸ್ಟ್ ಮಾಡಲಾಗಿದೆ. ರೇವಾ ಕಾಲೇಜಿ(Engineering College)ನಲ್ಲಿ ಕಂಪ್ಯೂಟರ್ ಸೈನ್ಸ್ ಸೀಟ್ ಕೊಡಿಸುವುದಾಗಿ ಯುವತಿಯೊಬ್ಬರಿಗೆ ಆರೋಪಿಗಳು 1.27 ಲಕ್ಷ ರೂ. ಹಣ ಪಡೆದು ವಂಚಿಸಿದ್ದರು.
ಇದನ್ನೂ ಓದಿ: ಬಿಳಿಕಲ್ಲು ಕ್ವಾರಿ ಕುಸಿತ ಪ್ರಕರಣ: ಲಾರಿಗಳೆಲ್ಲಾ ಪಲ್ಟಿ, 6 ಮಂದಿ ಸಿಲುಕಿರುವ ಶಂಕೆ
ಯುವತಿಯಿಂದ ಹಣ ಪಡೆದ ಬಳಿಕ ವಂಚಕರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದರು. ಸದ್ಯ ಬಂಧಿತರಿಂದ 7 ಲಕ್ಷ ರೂ. ನಗದು, 120 ಗ್ರಾಂ ಒಡವೆಗಳನ್ನು ಖಾಕಿಪಡೆ ವಶಕ್ಕೆ ಪಡೆದುಕೊಂಡಿದೆ. ಹರ್ಷ ಮತ್ತು ಚೇತನ್(Fraud) ಇಬ್ಬರೂ ಏರ್ಟೆಲ್ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದರು. ಸಿಮ್ ಖರೀದಿಸಲು ಬರುವರ ಬಳಿ ಒಂದಕ್ಕಿಂತಿ ಹೆಚ್ಚು ಫಾರ್ಮ್ ಗೆ ಸಹಿ ಮಾಡಿಸಿಕೊಳ್ತಿದ್ದರು. ಅಲ್ಲದೆ ಗ್ರಾಹಕರ ಬಳಿ ಒಂದಕ್ಕಿಂತ ಹೆಚ್ಚು ಫೋಟೊ ಗಳನ್ನು ಸಹ ಪಡೆದುಕೊಳ್ಳುತ್ತಿದ್ದರು. ಒಂದು ಸಿಮ್ ಕಾರ್ಡ್ ಗ್ರಾಹಕರಿಗೆ ನೀಡ್ತಿದ್ದ ಆರೋಪಿಗಳು,ಉಳಿದ ಸಿಮ್ ಕಾರ್ಡ್ ಗಳನ್ನು ಅಪರಾಧ ಕೃತ್ಯಕ್ಕೆ ಬಳಸುತ್ತಿದ್ದ ಮಾಹಿತಿ ಪೊಲೀಸರ ವಿಚಾರಣೆ(Bengaluru Police) ವೇಳೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಖಾಕಿಪಡೆ ಉನ್ನತಮಟ್ಟದ ತನಿಖೆ ಮುಂದುವರೆಸಿದೆ.
ಇದನ್ನೂ ಓದಿ: ಶ್ರೀಗಂಧ ಮರದ ಕಳ್ಳನನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.