ಬೆಂಗಳೂರು: ಸಹಕಾರ ಹಾಗೂ ರಾಜರಾಜೇಶ್ವರಿ ನಗರ ವಲಯದ ಕರೋನಾವೈರಸ್ (Coronavirus) COVID -19 ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ (ST Somashekhar) ಅವರು ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಸ್ಥಿತಿಗಳನ್ನು ಅವಲೋಕಿಸಿದರು.
ಕೊರೋನಾ ವಿರುದ್ಧದ ಯುದ್ಧದಲ್ಲಿ ಭಾರತ ಗೆಲ್ಲಲಿದೆ: ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾಸ
ಕನ್ನಲ್ಲಿ ಹಾಗೂ ಸೂಲಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ ಸಚಿವರು, ಸ್ಥಿತಿಗತಿಗಳನ್ನು ವೀಕ್ಷಿಸಿದರು. ಕೋವಿಡ್ -19 (Covid 19) ಸೋಂಕಿತರಿಗೆ ಯಾವ ರೀತಿಯ ವ್ಯವಸ್ಥೆ ಇದೆ? ಆ್ಯಂಬುಲೆನ್ಸ್ ವ್ಯವಸ್ಥೆ ಇದೆಯೇ? COVID -19 ಸೋಂಕಿತರು ಎಷ್ಟು ಮಂದಿ ಇದ್ದಾರೆ? ಹೋಂ ಕ್ವಾರೆಂಟೇನ್ (Home Quarantine)ನಲ್ಲಿದ್ದವರ ಮೇಲೆ ಯಾವ ರೀತಿ ನಿಗಾ ವಹಿಸಲಾಗುತ್ತಿದೆ? ಔಷಧಗಳ ದಾಸ್ತಾನು ಇದೆಯೇ? ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಉಪ ವಿಭಾಗಾಧಿಕಾರಿ ಶಿವಣ್ಣ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ಕರೋನಾ ಲಸಿಕೆ: ದೇಶದಲ್ಲಿ ತಯಾರಾಗಿದೆ ಅಗ್ಗದ ಮತ್ತು ಪರಿಣಾಮಕಾರಿ ಔಷಧ
ಆರೋಗ್ಯ ಕಿಟ್ ವಿತರಣೆ
ಕೋಕೋಕೋಲಾ ಫೌಂಡೇಶನ್ ಹಾಗೂ ಸಮರ್ಥನಂ ಟ್ರಸ್ಟ್ ವತಿಯಿಂದ ಬಿಬಿಎಂಪಿ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿ ಕೊಡಲಾಗುತ್ತಿರುವ ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ವಾಶ್ ಸಹಿತ ಆರೋಗ್ಯ ಕಿಟ್ ಅನ್ನು ಹೇರೋಹಳ್ಳಿ ವಾರ್ಡ್ ನಂಬರ್ 72 ರಲ್ಲಿ ಸಾಂಕೇತಿಕವಾಗಿ ಸಚಿವ ಎಸ್.ಟಿ. ಸೋಮಶೇಖರ್ ಅವರು ವಿತರಣೆ ಮಾಡಿದರು.